ಬೆಂಗಳೂರು: ಬರೋಬ್ಬರಿ 20ನೇ ಅಂತಸ್ತಿನ ಮಹಡಿಯಿಂದ 12 ವರ್ಷದ ಮಗುವಿನ ಜತೆ ತಾಯಿ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 5ರಂದು ನಗರದ ಬೆಂಗಳೂರಿನ ಎಲೈಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಮಾಡೆಲ್ ಆಗಿದ್ದ ಜ್ಯೋತಿ ಹಾಗೂ ಅವರ 12 ವರ್ಷದ ಮಗು ಮೃತಪಟ್ಟಿದ್ದು, ಆತ್ಮಹತ್ಯೆಗೂ ಮುನ್ನ ಪತಿ ಪಂಕಜ್ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋ ಆಧರಿಸಿ ಮೃತ ಮಾಡೆಲ್ನ ಸಹೋದರ ಪ್ರಶಾಂತ್, ಪಂಕಜ್ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪಂಕಜ್ನನ್ನು ಬಂಧಿಸಲಾಗಿದೆ.