ETV Bharat / state

ಪ್ರತಿಯೊಂದಕ್ಕೂ ತಪ್ಪು ಹುಡುಕುವವರಿಗೆ ನಾವು ಏನನ್ನು ಹೇಳಲು ಸಾಧ್ಯವಿಲ್ಲ : ಸಿ ಟಿ ರವಿ

author img

By

Published : Apr 21, 2021, 8:22 PM IST

ಪ್ರಧಾನಿ ನರೇಂದ್ರ ಮೋದಿ ಆಕ್ಸಿಜನ್ ಕೊರತೆಯಿರುವ ರಾಜ್ಯಗಳಿಗೆ ಮುಂದಿನ ಮೂರು ದಿನಗಳಲ್ಲಿ ತ್ವರಿತವಾಗಿ ಪೂರೈಸುವಂತೆ ಆದೇಶ ಮಾಡಿರುವುದು ಪ್ರತಿಪಕ್ಷಗಳ ಕಣ್ಣಿಗೆ ಕಾಣಲಿಲ್ಲವೋ ಅಥವಾ ಕಂಡರೂ ಸುಮ್ಮನಿದ್ದಾರೋ? ಇದರ ಜೊತೆಗೆ ವ್ಯಾಕ್ಸಿನ್ ಉತ್ಪಾದಿಸುವ ಕಂಪನಿಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ ಇನ್ನಷ್ಟು ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ..

c-t-ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಬೆಂಗಳೂರು : ಪ್ರತಿಯೊಂದಕ್ಕೂ ತಪ್ಪು ಹುಡುಕುವವರಿಗೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಕೋವಿಡ್ ಬರುವುದಕ್ಕೆ ಮುಂಚಿನ ಸ್ಥಿತಿಗೂ, ಇಂದು ನೀಡಿರುವ ಸುಧಾರಣೆಯನ್ನು ತಾಳೆ ಹಾಕಿ ನೋಡುವ ಕಾರ್ಯ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋವಿಡ್ ಬರುವುದಕ್ಕೂ ಮುನ್ನ ದೇಶದಲ್ಲಿ ಎಷ್ಟು ಲ್ಯಾಬ್​ಗಳಿದ್ದವು. ಈಗ ಎಷ್ಟಾಗಿವೆ ಅನ್ನೋದನ್ನು ತಿಳಿದುಕೊಳ್ಳಬೇಕು. ನಾಲ್ಕು ಸಾವಿರಕ್ಕೂ ಹೆಚ್ಚು ಲ್ಯಾಬ್​ಗಳನ್ನು ಸ್ಥಾಪಿಸಲಾಗಿದೆ. 1.56 ಕೋಟಿ ಮಂದಿ ಕೋವಿಡ್ ರೋಗಿಗಳು ದೇಶದಲ್ಲಿ ಇದ್ದಾರೆ.

1.3 ಕೋಟಿ ಮಂದಿ ಗುಣಮುಖರಾಗಿದ್ದಾರೆ. 1.82 ಲಕ್ಷ ಮಂದಿ ನಿಧನರಾಗಿದ್ದಾರೆ. ಚಿಕಿತ್ಸಾ ಸೌಲಭ್ಯ ಏನೂ ಇಲ್ಲದಿದ್ದರೆ ಸಾವಿನ ಸಂಖ್ಯೆ ಎಷ್ಟಕ್ಕೆ ಏರಿಕೆಯಾಗುತ್ತಿತ್ತು ಎಂದು ಯೋಚಿಸಲಿ ಎಂದು ಪ್ರತಿಪಕ್ಷ ಕಾಂಗ್ರೆಸ್​ಗೆ ಬಿಸಿ ಮುಟ್ಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಆಕ್ಸಿಜನ್ ಕೊರತೆಯಿರುವ ರಾಜ್ಯಗಳಿಗೆ ಮುಂದಿನ ಮೂರು ದಿನಗಳಲ್ಲಿ ತ್ವರಿತವಾಗಿ ಪೂರೈಸುವಂತೆ ಆದೇಶ ಮಾಡಿರುವುದು ಪ್ರತಿಪಕ್ಷಗಳ ಕಣ್ಣಿಗೆ ಕಾಣಲಿಲ್ಲವೋ ಅಥವಾ ಕಂಡರೂ ಸುಮ್ಮನಿದ್ದಾರೋ? ಇದರ ಜೊತೆಗೆ ವ್ಯಾಕ್ಸಿನ್ ಉತ್ಪಾದಿಸುವ ಕಂಪನಿಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ ಇನ್ನಷ್ಟು ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ.

ಈ ಮೂಲಕ ವ್ಯಾಕ್ಸಿನೇಷನ್ ಪ್ರಮಾಣ ಹೆಚ್ಚಳ ಮಾಡಲು ಪ್ರಯತ್ನಿಸುತ್ತಿರುವುದು ಪ್ರತಿಪಕ್ಷಗಳ ಕಣ್ಣಿಗೆ ಕಾಣುತ್ತಿಲ್ಲ ಎಂದರೆ ಏನು ಹೇಳಬೇಕು. ಪ್ರತಿಪಕ್ಷಗಳ ನಿರೀಕ್ಷೆ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಯಾವ ಹೊತ್ತಿನಲ್ಲಿ ರಾಜಕಾರಣ ಮಾಡಬಾರದು ಎನ್ನುವ ಪರಿಜ್ಞಾನ ಕೂಡ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ರಾಜಕಾರಣದ ಮೇಲೆಯೇ ಮುಳುಗಿ ಹೋಗಿರುವವರಿಗೆ, ದೇಶದಲ್ಲಿ ಆಗುತ್ತಿರುವ ಆರೋಗ್ಯ ಪ್ರಗತಿಯ ಮಾಹಿತಿ ಸಿಗಲು ಹೇಗೆ ಸಾಧ್ಯ? ಎಂದರು.

ರಾಜ್ಯದಲ್ಲಿ ಬೆಡ್​ಗಳ ಕೊರತೆ ಇರುವುದು ನಿಜ. ಆಕ್ಸಿಜನ್ ಸರಬರಾಜಿಗೆ ಅಗತ್ಯವಿರುವ ಕ್ರಮಕೈಗೊಂಡಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ ಏನೇನು ಕೊರತೆ ಇದೆಯೋ ಅದಕ್ಕೆ ಅಗತ್ಯ ಸಿದ್ಧತೆಯನ್ನು ಸರ್ಕಾರ ಮಾಡಿದೆ. ಆರ್​ಟಿಪಿಸಿಆರ್​ ತಪಾಸಣೆ ಫಲಿತಾಂಶ ಆದಷ್ಟು ಬೇಗ ಬರುವ ರೀತಿ ನೋಡಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ.

ಇದಕ್ಕೆ ನಮ್ಮ ಲ್ಯಾಬ್​ಗಳ ಸಂಖ್ಯೆ ಹೆಚ್ಚಾಗಬೇಕು ಅಥವಾ ಖಾಸಗಿ ಲ್ಯಾಬ್​ಗಳಿಗೆ ತರಬೇತಿ ನೀಡುವ ಕಾರ್ಯ ಆಗಬೇಕಾ? ಎನ್ನುವುದನ್ನು ಆಲೋಚಿಸುವ ಅಗತ್ಯ ಇದ್ದು, ತಜ್ಞರನ್ನು ಈ ವಿಚಾರವಾಗಿ ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಓದಿ: ಉಸ್ತುವಾರಿ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಕೊರೊನಾ ನಿಯಂತ್ರಣಕ್ಕೆ ಕ್ರಮವಹಿಸಿ : ಸಚಿವರಿಗೆ ಪತ್ರ ಬರೆದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.