ETV Bharat / state

ಮೃತ ಮಗನ ಪಾಲಿನ ಆಸ್ತಿಯಲ್ಲಿ ವಿಧವೆ ತಾಯಿಗೂ ಪಾಲು ನೀಡಬೇಕು: ಹೈಕೋರ್ಟ್ - ಆಸ್ತಿ ಪಾಲು ಹೈಕೋರ್ಟ್ ತೀರ್ಪು

ಮೃತ ಮಗನ ಪಾಲಿನ ಆಸ್ತಿಯಲ್ಲಿ ತಾಯಿಗೂ ಸಮಾನ ಪಾಲಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Oct 27, 2022, 9:31 PM IST

ಬೆಂಗಳೂರು: ಗಂಡನ ನಿಧನದ ಬಳಿಕ ವಿಧವೆಯು ತನ್ನ ಪತಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡುವ ವೇಳೆ ಗಂಡು ಮಕ್ಕಳಲ್ಲಿ ಯಾವುದೇ ಮಗ ಮೃತಪಟ್ಟಿದ್ದರೆ ಆತನ ಪಾಲಿಗೆ ಬಂದಿರುವ ಆಸ್ತಿಯಲ್ಲಿ ತಾಯಿ ಸಮಾನ ಪಾಲು ಪಡೆಯಬಹುದು ಎಂದು ಹೈಕೋರ್ಟ್ ತಿಳಿಸಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ ಪ್ರಕಾರ ಮೃತ ಮಗನಿಗೆ ಬಂದಿರುವ ಆಸ್ತಿಯನ್ನು ಆತನ ಪತ್ನಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಬೇಕು. ಅದರ ಜೊತೆಗೆ, ವಿಧವೆ ತಾಯಿಗೂ ಸಮಾನ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಬೀದರ್​​ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ವಿಚಾರಣೆ ನಡೆಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ಹನುಮಂತ ರೆಡ್ಡಿ ಹಾಗೂ ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ, ರೇವಮ್ಮ ಹಾಗೂ ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದರು. ತಂದೆ ಹನುಮಂತ ರೆಡ್ಡಿ ಹಾಗೂ ಪುತ್ರ ಭೀಮರೆಡ್ಡಿ ಮೃತಪಟ್ಟಿರುತ್ತಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿ, ಮಕ್ಕಳ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಈ ವಿಚಾರ ಬೀದರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಅಲ್ಲಿ ಬಂದ ತೀರ್ಪು ಸಮಾಧಾನ ತರದ ಹಿನ್ನೆಲೆಯಲ್ಲಿ ತಾಯಿ, ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು.

ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಪೀಠ, ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಆಸ್ತಿ ಹಂಚಿಕೆ ಮಾಡಬೇಕಾಗುತ್ತದೆ. ಹೀಗಾಗಿ ಆಸ್ತಿ ಹಂಚಿಕೆ ವೇಳೆ ಪತಿಯ ಪಾಲಿಗೆ ಬರಬೇಕಾದ ಆಸ್ತಿಯಲ್ಲಿ ಆಕೆಗೆ ಭಾಗಶಃ ಪಾಲು ನೀಡಲಾಗುತ್ತದೆ. ಇದರನ್ವಯ, ಈ ಪ್ರಕರಣದಲ್ಲಿ ಮೃತಪಟ್ಟ ಮಗನ ಆಸ್ತಿಯ ಪಾಲಿನಲ್ಲಿಯೂ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಮೊದಲ ಹಂತದಲ್ಲಿ, ಹನುಮಂತ ರೆಡ್ಡಿಯವರ ಆಸ್ತಿಯನ್ನು ಖುದ್ದು ಹನುಮಂತ ರೆಡ್ಡಿ ಹಾಗೂ ಅವರ ನಾಲ್ವರು ಮಕ್ಕಳು ಸೇರಿ 5 ಪಾಲು ಮಾಡಬೇಕು. ಅಲ್ಲಿಗೆ, ಖುದ್ದು ಹನುಮಂತ ರೆಡ್ಡಿ ಹಾಗೂ ನಾಲ್ವರು ಮಕ್ಕಳಿಗೆ ತಲಾ 1/5ರಷ್ಟು ಆಸ್ತಿ ಹಂಚಿಕೆಯಾಗಲಿದೆ. ಎರಡನೇ ಹಂತದಲ್ಲಿ, ಹನುಮಂತ ರೆಡ್ಡಿಯವರಿಗೆ ಬಂದಿರುವ 1/5ರಷ್ಟು ಆಸ್ತಿಯನ್ನು ಅವರ ಪತ್ನಿ ಈರಮ್ಮ ಹಾಗೂ ಮಕ್ಕಳಿಗೆ ಸಮಾನವಾಗಿ ಪಾಲು ಮಾಡಬೇಕು. ಆಗ, ಪ್ರತಿಯೊಬ್ಬರಿಗೂ 1/25ರಷ್ಟು ಆಸ್ತಿ ಸಿಗುತ್ತದೆ. ಅಲ್ಲಿಗೆ, ಪ್ರತಿಯೊಬ್ಬ ಮಕ್ಕಳಿಗೆ ಅವರ ಪಾಲಿಗೆ ಬಂದ 1/5 ಹಾಗೂ ಅಪ್ಪನ ಪಾಲಿನ ಆಸ್ತಿಯಿಂದ ಬಂದ 1/25ರಷ್ಟು ಆಸ್ತಿ ಸೇರಿ ಒಟ್ಟು 6/25ರಷ್ಟು ಆಸ್ತಿಗೆ ಹಕ್ಕುದಾರರಾಗುತ್ತಾರೆ ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಜೊತೆಗೆ, ಮೂರನೇ ಹಂತದ ಆಸ್ತಿ ಹಂಚಿಕೆಯಡಿ, ದಿವಂಗತರಾಗಿರುವ ಭೀಮರೆಡ್ಡಿಗೆ ಬಂದಿರುವ 6/25ರಷ್ಟು ಆಸ್ತಿಯಲ್ಲಿ ಭೀಮರೆಡ್ಡಿ ಪತ್ನಿ, ಪುತ್ರಿಗೆ ಹಾಗೂ ತಾಯಿ ಈರಮ್ಮನವರಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಆಗ, ಈರಮ್ಮನವರಿಗೆ, ತನ್ನ ಪತಿಯ ಪಾಲಿಗೆ ಬಂದಿದ್ದ ಆಸ್ತಿಯಿಂದ ಬಂದಿರುವ ಭಾಗಶಃ ಆಸ್ತಿ ಹಾಗೂ ಪುತ್ರ ಭೀಮರೆಡ್ಡಿಯವರ ಪಾಲಿಗೆ ಬಂದಿದ್ದ ಆಸ್ತಿಯಲ್ಲಿನ ಭಾಗ ಸೇರಿ ಒಟ್ಟು 6/75ರಷ್ಟು ಆಸ್ತಿ ಸಿಗುತ್ತದೆ. ಇದೇ ಮಾದರಿಯಲ್ಲೇ ವಿಧವೆ ಈರಮ್ಮನವರಿಗೆ ಆಸ್ತಿ ಹಂಚಿಕೆ ಮಾಡಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ಜಮೀನು ಒತ್ತುವರಿ, ಕಟ್ಟಡ ನಿರ್ಮಾಣ.. ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.