ETV Bharat / state

ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಾತುರಿ ಯಾಕೆ?: ಅರುಣ್ ಸಿಂಗ್ ಪ್ರಶ್ನೆ - Arun Singh in charge of the state

ಸಂಪುಟ ವಿಸ್ತರಣೆ ವಿಚಾರವನ್ನು ಸಿಎಂ ಅವರೇ ನಿರ್ಧರಿಸಬೇಕು. ಈ ಸಂಬಂಧ ಚರ್ಚೆ, ಕೆಲಸಗಳು ಮುಂದುವರೆದಿವೆ ಈ ಬಗ್ಗೆ ಯಾಕಿಷ್ಟು ತರಾತುರಿಯಲ್ಲಿದ್ದೀರಿ ಎಂದು ಮಾಧ್ಯಮಗಳನ್ನೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಶ್ನಿಸಿದರು.

Why hurrying for cabinet expansion: Arun Singh
ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಾತುರಿ ಯಾಕೆ: ಅರುಣ್ ಸಿಂಗ್
author img

By

Published : Dec 6, 2020, 11:58 AM IST

Updated : Dec 6, 2020, 12:10 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾಕಿಷ್ಟು ತರಾತುರಿಯಲ್ಲಿದ್ದೀರಿ ಎಂದು ಮಾಧ್ಯಮಗಳನ್ನೇ ಪ್ರಶ್ನಿಸುವ ಮೂಲಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಂಪುಟ ವಿಸ್ತರಣೆ ವಿಳಂಬ ಸಾಧ್ಯತೆ ಕುರಿತು ಸುಳಿವು ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ತರಾತುರಿ ಯಾಕೆ?: ಅರುಣ್ ಸಿಂಗ್ ಪ್ರಶ್ನೆ

ಗೋವಿಂದರಾಜ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಂಪುಟ ವಿಸ್ತರಣೆ ವಿಚಾರವನ್ನು ಸಿಎಂ ಅವರೇ ನಿರ್ಧರಿಸಬೇಕು. ಈ ಸಂಬಂಧ ಚರ್ಚೆ, ಕೆಲಸಗಳು ಮುಂದುವರೆದಿವೆ ಎಂದರು.

ಸಿಎಂ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಸಿಎಂ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿ, ಸಂಪುಟ ವಿಸ್ತರಣೆ ಬಗ್ಗೆ ನೀವೆಲ್ಲ ಯಾಕೆ ಇಷ್ಟೊಂದು ತರಾತುರಿಯಲ್ಲಿದ್ದೀರಿ ಎಂದು ಮಾಧ್ಯಮಗಳನ್ನೇ ಮರು ಪ್ರಶ್ನೆ ಮಾಡಿದ್ದಾರೆ.

Last Updated : Dec 6, 2020, 12:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.