ETV Bharat / state

ಗೊಂದಲಕ್ಕೆ ಸಿಲುಕಿದ್ದಾರಾ ಕುಮಾರಸ್ವಾಮಿ? ನಾಯಕರ ಪಕ್ಷಾಂತರ ನಡುವೆ ಹೆಚ್​​ಡಿಕೆ ನಡೆ ನಿಗೂಢ

ಜೆಡಿಎಸ್​​ನಿಂದ ಒಬ್ಬೊಬ್ಬ ನಾಯಕರು ಪಕ್ಷ ತೊರೆದು ಹೊರ ನಡೆಯುತ್ತಿದ್ದರೆ, ಇತ್ತ ಕುಮಾರಸ್ವಾಮಿ ನಡೆ ಗೊಂದಲಕ್ಕೆ ಸಿಲುಕಿದಂತಿದೆ. ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಕುಮಾರಸ್ವಾಮಿ ಮುಂಬರುವ ಚುನಾವಣೆಗೆ ಯಾವ ತಂತ್ರ ಹಣೆಯಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

hd-kumaraswamy
ಕುಮಾರಸ್ವಾಮಿ
author img

By

Published : Mar 12, 2021, 8:39 PM IST

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗೊಂದಲಕ್ಕೆ ಸಿಲುಕಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.

ಕಾರಣ, ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ನಂತರ ಜೆಡಿಎಸ್​ನಲ್ಲಿ ಹಲವಾರು ಬದಲಾವಣೆಗಳಾದವು. ಹಲವರು ಪಕ್ಷ ತೊರೆದರು. ಈಗಲೂ ಸಹ ಪಕ್ಷ ಬಿಡುವ ಕಾರ್ಯದಲ್ಲಿ ಕೆಲವು ನಾಯಕರು ನಿರತರಾಗಿದ್ದಾರೆ. ಮಧು ಬಂಗಾರಪ್ಪ ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದು, ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.

ಮೈಸೂರು ಭಾಗದ ಜೆಡಿಎಸ್‍ ನಾಯಕ ಜಿ.ಟಿ ದೇವೇಗೌಡ ಪಕ್ಷ ತೊರೆಯುವ ಹೊಸ್ತಿಲಲ್ಲಿ ಇದ್ದಾರೆ. ಇನ್ನು ಉಳಿದ ಶಾಸಕರಲ್ಲೂ ಗೊಂದಲವಿದೆ. ಹಲವು ರಾಜಕೀಯ ವಿದ್ಯಮಾನಗಳು ನಡೆದಿವೆ. ಮತ್ತು ನಡೆಯುತ್ತಿವೆ. ಹಾಗಾಗಿ, ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಕುಮಾರಸ್ವಾಮಿ ಸಹ ಸ್ಪಷ್ಟ ನಿಲುವು ತಾಳಲಾಗದೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಬಿಜೆಪಿ ಜೊತೆ ಹೋಗಬೇಕೋ, ಕಾಂಗ್ರೆಸ್ ಜೊತೆ ಕೈಜೋಡಿಸಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನು ಹೇಳಿ ಕೇಳಿ ಪಕ್ಷದ ಹೆಸರೇ ಜಾತ್ಯಾತೀತ ಜನತಾ ದಳ. ಹೀಗಿರುವಾಗ ಬಿಜೆಪಿಗೆ ಹೋದರೆ ಕೋಮುವಾದಿ ಹಣೆಪಟ್ಟಿ ಅಪವಾದ ಹೊರಬೇಕಾಗಬಹುದೆಂಬ ಆತಂಕ. ಅಷ್ಟೇ ಅಲ್ಲ ಮುಸ್ಲಿಂ ಮತ್ತು ಜಾತ್ಯಾತೀತ ಮತಗಳು ಕೈತಪ್ಪಬಹುದೆಂಬ ಗೊಂದಲ ಬೇರೆ. ದೇಶದ ಪ್ರಮುಖ ಜಾತ್ಯಾತೀತ ನಾಯಕರ ಸಮ್ಮುಖದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಹೆಚ್‌ಡಿಕೆಗೆ, ಬಿಜೆಪಿ ಜೊತೆ ಹೋದರೆ ಪಕ್ಷ ಹಾಗೂ ವರ್ಚಸ್ಸಿಗೆ ಹೊಡೆತ ಬೀಳಬಹುದೆಂಬ ಆತಂಕ ಎದುರಾಗಿದೆ.

ಇನ್ನು ಕಾಂಗ್ರೆಸ್ ಜೊತೆ ಕೈಜೋಡಿಸಿದರೆ ಪಕ್ಷವನ್ನೇ ಮುಗಿಸಬಹುದೆಂಬ ಭಯ ಕಾಡುತ್ತಿದೆ. ಹಲವು ಸಂದರ್ಭಗಳಲ್ಲಿ ಪಕ್ಷವನ್ನೇ ಒಡೆಯಲು ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದರು ಎಂಬ ಆಕ್ರೋಶ ಕುಮಾರಸ್ವಾಮಿ ಅವರಿಗೆ ಇದೆ‌. ಇದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಷ್ಟಕ್ಕೂ ಕಳೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್​​ಗೆ ಮುಸ್ಲಿಂ ಮತಗಳು ಲಭಿಸಲಿಲ್ಲ ಎಂಬುದನ್ನು ಜೆಡಿಎಸ್‍ ನಾಯಕರೇ ಒಪ್ಪಿಕೊಳ್ಳುತ್ತಾರೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ನಾಯಕರು ತಮ್ಮ ಪರ ಒಲವು ಹೊಂದಿದ್ದಾರೆಂಬ ನಂಬಿಕೆ ಹೆಚ್​​​ಡಿಕೆ ಅವರದ್ದು. ಸರ್ಕಾರ ಬೀಳಿಸಲು ಬಿಜೆಪಿ ಕಾರಣ ಎಂಬುದು ಗೊತ್ತಿದ್ದರೂ, ಎಲ್ಲೋ ಒಂದು ಕಡೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಸಾಫ್ಟ್ ಕಾರ್ನರ್ ಇದ್ದಂತೆ ಕಾಣುತ್ತದೆ. ಇತ್ತೀಚೆಗೆ ನಡೆದ ವಿಧಾನಪರಿಷತ್​​ ಸಭಾಪತಿ ಆಯ್ಕೆ ವಿಚಾರದಲ್ಲಿ ಜೆಡಿಎಸ್ ನಡೆ ಏನೆಂಬುದು ಇದಕ್ಕೆ ಪುಷ್ಠಿ ನೀಡಿದೆ.

ಆದರೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮೇಯರ್ ಸ್ಥಾನ ಗಟ್ಟಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಈ ಎಲ್ಲ ಗೊಂದಲ ಗೊಂದಲವಾಗಿಯೇ ಉಳಿದಿದೆ.

ಪಕ್ಷ ಸಂಘಟನೆಯಲ್ಲಿ ಹೆಚ್​​​​ಡಿಕೆ

ಇಷ್ಟೆಲ್ಲಾ ಗೊಂದಲಗಳ ಮಧ್ಯೆಯೂ ಕುಮಾರಸ್ವಾಮಿ ಮಾತ್ರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚನ್ನಪಟ್ಟಣ, ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಈ ನಡುವೆ ಬಜೆಟ್ ಅಧಿವೇಶನ ಆರಂಭವಾಗಿದ್ದರೂ ಇದುವರೆಗೂ ಸದನಕ್ಕೆ ಹೆಚ್​ಡಿಕೆ ಹಾಜರಾಗಿಲ್ಲ. ಮಾ.9 ರಂದು ವಿಧಾನಸೌಧದಲ್ಲೇ ಶಾಸಕಾಂಗ ಸಭೆ ನಡೆಸಿದ್ದರೂ ಸಹ ಕುಮಾರಸ್ವಾಮಿ ಮಾತ್ರ ಅಧಿವೇಶನಕ್ಕೆ ಆಗಮಿಸಿರಲಿಲ್ಲ.

ಒಟ್ಟಾರೆ ಹೆಚ್​ಡಿಕೆ ಗೊಂದಲಕ್ಕೆ ಸಿಲುಕಿದ್ದಾರೋ? ಅಥವಾ ಮುಂಬರುವ ಚುನಾವಣೆಗೆ ಅಡಿಪಾಯ ಹಾಕುತ್ತಿದ್ದಾರೋ? ಎಂಬುದು ಕಾದುನೋಡಬೇಕಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲೇ ಸ್ಯಾನಿಟೈಸರ್​​ ಸೇವಿಸಿ ಬಿಜೆಪಿ ಶಾಸಕನಿಂದ ಆತ್ಮಹತ್ಯೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.