ಆನೇಕಲ್: ಬೆಂಗಳೂರು-ಹೊಸೂರು ಹೆದ್ದಾರಿಯ ಹಳೆ ಚಂದಾಪುರದ ಸುತ್ತ ಎರೆಡು ಕಾಡೆಮ್ಮೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಿಗೆ ಆತಂಕ ಮೂಡಿಸಿದರೆ, ಪ್ರಾಣಿ ಪ್ರಿಯರಿಗೆ ಕುತೂಹಲ ಮೂಡಿತು.
ಆನೇಕಲ್ಗೆ, ಬನ್ನೇರುಘಟ್ಟ-ತಮಿಳುನಾಡಿನ ಕಾಡು ಹತ್ತಿರವಿರುವುದರಿಂದ ಆಗಾಗ ಪ್ರಾಣಿಗಳು ನಾಡಿನತ್ತ ಭೇಟಿ ನೀಡುತ್ತಿರುತ್ತವೆ. ಇಂದೂ ಕೂಡ ಬೆಂಗಳೂರು-ಹೊಸೂರು ಹೆದ್ದಾರಿಯ ಹಳೆ ಚಂದಾಪುರದ ಬಳಿ ಎರೆಡು ಕಾಡೆಮ್ಮೆಗಳು ಸಾರ್ವಜನಿಕರಿಗೆ ದರ್ಶನ ನೀಡಿವೆ.
ಅಪರೂಪವಾಗಿ ಇತ್ತ ಕಡೆ ಸುಳಿದಿರೋ ಕಾಡೆಮ್ಮೆಗಳು ಜನರಿಗೆ ವಿಶೇಷವಾಗಿ ಕಂಡು ಅಚ್ಚರಿ ಮೂಡಿಸಿವೆ. ಆನೆ, ಜಿಂಕೆ, ನವಿಲು ಸಹಜವಾಗಿ ನಾಡಿನಲ್ಲಿ ಕಾಣುತ್ತಿರುತ್ತವೆ. ಆದರೆ ಈ ಬಾರಿ ಕಾಡೆಮ್ಮೆ ಕಂಡುಬಂದಿದ್ದು, ಸ್ಥಳೀಯರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ವಿಷಯ ತಿಳಿದ ಆನೇಕಲ್ ಅರಣ್ಯಾಧಿಕಾರಿಗಳು ಕಾಡೆಮ್ಮೆ ಇರುವ ಸ್ಥಳದತ್ತ ತೆರಳಿದ್ದಾರೆ.