ETV Bharat / state

ಸಿದ್ದರಾಮಯ್ಯ 5 ವರ್ಷ ಪೂರೈಸಿದರೆ ತಪ್ಪೇನು? ಈ ವಿಚಾರ ಹೈಕಮಾಂಡ್​​​ಗೆ ಬಿಟ್ಟಿದ್ದು: ಬಸವರಾಜ್ ರಾಯರೆಡ್ಡಿ - ಮುಸ್ಲಿಮರಿಗೆ ಶೇ 4 ಮೀಸಲಾತಿ

ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದವರು ತಮ್ಮ ನಾಯಕರ ಬಳಿ ಲಾಬಿ ಆರಂಭಿಸಿದ್ದಾರೆ.

Former Minister Basavaraj Rayareddy
ಮಾಜಿ ಸಚಿವ ಬಸವರಾಜ ರಾಯರೆಡ್ಡಿ
author img

By

Published : May 21, 2023, 6:06 PM IST

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಸೇರಲು ತೀವ್ರ ಪ್ರಮಾಣದಲ್ಲಿ ಕಸರತ್ತು ನಡೆಸಿರುವ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹಾಗೂ ಹೆಚ್ ವೈ ಮೇಟಿ ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಮಾಲೋಚಿಸಿದ್ದಾರೆ. ಶಿವಾನಂದ ವೃತ್ತ ಸಮೀಪ ಇರುವ ಸಿಎಂ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಉಭಯ ನಾಯಕರು ಸಮಾಲೋಚನೆ ನಡೆಸಿ ತೆರಳಿದ್ದಾರೆ.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, 30:30 ಸೂತ್ರ ಅನುಸರಣೆ ಮಾಡುತ್ತಾರಾ ಇಲ್ಲಾ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಐದು ವರ್ಷ ಸಿಎಂ ಸಿದ್ದರಾಮಯ್ಯ ಅವರು ಆದ್ರೆ ತಪ್ಪೇನು ? ಈ ವಿಚಾರ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.

ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ವಿಶ್​​ ಮಾಡಿ ಬಂದೆ. ಈ ಸಾರಿ ಭ್ರಷ್ಟಾಚಾರ ರಹಿತವಾದ ಸರ್ಕಾರ ನೀಡೋಣ ಎಂದು ಹೇಳಿದೆ. ಅದಕ್ಕೆ ಸಿಎಂ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಸಿಎಂ ಸೇರಿ 34 ಸಚಿವರನ್ನಾಗಿ ಮಾಡಬಹುದು. 8 ಜನರನ್ನು ಈಗಾಗಲೇ ಸಚಿವರನ್ನಾಗಿ ಮಾಡಿದ್ದಾರೆ.

ಈಗ ಉಳಿದ 24 ಜನ ಸಚಿವರನ್ನಾಗಿ ಮಾಡಬಹುದು. ನಾನು ಸಚಿವ ಸ್ಥಾನದ ಆಕಾಂಕ್ಷಿ. ಸಚಿವ ಸಂಪುಟಕ್ಕೆ ಸೇರಿಸಬೇಕು ಅಥವಾ ಬೇಡಾ ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ನಾನು ಒಬ್ಬ ಸಚಿವನಾಗಿ ಕೆಲಸ ಮಾಡಿದ್ದೇನೆ. ಅನುಭವಿ ರಾಜಕಾರಣಿ. ನೋಡೋಣ ನಮಗೂ ಸಿಗುತ್ತೋ ಅಂತಾ ಎಂದು ತಿಳಿಸಿದರು.

ಲಿಂಗಾಯತರಿಗೆ ಡಿಸಿಎಂ ಸ್ಥಾನ ಸಿಗಬೇಕು: ಲಿಂಗಾಯತ ಸಮುದಾಯಕ್ಕೆ ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಮುದಾಯದಲ್ಲಿ ನಾನೇ ಹೆಚ್ಚು ಬಾರಿ ಗೆದ್ದಿದ್ದೇನೆ. ನನಗೆ ಡಿಸಿಎಂ ಸ್ಥಾನ ಕೊಡಬೇಕು. ಜಾತಿ ಆಧಾರಿತವಾಗಿ ಕೇಳಲು ನಾನು ಹೋಗುವುದಿಲ್ಲ. ಎಲ್ಲರಿಗೂ ಅವಕಾಶ ಕೊಡಬೇಕು. ಯಾವ ಕಾಮಗಾರಿಗಳಲ್ಲಿ, ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆಯೋ ಅದರ ಬಗ್ಗೆ ತನಿಖೆ ಆಗಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

Former KPCC President Dinesh Gundu Rao
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ- ದಿನೇಶ್ ಗುಂಡೂರಾವ್.. ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ತನಿಖೆ ಆಗಲೇಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ಸಚಿವ ಎಂ ಬಿ ಪಾಟೀಲ್ ಅವರು ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ಮಾಡುವ ವಿಚಾರವನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಹಗರಣದ ಬಗ್ಗೆ ತನಿಖೆ ಆಗಬೇಕು. ಇದನ್ನೆಲ್ಲ ಸರಿಪಡಿಸಬೇಕು, ಭ್ರಷ್ಟಾಚಾರ ಕಡಿಮೆ ಮಾಡಬೇಕು. ಅದಕ್ಕೆ ನಿಯಂತ್ರಣ ಹಾಕಬೇಕು. ಜನರಿಗೆ ಭರವಸೆ ಮೂಡಿಸಬೇಕು. ಈ ಸರ್ಕಾರ ಒಳ್ಳೆಯ ಆಡಳಿತ ನಡೆಸಲಿದೆ ಎಂಬ ವಿಶ್ವಾಸ ಜನತೆಯಲ್ಲಿ ಮೂಡಿಸಬೇಕಿದೆ ಎಂದು ಹೇಳಿದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರಿಗೆ ಅವಕಾಶ ನೀಡುವ ಹಿನ್ನೆಲೆ ನಾನು ರಾಜೀನಾಮೆ ನೀಡಿ ಬಿಟ್ಟುಕೊಟ್ಟಿದ್ದೆನು. ಈಗ ನನಗೆ ಖಂಡಿತ ವಿಶ್ವಾಸ ಇದೆ. ಹೈಕಮಾಂಡ್ ನನ್ನನ್ನು ಪರಿಗಣಿಸಲಿದೆ ಎಂದ ಅವರು, ನನಗೆ ಪಕ್ಷ ಎಲ್ಲ ರೀತಿಯ ಜವಾಬ್ದಾರಿ ಕೊಟ್ಟಿದೆ. ಚಿಕ್ಕವಯಸ್ಸಿನಲ್ಲೇ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ರು. ಆದರೆ ಪಕ್ಷದ ಶಾಸಕರು ಬಿಟ್ಟು ಹೋದ್ರು, ಉಪ ಚುನಾವಣೆಯಲ್ಲೂ ಸೋಲಾಯ್ತು, ಹೀಗಾಗಿ ನಾನೇ ನೈತಿಕ ಹೊಣೆ ಹೊತ್ತು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆನು. ಕೆಲಸ ಮಾಡಲು ಆಗೊಲ್ಲ ಎಂದು ರಾಜೀನಾಮೆ ನೀಡಿರಲಿಲ್ಲ. ಆಕಾಂಕ್ಷಿಗಳು ಹೆಚ್ಚಿರುವುದರಿಂದ ಸ್ವಲ್ಪ ಗೊಂದಲ ಆಯ್ತು, ಅದಕ್ಕಾಗಿ ಈ ಸಮಸ್ಯೆ ಉಂಟಾಗಿರಬಹುದು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದು. ಆದರೆ ಎಲ್ಲರೂ ಒಂದಾಗಿ ಹೋಗಬೇಕು. ನಮ್ಮ ಕಾರ್ಯಕ್ರಮ ಜನರಿಗೆ ಮುಟ್ಟಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇದರಲ್ಲಿ ಯಾರೂ ಜಿದ್ದು ಸಾಧಿಸಬಾರದು ಎಂದರು.

ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಆಗೊಲ್ಲ, ಅವಕಾಶ ನೀಡದಿದ್ದರೆ ಜಿದ್ದು ಸಾಧಿಸುವುದರಲ್ಲಿ ಏನು ಅರ್ಥವಿಲ್ಲ. ಸಹಕಾರ ನೀಡಿಕೊಂಡು ಹೋಗಬೇಕು. ಯಾವ ಖಾತೆ ಕೊಟ್ರು ನಿಭಾಯಿಸಬಹುದು. ನಗರಾಭಿವೃದ್ಧಿ ಇದೆ, ಶಿಕ್ಷಣ ಇಲಾಖೆ ಇದೆ, ಯಾವುದೇ ಇಲಾಖೆ ಕೊಟ್ರು ನಿಭಾಯಿಸಬಹುದು. ಮಂತ್ರಿ ಮಾಡಿದ್ರೆ ಯಾವ ಖಾತೆ ಕೊಟ್ರು ನಿಭಾಯಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ಎಲ್ಲವನ್ನೂ ಗಮನಿಸಿ ರಚನೆ ಮಾಡಬೇಕಾಗುತ್ತದೆ. ಅವರ ಅನುಭವ, ಹಿರಿತನ, ಜಿಲ್ಲಾವಾರು ಪಕ್ಷಕ್ಕೆ ಸಲ್ಲಿಸಿದ ಸೇವೆ ಇವೆಲ್ಲವನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು. ಹಿರಿತನ, ಪಕ್ಷಕ್ಕೆ ಸೇವೆ ನೀಡಿರುವವರು, ಅರ್ಹತೆ, ಅನುಭವ ಇದ್ದವರಿಗೆ ಸಚಿವ ಸ್ಥಾನ ನೀಡಬೇಕು. ಅದನ್ನ ಬಿಟ್ಟು ಮಾಡೋದಿಕ್ಕೆ ಹೋದ್ರೆ ಗೊಂದಲ ಉಂಟಾಗುತ್ತೆ ಎಂದು ದಿನೇಶ್​ ಗುಂಡೂರಾವ್​ ತಿಳಿಸಿದರು.

ಮುಸ್ಲಿಂರಿಗೆ ಶೇ 4 ಮೀಸಲಾತಿ: ಮುಸ್ಲಿಂ ಮೀಸಲಾತಿ ವಾಪಸು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದು ಕೋರ್ಟ್ ನಲ್ಲಿದೆ, ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಕೋರ್ಟ್ ತಡೆ ನೀಡಿದೆ. ಹೀಗಾಗಿ ಮುಸ್ಲಿಮರಿಗೆ ಶೇ 4 ಮೀಸಲಾತಿ ಸಿಗಲಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಈಗ ತಾನೆ ಬಂದಿದೆ. ಬೊಮ್ಮಾಯಿಯವರು ಸ್ವಲ್ಪ ತಾಳ್ಮೆಯಿಂದ ಕಾಯಬೇಕು. ಒಂದು ಸರ್ಕಾರಕ್ಕೆ 6 ತಿಂಗಳು ಸಮಯ ಕೊಡಬೇಕು. ನೋಡಿ ಆಮೇಲೆ ಮಾತಾಡಬೇಕು. ಅವರ ಕಾಲದಲ್ಲಿ ಎಷ್ಟು ಜಾರಿಗೆ ತಂದಿದ್ದಾರೆ ಎಂದು ನೋಡಲಿ, ಸಿದ್ದರಾಮಯ್ಯ ಕಾಲದಲ್ಲಿ ಎಲ್ಲ ಭರವಸೆ ಈಡೇರಿಸಿದ್ದೇವೆ. ನಮಗೆ ಬದ್ಧತೆ ಇದ್ದೇ ಇದೆ. 6 ತಿಂಗಳು ನೋಡಿ ಆಮೇಲೆ ಟೀಕೆ ಮಾಡಬೇಕು ಎಂದು ಹೇಳಿದರು.

ಇದನ್ನೂಓದಿ:ಕಮಲ ಬಿಟ್ಟು, ಕಾಂಗ್ರೆಸ್ ಕೈ ಹಿಡಿದ ಲಿಂಗಾಯತರು: ಶಾಸಕರ ಗೆಲುವಿನ ಸಂಖ್ಯೆ ದುಪ್ಪಟ್ಟು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.