ETV Bharat / state

ಮುದ್ರಣ ಮಾಧ್ಯಮದಲ್ಲಾದ ಹೊಸ ತಂತ್ರಜ್ಞಾನಗಳ ಬೆಳವಣಿಗೆ ಏನು? - ಪತ್ರಿಕಾ ದಿನಾಚರಣೆ

ತಂತ್ರಜ್ಞಾನದ ಬೆಳವಣಿಗೆ ಮುದ್ರಣ ಮಾಧ್ಯಮದ ಮೇಲೆ ದೊಡ್ಡ ಪರಿಣಾಮ ಬೀರಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇಂದಿಗೂ ದಿನಪತ್ರಿಕೆ ಓದುವ ಒಂದು ವರ್ಗವೇ ಇದೆ. ಮೂಲ ಸ್ವರೂಪ ಬದಲಾಯಿಸದಿದ್ದರೂ, ಮುದ್ರಣ ಮಾಧ್ಯಮ ತಂತ್ರಜ್ಞಾನದ ನಾಗಾಲೋಟದೊಂದಿಗೆ ಸ್ಪರ್ಧೆ ಒಡ್ಡಲು ಕೆಲವೊಂದು ಅನಿವಾರ್ಯ ಬದಲಾವಣೆಗಳನ್ನು ಮಾಡಿಕೊಂಡಿವೆ.

Developments in Media world
ಮುದ್ರಣ ಮಾಧ್ಯಮ ಬೆಳವಣಿಗೆ
author img

By

Published : Jul 1, 2021, 2:06 PM IST

Updated : Jul 1, 2021, 3:02 PM IST

ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಜುಲೈ 1 ರಂದು " ಪತ್ರಿಕಾ ದಿನಾಚರಣೆ" ಆಚರಿಸಲಾಗುತ್ತದೆ. 1843ರ ಜುಲೈ 1 ರಂದು ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರ ಬಂತು. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು, ದೃಶ್ಯ ಮಾಧ್ಯಮ ಮೊದಲಾದವುಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತಿವೆ. ಪತ್ರಿಕೋದ್ಯಮದ ಪರಿಚಯ ಜನ ಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಇಂದು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.

ಕೆಲವು ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪ್ರಸ್ತುತ ಪತ್ರಿಕೋದ್ಯಮ ಎಂಬುವುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್​ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿವೆ. ಇನ್ನು ಸಾಮಾಜಿಕ ತಾಣಗಳು ಕೂಡ ಅತಿವೇಗದಲ್ಲಿ ಸುದ್ದಿಗಳನ್ನು ಮುಟ್ಟಿಸುತ್ತಿವೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಬೆಳೆದು ನಿಂತಿದೆ. ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಇಂಟರ್​ನೆಟ್​ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದಾಗಿದೆ‌.

ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಬದಲಾವಣೆಯ ಗಾಳಿ ಬೀಸಿದೆ. ಆದರೂ, ಪತ್ರಿಕೆಗಳನ್ನು ಓದುವ ಹವ್ಯಾಸ ಈಗಲೂ ಇದೆ. ಮನುಷ್ಯನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ.

ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು. ಸುದ್ದಿ ಮಾಧ್ಯಮ ಯಾವುದೇ ಇದ್ದರೂ, ಅದು ಪತ್ರಿಕೆಯನ್ನು ಮೀರಿಸಲಾಗುವುದಿಲ್ಲ. ಮುದ್ರಿತ ಸುದ್ದಿಯನ್ನು ಅನೇಕ ಸಲ ವಿವರವಾಗಿ ಓದಬಹುದು. ಡಿಜಿಟಲ್ ಇಲ್ಲವೇ ಟಿವಿ ಮಾಧ್ಯಮಗಳಲ್ಲಿ ಅದು ಸಾಧ್ಯವಿಲ್ಲ. ಎಲ್ಲ ಪ್ರಮುಖ ಪಟ್ಟಣಗಲ್ಲಿ ಕನಿಷ್ಠ ಒಂದಾದರೂ ಪತ್ರಿಕೆ ಇರಬೇಕೆಂದು ಮುಂದುವರಿದ ದೇಶಗಳಲ್ಲಿ ಬಯಸುತ್ತಾರೆ.

ವಿಶ್ವಾಸಾರ್ಹ ಮಾಧ್ಯಮ ಯಾವುದು?

ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹತೆ ಹೊಂದಿರುತ್ತವೆ. ನಮ್ಮ ದೇಶದ ಸುದ್ದಿ ಬಳಕೆದಾರರಲ್ಲಿ ನಡೆದ ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಮುದ್ರಣ ಮಾಧ್ಯಮವು ಅತ್ಯಂತ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿರುವ ಮಾಧ್ಯಮ ಎಂದು ಸಾಬೀತಾಗಿದೆ.

ಪತ್ರಿಕೆಗಳು ಅತಿ ಹೆಚ್ಚಿನ ವಿಶ್ವಾಸಾರ್ಹ ಮಾಧ್ಯಮವೆಂದು ಮೊದಲ ಆದ್ಯತೆ ನೀಡಿದ್ದಾರೆ. ಅದಕ್ಕೆ ಶೇ.62ರಷ್ಟು ಅಂಕಗಳು ನೀಡಲಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಬಾನುಲಿ (ಶೇ.56), ಮೂರನೇ ಸ್ಥಾನದಲ್ಲಿ ಟಿವಿ (ಶೇ.53) ಹಾಗೂ ಕಡೆಯ ಸ್ಥಾನವನ್ನು ಸಾಮಾಜಿಕ ಮಾಧ್ಯಮಗಳು (ಶೇ.27) ಪಡೆದಿವೆ.

ರೇಡಿಯೊ ಮತ್ತು ಟೆಲಿವಿಷನ್ ತಂತ್ರಜ್ಞಾನವನ್ನು 20ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಇಂಟರ್ನೆಟ್ ಪ್ರವೇಶಕ್ಕೆ ಸಂಬಂಧಿಸಿದ ಡಿಜಿಟಲ್ ಯುಗದ ಹೊಸ ತಂತ್ರಜ್ಞಾನಗಳನ್ನು ಸಹ ಸೇರಿಸಲಾಗುತ್ತಿದೆ. ಕಾಲ ಕ್ರಮೇಣ ಈ ಸಮೂಹ ಮಾಧ್ಯಮಗಳು ರಾಜಕೀಯ, ಸಂಸ್ಕೃತಿ ಮತ್ತು ಆರ್ಥಿಕತೆಯಂತಹ ವಿವಿಧ ಹಂತಗಳಲ್ಲಿ ಹೆಚ್ಚಿನ ಪ್ರಸ್ತುತತೆಯನ್ನು ಗಳಿಸಿವೆ, ಏಕೆಂದರೆ ದೊಡ್ಡ ಜನಸಂಖ್ಯೆಗೆ ಸಂದೇಶಗಳನ್ನು ರವಾನಿಸುವ ಸಾಧ್ಯತೆಯಿದೆ.

ಉದಾಹರಣೆಗೆ ಹೇಳುವುದಾದರೆ, ಜಾಹೀರಾತುಗಳ ಮೂಲಕ ಉತ್ಪನ್ನಗಳನ್ನು ಉತ್ತೇಜಿಸಲು ದೂರದರ್ಶನವು ಉತ್ತಮ ಸಂವಹನ ಮಾಧ್ಯಮವಾಗಿದೆ. ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯ ಜನರು ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ತಿಳಿದುಕೊಳ್ಳಬಹುದು, ಆಕರ್ಷಿತರಾಗಬಹುದು ಮತ್ತು ನಂತರ ಅದನ್ನು ಖರೀದಿಸಲು ಪ್ರೋತ್ಸಾಹಿಸಬಹುದು.

178 ವರ್ಷ ಹಲವು ಬದಲಾವಣೆ

178 ವರ್ಷಗಳಲ್ಲಿ ಸಮಾಚಾರ ಪತ್ರಿಕೆಗಳು, ಕನ್ನಡವೂ ಸೇರಿದಂತೆ ಹಲವು ಬದಲಾವಣೆಗೆ ಸಾಕ್ಷಿಯಾಗಿವೆ. ಕಪ್ಪು ಬಿಳುಪಿನಿಂದ ಈಗ ವರ್ಣಮಯವಾಗಿವೆ. ಸುದ್ದಿ ಸಂಗ್ರಹ ಬಹು ವಿಸ್ತಾರಗೊಂಡಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿನ ನಿಷ್ಠುರ ಇಲ್ಲವೇ ಖಡಕ್ ಅಭಿಪ್ರಾಯಗಳು ತಕ್ಷಣವೇ ಪ್ರಕಟಗೊಳ್ಳುತ್ತಿವೆ. ಚಿತ್ರಗಳು ಕ್ಷಣ ಮಾತ್ರದಲ್ಲಿ ಮನೆಮಾತಾಗುತ್ತಿವೆ. ಈ ಬಗೆಯ ಸಂವಹನ ಕ್ರಾಂತಿ ಆಧುನಿಕ ತಂತ್ರಜ್ಞಾನಗಳ ಸಂಯೋಗ ಇದು ಸಾಧ್ಯವಾಯಿತು.

ಉಪಗ್ರಹ ಆಧಾರಿತ ಟಿವಿ ವಾಹಿನಿಗಳು ಜಗತ್ತಿನ ಆಗು ಹೋಗುಗಳನ್ನು ಮನೆಯಂಗಳಕ್ಕೆ ತಂದವು. 24x7 ಸುದ್ದಿವಾಹಿನಿಗಳು ದಿನವಿಡೀ ಸುದ್ದಿಗಳನ್ನು ವೀಕ್ಷಕರಿಗೆ ತುರುಕಲಾರಂಭಿಸಿದವು. ಇವೆಲ್ಲವುಗಳ ಜತೆ ಕಂಪ್ಯೂಟರ್ ಆಧಾರಿತ ಜಾಲತಾಣಗಳು ಸುದ್ದಿ ಪ್ರಸರಣಕ್ಕೆ ಮತ್ತು ವಿಶ್ಲೇಷಣೆಗೆ ಮತ್ತಷ್ಟು ವೇಗ ನೀಡಿದವು. ಸುದ್ದಿ, ಲೇಖನಗಳನ್ನು ಪ್ರಕಟಿಸಿ ಓದುಗರಿಗೆ ಪತ್ರಿಕೆ ತಲುಪಿಸಿದರಾಯ್ತು ಎನ್ನುವ ಮಾನಸಿಕ ಚೌಕಟ್ಟಿನಿಂದ ಹೊರಬರುವುದು ಸುದ್ದಿ ಪತ್ರಿಕೆಗಳಿಗೆ ಅನಿವಾರ್ಯ ವಾಯಿತು.

ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಪತ್ರಿಕೆಯನ್ನು ಸುಂದರವಾಗಿ ಹೊರತಂದ ನಂತರ, ಪತ್ರಿಕೆಯನ್ನು ಓದುಗರಿಗೆ ನೀಡುವ ವಿಧಾನವು ಸಹ ಬದಲಾವಣೆ ಆಯಿತು. ಅಂತರ್ಜಾಲ ಸಂಪರ್ಕ ವಿಸ್ತಾರಗೊಳ್ಳುತ್ತಿದ್ದಂತೆ ಅಧಿಕ ಸಂಖ್ಯೆಯ ಓದುಗರು ಮುದ್ರಿತ ಪತ್ರಿಕೆಯ ಬದಲು ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಲಾರಂಭಿಸಿದರು.

ಪ್ರಧಾನ ಸುದ್ದಿ ಮಾಧ್ಯಮವಾಗಿ ಪತ್ರಿಕೆಗಳ ಮಹತ್ವ ಅಷ್ಟು ಗೌಣವಾಗುತ್ತಿರುವುದಕ್ಕೆ ಕಾರಣ ಕಂಪ್ಯೂಟರ್ ಮತ್ತು ಮೊಬೈಲ್​​​ಗಳ ವ್ಯಾಪಕ ಬಳಕೆ. ಅನೇಕ ಮಹತ್ತರ ಘಟನೆಗಳು ನೇರವಾಗಿಯೇ ಬಿತ್ತರಗೊಳ್ಳುತ್ತಿವೆ. ಇಲ್ಲವೇ ಕ್ಷಣ ಮಾತ್ರದಲ್ಲಿ ಚಿತ್ರ ಇಲ್ಲವೇ ವಿಡಿಯೋ ಮುಖಾಂತರ ಲಭ್ಯವಾಗುತ್ತಿವೆ. ಈ ಭರಪೂರ ಮಾಹಿತಿ ಮತ್ತು ಬಳಕೆದಾರನ ಆಯ್ಕೆ ಎಲ್ಲರನ್ನು ಚಕಿತಗೊಳಿಸಿದೆ.

ಮೊಬೈಲ್ ಇಲ್ಲವೇ ಕಂಪ್ಯೂಟರ್ ಮೂಲಕ ನೀವು ಊಹಿಸಬಹುದಾದ ಎಲ್ಲ ಮಾಧ್ಯಮಗಳಿಗೆ ಸಂಪರ್ಕ ಪಡೆಯಬಹುದಾಗಿದೆ. ಹೀಗಾಗಿ ಪತ್ರಿಕೆಗಳು ಬಹುಮಾಧ್ಯಮ ಸಂಸ್ಕೃತಿಗೆ ಜಾರುವುದು ಅನಿವಾರ್ಯವಾಯಿತು. ತಮ್ಮದೇ ಆದ ಸುದ್ದಿ ಜಾಲತಾಣಗಳನ್ನು ನಿರ್ವಹಿಸಬೇಕಾಗಿ ಬಂತು. ನಂತರ ಇವುಗಳಿಗೆ ಬಹುಮಾಧ್ಯಮ ಸ್ಪರ್ಶ ನೀಡಲಾಯಿತು.

ಫೇಸ್​​​​ಬುಕ್​ , ಟ್ವಿಟರ್, ಇನ್​ಸ್ಟಾಗ್ರಾಂ , ಯುಟ್ಯೂಬ್ ಮೂಲಕ ಸಂಪರ್ಕ ಕಲ್ಪಿಸಲಾಯಿತು. ಮೊದಲ ಬಾರಿಗೆ ಮುದ್ರಿತ ಪತ್ರಿಕೆಯ ಆದಾಯವನ್ನು ಡಿಜಿಟಲ್ ಸುದ್ದಿ ಆದಾಯ ಮೀರಿಸಿದೆ.

ಜಾಹೀರಾತು ಆದಾಯ ಕುಸಿತ : ಜಾಹೀರಾತುಗಳ ಆದಾಯ ಕುಸಿತ ಕಂಡರೆ ಇನ್ನೊಂದೆಡೆ ಪತ್ರಿಕೆಗಳ ಪ್ರಸಾರ ಸಹ ನಿರೀಕ್ಷಿತ ಪ್ರಮಾಣದಲ್ಲಿ ಏರುತ್ತಿಲ್ಲ. ವೈವಾಹಿಕ, ಮನೆ, ನಿವೇಶನ, ವಾಹನಗಳ ಮಾರಾಟ ಮತ್ತು ಖರೀದಿ, ಹೀಗೆ ಬಹುಪಾಲು ಜಾಹೀರಾತುಗಳು ಜಾಲತಾಣಗಳತ್ತ ಮುಖ ಮಾಡಿವೆ. ಇದು ಪತ್ರಿಕೆಗಳ ಆದಾಯವನ್ನು ಕಸಿದಿವೆ.

ಜರ್ಮನ್ ನ ಮತ ಪ್ರಚಾರಕ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಎಂದು ಕರೆಯಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ'. ಮೊಗ್ಲಿಂಗ್ ಹುಬ್ಬಳ್ಳಿ ಹಾಗೂ ಗದಗದಲ್ಲಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು. ಆಗ ಆ ಭಾಗವು ಧಾರವಾಡ ಜಿಲ್ಲೆಗೆ ಸೇರಿತ್ತು.

ಮೊಗ್ಲಿಂಗ್ ಧಾರವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದು 1838 ರಿಂದ 1852ರವರೆಗೆ ಸೇವೆಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ, ಜನರಿಗೆ ಮಾಹಿತಿ ಒದಗಿಸುವುದು. 1843ರ ಜುಲೈ 1ರಂದು "ಮಂಗಳೂರು ಸಮಾಚಾರ" ಎಂಬ ಪತ್ರಿಕೆಯನ್ನು ಹೊರತಂದರು.

ಇದು ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಸಹಕಾರಿಯಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಹಾಗಾಗಿ, ಇಂದು ಜುಲೈ 1 ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

Last Updated : Jul 1, 2021, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.