ETV Bharat / state

ರಾಜ್ಯಸಭೆ ಚುನಾವಣೆ: ಮತಗಳ ಕೊರತೆ ನಡುವೆಯೂ ಜೆಡಿಎಸ್​ ಅಭ್ಯರ್ಥಿ ಯಾರು? - JDS candidate for rajya sabha election

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಕುಮಾರಸ್ವಾಮಿ ಸೇರಿದಂತೆ ಕೆಲವು ಮುಖಂಡರು ಸಮಾಲೋಚನೆ ನಡೆಸಿದ್ದು, ಕುಪೇಂದ್ರ ರೆಡ್ಡಿಗೆ ಟಿಕೆಟ್ ನೀಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

who-will-get-rajya-sabha-ticket-from-jds
ರಾಜ್ಯಸಭೆ ಚುನಾವಣೆ: ಮತಗಳ ಕೊರತೆ ನಡುವೆಯೂ ಜೆಡಿಎಸ್​ ಅಭ್ಯರ್ಥಿ ಯಾರು?
author img

By

Published : May 29, 2022, 10:35 AM IST

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಎಸ್‍, ಅವಶ್ಯಕ ಮತಗಳ ಕೊರತೆಯ ನಡುವೆಯೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿದೆ. ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಅಧಿಕಾರವನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ನೀಡಲಾಗಿತ್ತು. ಪದ್ಮನಾಭನಗರದ ಗೌಡರ ನಿವಾಸದಲ್ಲಿ ಶನಿವಾರ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲವು ಮುಖಂಡರು ಸಮಾಲೋಚನೆ ನಡೆಸಿದ್ದು, ಕುಪೇಂದ್ರ ರೆಡ್ಡಿಗೆ ಟಿಕೆಟ್ ನೀಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

ಆದರೆ, ಇದಕ್ಕೆ ಅಂತಿಮ ಮುದ್ರೆ ಬೀಳುವುದು ಮಾತ್ರ ಬಾಕಿ ಇದೆ. ಮೇ 31ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫಾರೂಕ್ ಮನವೊಲಿಕೆ: ವಿಧಾನಪರಿಷತ್‌ನ ಹಾಲಿ ಸದಸ್ಯ ಬಿ.ಎಂ.ಫಾರೂಕ್ ಕೂಡ ರಾಜ್ಯಸಭೆಗೆ ಆಕಾಂಕ್ಷಿಯಾಗಿದ್ದರು. ಫಾರೂಕ್ ಅವಧಿಯು ಇನ್ನೂ ಎರಡು ವರ್ಷಗಳ ಕಾಲ ಇದೆ. ಒಂದು ವೇಳೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಆ ಸ್ಥಾನವು ಪಕ್ಷದಿಂದ ಕೈತಪ್ಪುವ ಸಾಧ್ಯತೆ ಇದೆ. ಈ ಬಗ್ಗೆ ಲೆಕ್ಕಾಚಾರ ಹಾಕಿದ ದೇವೇಗೌಡರು, ಮುಂದಿನ ದಿನದಲ್ಲಿ ಒಳ್ಳೆಯ ಅವಕಾಶಗಳು ಲಭಿಸಲಿದೆ. ರಾಜ್ಯಸಭೆಗೆ ಬೇಡ ಎಂದು ಫಾರೂಕ್ ಅವರನ್ನು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡರೂ ಅಗತ್ಯ ಮತಗಳು ಇಲ್ಲ. ಆಡಳಿತರೂಢ ಬಿಜೆಪಿ ಎರಡು ಮತ್ತು ಪ್ರತಿಪಕ್ಷ ಕಾಂಗ್ರೆಸ್ ಒಂದು ಸ್ಥಾನ ಸುಲಭವಾಗಿ ಗೆಲುವು ಸಾಧಿಸಲಿದೆ. ನಾಲ್ಕನೇ ಸ್ಥಾನಕ್ಕೆ ಈಗ ಸೆಣಸಾಟ ಶುರುವಾಗಿದೆ.

ಹೆಚ್ಚುವರಿ ಮತಗಳತ್ತ ಚಿತ್ತ: ವಿಧಾನಸಭೆಯಲ್ಲಿ ಜೆಡಿಎಸ್ 32 ಮತಗಳನ್ನು ಹೊಂದಿದೆ. ಒಟ್ಟು 46 ಮತಗಳ ಅಗತ್ಯ ಇದೆ. ಇನ್ನು 14 ಮತಗಳ ಕೊರತೆ ಇದ್ದು, ಕುಪೇಂದ್ರ ರೆಡ್ಡಿ ಅವರು ತಮ್ಮ ಶಕ್ತಿಗನುಗುಣವಾಗಿ ಹೆಚ್ಚುವರಿ ಮತಗಳನ್ನು ಗಳಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್‌ನ ಹೆಚ್ಚುವರಿ ಮತಗಳನ್ನು ಪಡೆಯಲು ದೇವೇಗೌಡ ಅವರು ಆಸಕ್ತಿ ತೋರಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ಸಿಗರಿಗೆ ಜೆಡಿಎಸ್‌ಗೆ ಮತ ನೀಡಲು ಮನಸ್ಸಿಲ್ಲ. ಇನ್ನು ಆಡಳಿತರೂಢ ಬಿಜೆಪಿ ಹೆಚ್ಚುವರಿ ಮತಗಳನ್ನು ಪಡೆದುಕೊಂಡರೆ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬೀಳುವ ಸಾಧ್ಯತೆ ಇದೆ ಎಂಬ ಅಂಶಗಳ ಕುರಿತು ಚರ್ಚಿಸಲಾಗಿದೆ ಎನ್ನಲಾಗಿದೆ.

ನಾಮಪತ್ರ ಸಲ್ಲಿಕೆಗೆ ನಾಲ್ಕು ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಯಾವ ಪಕ್ಷದಿಂದ ಹೆಚ್ಚುವರಿ ಮತಗಳನ್ನು ಕುಪೇಂದ್ರ ರೆಡ್ಡಿ ಅವರು ಪಡೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ನೀಡಿದರೆ ಮಾತ್ರ ಜೆಡಿಎಸ್ ಗೆಲುವು ಸುಲಭವಾಗಲಿದೆ.

ನಾಲ್ಕನೇ ಅಭ್ಯರ್ಥಿಗೆ ಮೂರು ಪಕ್ಷಗಳಿಗೂ ಮತಗಳ ಕೊರತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಪೈಕಿ ಒಂದು ಪಕ್ಷವು ಜೆಡಿಎಸ್‌ಗೆ ಹೆಚ್ಚುವರಿ ಮತಗಳನ್ನು ನೀಡಿದರೆ ಮಾತ್ರ ನಾಲ್ಕನೇ ಅಭ್ಯರ್ಥಿ ರಾಜ್ಯಸಭೆಗೆ ಪ್ರವೇಶಿಸಲು ಸಾಧ್ಯ. ಇಲ್ಲವಾದಲ್ಲಿ ನಾಲ್ಕನೇ ಅಭ್ಯರ್ಥಿ ರಾಜ್ಯಸಭೆಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಉತ್ತರಕ್ಕೆ ನಿರ್ಮಲಾ, ಹಿಂದೆ ಸರಿದ ಸುರಾನಾ: ಬಿಜೆಪಿಯಿಂದ ಮತ್ತೊಮ್ಮೆ ಅಚ್ಚರಿ ಆಯ್ಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.