ETV Bharat / state

ಚಾಕೊಲೇಟ್​ ತರಲು ತಡ ಮಾಡಿದ ಪತಿ: ಬೆಂಗಳೂರಲ್ಲಿ ಪತ್ನಿ ಆತ್ಮಹತ್ಯೆ - Etv Bharat Kannada

ಪತಿ ಚಾಕೊಲೇಟ್​​ ಕೊಡಲು ತಡ ಮಾಡಿದ​ ಕಾರಣ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೃಹಿಣಿ ಆತ್ಮಹತ್ಯೆ
ಚಾಕೊಲೇಟ್​ ತರಲು ತಡ ಮಾಡಿದ ಪತಿ: ಬೆಂಗಳೂರಲ್ಲಿ ಪತ್ನಿ ಆತ್ಮಹತ್ಯೆ
author img

By

Published : Apr 7, 2023, 1:31 PM IST

Updated : Apr 7, 2023, 6:26 PM IST

ಬೆಂಗಳೂರು: ಗಂಡ ಚಾಕೊಲೇಟ್​ ತಂದು ಕೊಡಲು ವಿಳಂಬ ಮಾಡಿದ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ‌ (24) ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ವರ್ಷದ ಹಿಂದೆ ಗೌತಮ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದ ನಂದಿನಿ‌ಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಗೌತಮ್ ಸಲೂನ್​ನಲ್ಲಿ ಕೆಲಸ ಮಾಡಿಕೊಂಡಿದ್ದ.

ಎಂದಿನಂತೆ ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಗೌತಮ್ ಬಳಿ ಚಾಕೊಲೇಟ್​ ತಂದು ಕೊಡುವಂತೆ ನಂದಿನಿ ಕೇಳಿದ್ದಳು. ಕೆಲಸದಲ್ಲಿ ನಿರತನಾಗಿದ್ದ ಗೌತಮ್ ಮಧ್ಯಾಹ್ನವಾದರೂ ಚಾಕೊಲೇಟ್​ ತಂದು ಕೊಟ್ಟಿರಲಿಲ್ಲ.‌ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದಾಗ ಪತ್ನಿ ಕರೆ ಸ್ವೀಕರಿಸಿರಲಿಲ್ಲ. ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆಯಾದರೂ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.

ದಂಪತಿ ಆತ್ಮಹತ್ಯೆ : ಇನ್ನೊಂದೆಡೆ, ಕೌಟುಂಬಿಕ ಕಲಹದ ಹಿನ್ನೆಲೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಸಂದ್ರದ ಮನೆಯೊಂದರಲ್ಲಿ ಗುರುವಾರ ಸಂಜೆ ನಡೆದಿದೆ. ನಂದಿನಿ (40) ಜಗದೀಶ್ (37) ಆತ್ಮಹತ್ಯೆಗೆ ಶರಣಾದ ದಂಪತಿ. ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು ಮೂಲದ ದಂಪತಿ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಚೊಕ್ಕಸಂದ್ರದ ಮನೆಯೊಂದರಲ್ಲಿ ಮೃತ ದಂಪತಿ ವಾಸವಾಗಿದ್ದರು. ಪತಿ ಜಗದೀಶ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಪತ್ನಿ ನಂದಿನಿ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್​ ಸ್ಟೇಟಸ್​​ ಹಾಕಿ ಯುವಕ ಆತ್ಮಯತ್ಯೆ - ನೆಲ್ಯಾಡಿ(ದಕ್ಷಿಣ ಕನ್ನಡ): ಆತ್ಮಹತ್ಯೆ ಕುರಿತು ಮೊಬೈಲ್‌ ಫೋನ್‌ನಲ್ಲಿ ಸ್ಟೇಟಸ್ ಹಾಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ಮಾ.31 ರಂದು ನಡೆದಿತ್ತು. ರೆನೀಶ್ (27) ಮೃತ ಯುವಕ. ಮೃತ ಯುವಕನ ತಂದೆ ಸಹ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಲ್ಲದೇ ಈತನ ಸಹೋದರ ಕೂಡ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲಿ ರೆನೀಶ್ ಒಬ್ಬರೆ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದರು.

ಆತ್ಮಹತ್ಯೆಗೂ ಹಿಂದಿನ ದಿನ ರಾತ್ರಿಬ ಪಕ್ಕದ ಮನೆಯಲ್ಲಿ ಊಟ ಮಾಡಿ ಮನೆಗೆ ಹೋಗಿದ್ದ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ರೆನೀಶ್​ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಸ್ಟೇಟಸ್ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿಯ ಗೆಳೆಯರು, ರೆನಿಶ್​ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ವಿಚಾರ ತಿಳಿದು ಮನೆ ಹೋಗಿ ನೋಡಿದಾಗ ರೆನಿಶ್​ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ

Last Updated : Apr 7, 2023, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.