ETV Bharat / state

ಬಂದೂಕು ಪರವಾನಗಿ ಪಡೆಯಲು ಬೇಕಾದ ಅರ್ಹತೆಗಳೇನು ಗೊತ್ತಾ? - ಸ್ವಯಂ ರಕ್ಷಣೆಗೆ ಬಂದೂಕು ಪರವಾನಗಿ

ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ, ಏಲಕ್ಕಿ, ಮೆಣಸು, ಶ್ರೀಗಂಧ ಬೆಳೆ ಹೆಚ್ಚಿದೆ. ಕಾಡು ಪ್ರಾಣಿಗಳು ಮತ್ತು ಕಳ್ಳರ ಕಾಟವೂ ಅಧಿಕವಾಗಿದ್ದು, ರೈತರಿಗೆ ತಲೆನೋವಾಗಿದೆ. ಹೀಗಾಗಿ ಅವುಗಳ ನಿಯಂತ್ರಣಕ್ಕಾಗಿ ಅವಶ್ಯಕತೆ ಇರುವವರಿಗೆ ಗನ್​ ಪರವಾನಗಿ ನೀಡಲಾಗುತ್ತಿದೆ.

gun
ಬಂದೂಕು
author img

By

Published : Dec 25, 2020, 11:29 PM IST

ಬೆಂಗಳೂರು: ರಾಜ್ಯದಲ್ಲಿ ಕಾಫಿ, ಮೆಣಸು, ಶ್ರೀಗಂಧ ಹೀಗೆ ಪ್ರಮುಖ ಬೆಳಗಳನ್ನು ಕಾಡುಪ್ರಾಣಿ, ಕಳ್ಳಕಾಕರಿಂದ ಮತ್ತು ಬೆದರಿಕೆಯಂತಹ ಪ್ರಕರಣಗಳಿಂದ ರಕ್ಷಿಸಿಕೊಳ್ಳಲು ಗನ್​ ಅಥವಾ ಬಂದೂಕುಗಳ ಪರವಾನಗಿ ಪಡೆಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವರಕ್ಷಣೆ, ಬೆಳೆಗಳ ರಕ್ಷಣೆ ಸೇರಿದಂತೆ ಇತರ ಕಾರ್ಯಗಳಿಗಾಗಿ 9 ಸಾವಿರ ಗನ್​ಗಳನ್ನು ಪಡೆಯಲಾಗಿದೆ. ಹೊಸ ಕಾಯ್ದೆಯ ಪ್ರಕಾರ ಒಬ್ಬ ಎರಡೂ ಗನ್​​ಗಳನ್ನು ಹೊಂದುವಂತಿಲ್ಲ. ಹೀಗಾಗಿ ಪರವಾನಗಿ ನವೀಕರಣಕ್ಕೆ ಹೆಚ್ಚು ಅರ್ಜಿಗಳು ಬಂದಿವೆ. 300ಕ್ಕೂ ಅಧಿಕ ಹೊಸ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ.

ಕರ್ನಾಟಕದ ಕಾಶ್ಮೀರ ಕೊಡಗು ವಿಶಿಷ್ಟವಾದ ಸಂಸ್ಕೃತಿ ಹೊಂದಿದೆ. ಇಲ್ಲಿನ ಕೊಡವ ಹಾಗೂ ಜಮ್ಮಾ ಹಿಡುವಳಿದಾರರು ಕೋವಿಯ ಪರವಾನಗಿ ವಿನಾಯಿತಿ ಹಕ್ಕನ್ನು 10 ವರ್ಷಕ್ಕೆ ಸೀಮಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.‌ ಬಂದೂಕುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.‌

ಹೀಗಾಗಿ, ಸರ್ಕಾರ ಆ ನಿರ್ಧಾರಕ್ಕೆ ಬಂದಿತ್ತು. ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್‌ ಯಾಲದಾಳು ಚೇತನ್‌ ಕೇಶವಾನಂದ ಪ್ರಶ್ನಿಸಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿತ್ತು. ಇದೀಗ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ದಾಸ್‌ ಹೊರಡಿಸಿರುವ ಆದೇಶದಲ್ಲಿ 2029ರ ಅಕ್ಟೋಬರ್ 31ರವರೆಗೆ ಕೋವಿ ಪರವಾನಗಿ ವಿನಾಯಿತಿ ಹಕ್ಕನ್ನು ವಿಸ್ತರಿಸಲಾಗಿದೆ.‌

ಗನ್​ ಪರವಾನಗಿ ಕುರಿತ ವರದಿ

ಹೊಸದಾಗಿ ಗನ್ ಪಡೆಯಲು ಪರವಾನಗಿ ಕೇಳಲು ಬಂದರೆ ಮೊದಲಿಗೆ ಅವರ ಕುರಿತು ತನಿಖೆ ಮಾಡಲಾಗುತ್ತದೆ. ಲೈಸನ್ಸ್ ಪಡೆಯುವವರ ಕುರಿತು ಪೊಲೀಸ್, ಅರಣ್ಯ, ಕಂದಾಯ ಇಲಾಖೆಗಳು ಗನ್ ನೀಡುವ ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ. ಗನ್ ಬೇಕು ಎಂದು ಕೇಳುತ್ತಿರುವವರಿಗೆ ಜಮೀನು ಇದೆಯೇ, ಕಾಡು ಪ್ರಾಣಿಗಳಿಂದ ಸಮಸ್ಯೆ ಆಗುತ್ತಿದೆಯೇ, ಸ್ವಯಂ ರಕ್ಷಣೆಗೆ ಕೇಳುತ್ತಿದ್ದಾರೆಯೇ? ಅವರ ಹಿನ್ನೆಲೆ ಏನು? ಹೀಗೆ ಹಲವು ವಿಷಯಗಳನ್ನು ಪರಿಶೀಲಿಸಿ ನಂತರ ಗನ್​ ನೀಡಲು ಅನುಮತಿ ನೀಡಲಾಗುತ್ತದೆ. ಗನ್ ಬೇಕಾದವರಿಗೆ ಪೊಲೀಸ್​ ಇಲಾಖೆಯಿಂದಲೇ ತರಬೇತಿ ನೀಡಲಾಗುತ್ತದೆ. ನಂತರ ಅವರಿಗೆ ಪ್ರಮಾಣಪತ್ರ ಕೊಡಲಾಗುತ್ತದೆ.

ಶುಲ್ಕ ಭರಿಸಬೇಕು: ಆರಂಭದಲ್ಲಿ ವರ್ಷದ ಅವ­ಧಿಗೆ ಪರವಾನಗಿ ನೀಡಲಾಗುತ್ತದೆ. ನಂತರ ಪ್ರತಿ 3 ವರ್ಷಗಳಿಗೊಮ್ಮೆ ನವೀಕರಣ ಕಡ್ಡಾಯ. ಹೊಸ ಪರವಾನಗಿ ಮತ್ತು ನವೀಕರಣಕ್ಕೆ ಸಿಂಗಲ್‌ ಬ್ಯಾರೆಲ್‌ ಅಥವಾ ಡಬಲ್‌ ಬ್ಯಾರೆಲ್‌ ಬಂದೂಕು, ಪಿಸ್ತೂಲ್‌, ರಿವಾಲ್ವರ್‌ಗೆ ನಿಗದಿತ ಶುಲ್ಕ ಭರಿಸಬೇಕಾಗುತ್ತದೆ. ಪಿಸ್ತೂಲ್‌ಗೆ ₹ 80 ಸಾವಿರದಿಂದ ₹ 3.50 ಲಕ್ಷದವರೆಗೆ ಬೆಲೆ ಇದೆ.

ಅರ್ಹತೆ ಏನು?: ಕನಿಷ್ಠ 21 ವರ್ಷ ವಯಸ್ಸಾಗಿರ­ಬೇಕು. ಪೊಲೀಸ್‌ ಇಲಾಖೆ/ ಕರ್ನಾಟಕ ರೈಫಲ್‌ ಸಂಸ್ಥೆಯಿಂದ ಶಸ್ತ್ರಾಸ್ತ್ರ ಬಳ­ಕೆ ತರ­ಬೇತಿ ಪಡೆದಿರಬೇಕು. ವಾಸ ದೃಢೀಕರಣ ಮತ್ತಿತರ ದಾಖಲೆ ಕಡ್ಡಾಯ. ಪತಿ–ಪತ್ನಿ, ತಂದೆ-ಮಗ ಇಬ್ಬರೂ ಒಂದೇ ಬಂದೂಕು ಉಪಯೋಗಿಸುವ ಪರವಾನಗಿ ಪಡೆಯಬಹುದು. ಇದಕ್ಕಾಗಿ ಇಬ್ಬರೂ ಬಳಕೆಯ ತರಬೇತಿ ಪಡೆದಿರಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.