ETV Bharat / state

ಜವಾಹರಲಾಲ್ ನೆಹರೂ ವಿವಿ ಮರುನಾಮಕರಣ ವಿಚಾರ: ಸಿ.ಟಿ.ರವಿ ಟ್ವೀಟ್​ಗೆ ನೆಟ್ಟಿಗರಿಂದ ವ್ಯಾಪಕ ಟೀಕೆ

author img

By

Published : Nov 16, 2020, 8:23 PM IST

ಜವಾಹರಲಾಲ್ ನೆಹರೂ ವಿವಿ ಹೆಸರನ್ನು ಸ್ವಾಮಿ ವಿವೇಕಾನಂದ ವಿವಿ ಎಂದು ಬದಲಿಸುವ ಅಗತ್ಯವಿದೆ ಎಂಬ ಸಿ.ಟಿ.ರವಿ ಟ್ವೀಟ್​ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

CT Ravi
ಬಿಜೆಪಿ‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಬೆಂಗಳೂರು: ರಾಜ್ಯ ಸರ್ಕಾರದ ಜವಾಬ್ದಾರಿಯಿಂದ ರಾಷ್ಟ್ರೀಯ ಸಂಘಟನೆಗೆ ಬಡ್ತಿ ಪಡೆಯುತ್ತಿದ್ದಂತೆ ದೆಹಲಿಯ ಜವಾಹರಲಾಲ್ ನೆಹರೂ ವಿವಿ ಹೆಸರನ್ನು ಸ್ವಾಮಿ ವಿವೇಕಾನಂದ ವಿವಿ ಎಂದು ಬದಲಿಸುವ ಅಗತ್ಯವಿದೆ ಎಂದು ಬಿಜೆಪಿ‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್​ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಿ.ಟಿ.ರವಿ ಟ್ವೀಟ್​ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

  • It is Swami Vivekananda who stood for the "Idea of Bharat". His philosophy & values signify the "Strength of Bharat".

    It is only right that Jawaharlal Nehru University be renamed as Swami Vivekananda University.

    Life of Bharat's patriotic Saint will inspire generations to come.

    — C T Ravi 🇮🇳 ಸಿ ಟಿ ರವಿ (@CTRavi_BJP) November 16, 2020 " class="align-text-top noRightClick twitterSection" data=" ">

ಭಾರತ ಕಲ್ಪನೆಯ ನಿಲುವಿನಲ್ಲಿ ಸ್ವಾಮಿ ವಿವೇಕಾನಂದ ನಿಂತಿದ್ದರು. ಅವರ ತತ್ವಶಾಸ್ತ್ರ ಮತ್ತು ಮೌಲ್ಯಗಳು ಭಾರತದ ಸಾಮರ್ಥ್ಯವನ್ನು ಸೂಚಿಸುತ್ತವೆ. ಹಾಗಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವುದು ಸರಿ. ಭಾರತದ ದೇಶಭಕ್ತ ಸಂತನ ಜೀವನವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಜವಾಹರಲಾಲ್ ನೆಹರೂ ವಿವಿ ಹೆಸರು ಬದಲಿಸುವ ಕೂಗನ್ನು ಹುಟ್ಟುಹಾಕಿದ್ದಾರೆ.

ಸಿ.ಟಿ.ರವಿ ಅವರ ಈ ಟ್ವೀಟ್​​ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ನೆಹರೂ ವಿವಿ ರೀತಿ ಗುಣಮಟ್ಟದ ಒಂದೇ ಒಂದು ವಿವಿಯನ್ನು ವಿವೇಕಾನಂದರ ಹೆಸರಿನಲ್ಲಿ ನಿಮ್ಮಿಂದ ಯಾಕೆ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.