ETV Bharat / state

ರಾಜ್ಯದಲ್ಲಿ ನಿಂತಿರುವ ರೈಲು ಯೋಜನೆಗಳಿಗೆ ನಾಳಿನ ಬಜೆಟ್​ನಲ್ಲಿ ಸಿಗುತ್ತಾ ಚಾಲನೆ? - ಈಟಿವಿ ಭಾರತ ಕನ್ನಡ

ನಾಳೆ ಕೇಂದ್ರ ಬಜೆಟ್‌. ದೇಶದ 130 ಕೋಟಿಗೂ ಹೆಚ್ಚು ಜನರ ನಿರೀಕ್ಷೆ ಈ ಆಯವ್ಯಯದ ಮೇಲಿದೆ. ಈ ನಡುವೆ ಕರ್ನಾಟಕದ ರೈಲ್ವೇ ಯೋಜನೆಗಳಿಗೆ ಬಜೆಟ್‌ನಿಂದ ಚೈತನ್ಯ ಸಿಗುವುದೇ ಎಂಬುದನ್ನು ಕಾದುನೋಡಬೇಕು.

railway
ರೈಲು ಯೋಜನೆ
author img

By

Published : Jan 31, 2023, 1:33 PM IST

ಬೆಂಗಳೂರು: ನಾಳಿನ ಕೇಂದ್ರ ಬಜೆಟ್​ ಮೇಲೆ ರಾಜ್ಯದ ರೈಲ್ವೆ ಸೇವೆ, ಸೌಲಭ್ಯ ಆಕಾಂಕ್ಷಿಗಳ ನಿರೀಕ್ಷೆ ದೊಡ್ಡಮಟ್ಟದಲ್ಲಿದೆ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯನ್ನು ಪ್ರಮುಖವಾಗಿಟ್ಟುಕೊಂಡು ಒಂದಿಷ್ಟು ಜನಪ್ರಿಯ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಬಹುದು. ಹಳೆಯ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ತ್ವರಿತಗೊಳಿಸಲು ಚಾಲನೆ ನೀಡಬಹುದು. ಉತ್ತಮ ಆದಾಯ ತಂದುಕೊಡುತ್ತಿರುವ ರೈಲ್ವೆ ವ್ಯವಸ್ಥೆಯ ಸುಧಾರಣೆ, ನಿಲ್ದಾಣ ಅಭಿವೃದ್ಧಿ, ರೈಲ್ವೆ ಹೊಸ ಮಾರ್ಗಗಳ ಆರಂಭ, ಹಳೆ ಮಾರ್ಗಗಳ ಉನ್ನತೀಕರಣ ಸೇರಿದಂತೆ ಹಲವು ಘೋಷಣೆಗಳ ನಿರೀಕ್ಷೆ ಇದೆ.

ರಾಜ್ಯದಲ್ಲಿ ರೈಲ್ವೆ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವಾದರೂ, ಅಷ್ಟೊಂದು ಕಳಪೆ ಎನ್ನುವಂತಿಲ್ಲ. ಸುಮಾರು 10 ಸಾವಿರ ಕೋಟಿ ರೂ. ಮೊತ್ತದಲ್ಲಿ ರಾಜ್ಯದಲ್ಲಿ 9 ಹೊಸ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಲವು ಯೋಜನೆಗಳ ಕಾಮಗಾರಿ ನಿಂತಿರುವುದು ನಿಜ. ಇದಕ್ಕೆ ಕಾರಣ ಭೂ ಸ್ವಾಧೀನ ಪ್ರಕ್ರಿಯೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂವಹನ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ಇದೇ ಕಾರಣದಿಂದ ರಾಜ್ಯದ ಐದು ಯೋಜನೆಗಳು 10 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಪರಿಸರಸ್ನೇಹಿಗಳ ವಿರೋಧ ಹಿನ್ನೆಲೆಯಲ್ಲೂ ಒಂದೆರಡು ಯೋಜನೆ ನಿಂತಿವೆ.

ಎಲ್ಲೆಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಬಾಕಿ?: ಬಾಗಲಕೋಟೆ–ಕುಡಚಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು 2010-11ರಲ್ಲಾದರೂ, ಇದುವರೆಗೂ ಸರಿಯಾಗಿ ವ್ಯವಸ್ಥೆ ಆರಂಭವಾಗಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಸಮನಾಗಿ ಅನುದಾನ ಹಂಚಿಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕಿತ್ತು. ಯೋಜನೆಗೆ ಬೇಕಿರುವ ಭೂಮಿಯನ್ನು ಕರ್ನಾಟಕ ಸರ್ಕಾರ ಉಚಿತವಾಗಿ ನೀಡಬೇಕು ಎಂದು ರೈಲ್ವೆ ಇಲಾಖೆ ಷರತ್ತು ವಿಧಿಸಿತ್ತು. 142 ಕಿ.ಮೀ. ಉದ್ದದ ಈ ಮಾರ್ಗದ ಆರಂಭಿಕ ಯೋಜನಾ ಮೊತ್ತ 816 ಕೋಟಿ ರೂ. ಆಗಿತ್ತು. ಅದು ಈಗ 1,530 ಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗುತ್ತಿದೆ. ಪರಿಷ್ಕೃತ ಯೋಜನಾ ಮೊತ್ತ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಮತಕ್ಕೆ ಬಂದಿಲ್ಲ. ಈ ಮಾರ್ಗವನ್ನು 2016ರಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಈವರೆಗೆ ಈ ಕಾಮಗಾರಿಗೆ ಯೋಜನಾ ಮೊತ್ತದ ಶೇ. 25ರಷ್ಟು ವೆಚ್ಚ ಮಾಡಲಾಗಿದ್ದು, ಭೌತಿಕ ಪ್ರಗತಿ ಶೇ. 32ರಷ್ಟು ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಾಮಗಾರಿ 2026ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬಹುದು ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ಇದನ್ನೂ ಓದಿ: ಜಾಗತಿಕ ಅಸ್ಥಿರತೆಯ ನಡುವೆ ಇಡೀ ವಿಶ್ವ ಭಾರತದ ಬಜೆಟ್‌ ಮೇಲೆ ಕಣ್ಣಿಟ್ಟಿದೆ: ಪ್ರಧಾನಿ ಮೋದಿ

ಮಲೆನಾಡು ಭಾಗದ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಕಡೂರು–ಚಿಕ್ಕಮಗಳೂರು–ಸಕಲೇಶಪುರ ಬ್ರಾಡ್‌ಗೇಜ್‌ ರೈಲು ಮಾರ್ಗ 2017ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಕಾಮಗಾರಿಯನ್ನು 2026ರ ಡಿಸೆಂಬರ್‌ಗೆ ಮುಗಿಸುವ ಗಡುವು ವಿಧಿಸಲಾಗಿದೆ. ಮಾರ್ಗ ನಿರ್ಮಾಣಕ್ಕೆ ರಾಜ್ಯದ ಪಾಲಿನ ಬಾಕಿ ಮೊತ್ತವಾದ 67.68 ಕೋಟಿಯನ್ನು ಕರ್ನಾಟಕ ಸರ್ಕಾರ ಠೇವಣಿ ಇಟ್ಟಿಲ್ಲ. ಈ ವಿಷಯಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಬೇಕು ಎಂದು ಕೇಂದ್ರ ಸೂಚಿಸಿತ್ತು. ಇದೀಗ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿ ನೀಡುವುದೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಕಡೂರು-ಚಿಕ್ಕಮಗಳೂರು-ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಉದ್ದ 93 ಕಿ.ಮೀ.ಗಳು. 1996-97ರಲ್ಲಿ ಈ ಯೋಜನೆಯ ಅಂದಾಜು ವೆಚ್ಚ 157 ಕೋಟಿ ರೂ. ಆಗಿತ್ತು. ಕಡೂರು-ಚಿಕ್ಕಮಗಳೂರು ಮಾರ್ಗದ 45 ಕಿ.ಮೀ. ಕಾಮಗಾರಿ 1999-2000ರಲ್ಲಿ ಆರಂಭವಾಗಿ 2013ರ ನವೆಂಬರ್​ನಲ್ಲಿ ಕೊನೆಗೊಂಡು ರೈಲು ಸಂಚಾರ ಆರಂಭವಾಗಿದೆ. ಉಳಿದ ಮಾರ್ಗ ಹಾಗೆಯೇ ಉಳಿದಿದೆ. ಇನ್ನೂ 213 ಕಿ.ಮೀ. ಉದ್ದದ ರಾಯದುರ್ಗ–ಕಲ್ಯಾಣದುರ್ಗ– ತುಮಕೂರು ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿ 15 ವರ್ಷ ಕಳೆದರೂ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ.

ಈ ಸಲ ಬಜೆಟ್​ನಲ್ಲಿ ತೆವಳುತ್ತಾ ಸಾಗಿರುವ ಯೋಜನೆಗಳಾದ ಮುನಿರಾಬಾದ್​-ಮೆಹಬೂಬ್​ನಗರ, ತುಮಕೂರು-ರಾಯದುರ್ಗ, ಚಿಕ್ಕಮಗಳೂರು -ಬೇಲೂರು, ಕುಡಚಿ-ಬಾಗಲಕೋಟೆ, ಗದಗ-ವಾಡಿ, ತುಮಕೂರು-ದಾವಣಗೆರೆ, ಬೇಲೂರು-ಹಾಸನ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹಾಗೂ ಧಾರವಾಡ- ಕಿತ್ತೂರು- ಬೆಳಗಾವಿ ಮಾರ್ಗಗಳ ವಿಚಾರದಲ್ಲಿ ಕೇಂದ್ರದಿಂದ ಧನಾತ್ಮಕ ಪ್ರತಿಕ್ರಿಯೆ ಲಭಿಸುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.