ETV Bharat / state

ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ದರ್ಶನ್​​ ಅವರನ್ನು ಕೈ ಬಿಡಲ್ಲ : ಸಚಿವ ಬಿ ಸಿ ಪಾಟೀಲ್ ಸ್ಪಷ್ಟನೆ

ನಟ ದರ್ಶನ್ ಒಳ್ಳೆಯ ವ್ಯಕ್ತಿ. ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ಅವರನ್ನು ಕೈ ಬಿಡಲ್ಲ..

minister BC Patil and actor darshan
ಸಚಿವ ಬಿ.ಸಿ.ಪಾಟೀಲ್ ಹಾಗೂ ನಟ ದರ್ಶನ್​​
author img

By

Published : Jul 16, 2021, 4:26 PM IST

ಬೆಂಗಳೂರು : ನಟ ದರ್ಶನ್ ಅವರ ತೇಜೋವಧೆ ಮಾಡಲು ಯತ್ನ‌ ನಡೆಯುತ್ತಿದೆ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದರು. ವಿಕಾಸಸೌಧದಲ್ಲಿ ನಟ ದರ್ಶನ್ ಹಾಗೂ ಇಂದ್ರಜಿತ್ ನಡುವೆ ಕಿತ್ತಾಟ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.

ನಟ ದರ್ಶನ್ ಒಳ್ಳೆಯ ವ್ಯಕ್ತಿ. ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಅವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ಹೊಸಬರನ್ನು ಚಿತ್ರರಂಗದಲ್ಲಿ ದರ್ಶನ್ ಪ್ರೋತ್ಸಾಹ ಮಾಡ್ತಿದಾರೆ. ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ಅವರನ್ನು ತಾವು ಕೈಬಿಡಲ್ಲ.

ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ

ಪೊಲೀಸ್​​ ಇಲಾಖೆ ಯಾರ ಕೈಯಲ್ಲೂ ಇಲ್ಲ. ಅವರ ಕೆಲಸ ಅವರು ಮಾಡ್ತಾರೆ. ರೆಕ್ಕೆ ಪುಕ್ಕ ಹುಟ್ಟಿಕೊಳ್ತಾವೆ ಎಂಬ ಮಾತಿಗೆ ಹಾಗಂದಿದ್ದಾರೆ. ಅವರು ತಲೆ ಕಡಿಯುವೆ ಅಂದಿದ್ದಾರೆ ಅಷ್ಟೇ.. ಅದು ಯಾರನ್ನೂ ಗಮನದಲ್ಲಿಟ್ಟುಕೊಂಡು ಹೇಳಿದ ಮಾತಲ್ಲ ಎಂದು ಸಚಿವ ಬಿ ಸಿ ಪಾಟೀಲ್ ಅವರು ದರ್ಶನ್ ಅವರನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ದರ್ಶನ್​ ಪ್ರಕರಣ: ಗಂಗಾಧರ್ ಹೇಳಿಕೆಯನ್ನ ಪಿನ್ ಟೂ ಪಿನ್ ದಾಖಲಿಸುತ್ತಿರುವ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.