ETV Bharat / state

ಕೊಳೆಗೇರಿ ಪ್ರದೇಶಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು, ಸ್ಲಂ ನಿವಾಸಿಗಳ ಆತಂಕ ಏನು?

author img

By

Published : Apr 17, 2020, 4:27 PM IST

ರಾಜ್ಯದಲ್ಲಿ ಒಟ್ಟು 2705 ಕೊಳೆಗೇರಿಗಳಿದ್ದು, ಸುಮಾರು 40,50,000 ನಿವಾಸಿಗಳಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲೇ ಸ್ಲಂಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ನೀಡಿರುವ ರಾಜ್ಯದ ಪ್ರಮುಖ ಕೊಳೆಗೇರಿಗಳ ವಿವರ ಇಲ್ಲಿದೆ.

slum areas
ಕೊಳೆಗೇರಿ ಪ್ರದೇಶ

ಬೆಂಗಳೂರು: ಏಷ್ಯಾದ ಅತಿದೊಡ್ಡ ಸ್ಲಂ ಮುಂಬೈಯ ಧರಾವಿಯಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ. ಸಾಮಾಜಿಕ‌ ಅಂತರ ಇಲ್ಲದ ಇಕ್ಕಟ್ಟಾದ ಸ್ಲಂಗಳಲ್ಲಿ ಕೊರೊನಾ ಸೋಂಕು ಎಂಟ್ರಿ ಕೊಟ್ಟರೆ ಅದರ ನಿಯಂತ್ರಣವೇ ದೊಡ್ಡ ಸವಾಲಾಗಿದೆ. ಬೆಂಗಳೂರು ಸೇರಿದಂತೆ ನಮ್ಮ ರಾಜ್ಯದಲ್ಲೂ ಸಾಕಷ್ಟು ಕೊಳೆಗೇರಿಗಳಿದ್ದು, ಸರ್ಕಾರ ಸ್ಲಂಗಳಲ್ಲಿ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಒಟ್ಟು ಕೊಳೆಗೇರಿ ಮತ್ತು ನಿವಾಸಿಗಳ ವಿವರ: ರಾಜ್ಯದಲ್ಲಿ ಒಟ್ಟು 2705 ಕೊಳೆಗೇರಿಗಳಿದ್ದು, ಸುಮಾರು 40,50,000 ನಿವಾಸಿಗಳಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲೇ ಸ್ಲಂಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ನೀಡಿರುವ ರಾಜ್ಯದ ಪ್ರಮುಖ ಕೊಳೆಗೇರಿಗಳ ವಿವರ ಇಲ್ಲಿದೆ.

ಬೆಂಗಳೂರು ನಗರದಲ್ಲಿ 423 ಸ್ಲಂಗಳಿದ್ದು, 15.36 ಲಕ್ಷ ನಿವಾಸಿಗಳಿದ್ದಾರೆ. ಬಳ್ಳಾರಿಯಲ್ಲಿ 189 ಸ್ಲಂಗಳಿದ್ದು, 1.54 ಲಕ್ಷ ನಿವಾಸಿಗಳಿದ್ದಾರೆ‌. ಬೆಳಗಾವಿಯಲ್ಲಿ 149 ಸ್ಲಂಗಳಿದ್ದು, 1.28 ಲಕ್ಷ ಜನಸಂಖ್ಯೆ ಇದೆ. ಧಾರವಾಡದಲ್ಲಿ 130 ಸ್ಲಂಗಳಲ್ಲಿ 2.29 ಲಕ್ಷ ನಿವಾಸಿಗಳಿದ್ದಾರೆ. ವಿಜಯಪುರದಲ್ಲಿ 85 ಸ್ಲಂಗಳಿದ್ದು, 2.58 ನಿವಾಸಿಗಳಿದ್ದಾರೆ.

ಕಲಬುರಗಿಯ 147 ಸ್ಲಂಗಳಲ್ಲಿ 2.06 ಲಕ್ಷ ನಿವಾಸಿಗಳು. ಹಾಸನದಲ್ಲಿ 110 ಸ್ಲಂ, 1.52 ಲಕ್ಷ ನಿವಾಸಿಗಳು. ಮೈಸೂರಲ್ಲಿ 118 ಸ್ಲಂಗಳು, 89 ಸಾವಿರ ಸ್ಲಂ ನಿವಾಸಿಗಳು. ಶಿವಮೊಗ್ಗ 173 ಸ್ಲಂಗಳಿದ್ದು, 1.44 ಲಕ್ಷ ನಿವಾಸಿಗಳಿದ್ದಾರೆ‌. ತುಮಕೂರಿನ 127 ಸ್ಲಂಗಳಲ್ಲಿ 1.29 ಲಕ್ಷ ನಿವಾಸಿಗಳಿದ್ದಾರೆ.

ಸರ್ಕಾರ ಕೈಗೊಂಡಿರುವ ಕ್ರಮಗಳೇನು?: ಸದ್ಯ ಆಯಾ ಜಿಲ್ಲೆಯ ಡಿಸಿಗಳು ಹಾಗೂ ಬಿಬಿಎಂಪಿ ಸ್ಲಂಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪ್ರತಿ ದಿನ ಸ್ಲಂಗಳಲ್ಲಿ ಸ್ಯಾನಿಟೈಸಿಂಗ್ ಕಾರ್ಯ ಕೈಗೊಳ್ಳಲಾಗುತ್ತಿದೆ.

ವೈದ್ಯಕೀಯ ಸಿಬ್ಬಂದಿ ತಂಡ ಸ್ಲಂಗಳಲ್ಲಿ ಸತತ ಆರೋಗ್ಯ ತಪಾಸಣೆ ಮಾಡುತ್ತಿದೆ. ಕೊರೊನಾ ಸೋಂಕು ಸಂಬಂಧ ಸ್ಲಂ ನಿವಾಸಿಗಳಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಮಾಸ್ಕ್ ಬಳಸಲು ಸೂಚನೆ ನೀಡಲಾಗುತ್ತಿದೆ. ಆಯಾ ವಾರ್ಡ್ ಸದಸ್ಯರು ಹಾಗೂ ಜನಪ್ರತಿ‌ನಿಧಿಗಳಿಗೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಕೊಳೆಗೇರಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ.

ಕೊಳೆಗೇರಿ ನಿವಾಸಿಗಳು ಏನು ಹೇಳ್ತಾರೆ?: ಲಾಕ್​ಡೌನ್​ನಿಂದ ಇತ್ತ ಕೊಳೆಗೇರಿ ನಿವಾಸಿಗಳು ಸಾಕಷ್ಟು ಸಮಸ್ಯೆ ಅನುಭವಿಸ್ತಾ ಇದ್ದಾರೆ. ದಿನ‌ನಿತ್ಯದ ದಿನಸಿ, ಪಡಿತರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ. ಉಚಿತ ಹಾಲಿನ ವಿತರಣೆ ಸಮರ್ಪಕವಾಗಿಲ್ಲ. ಲಾಕ್‌ಡೌನ್ ಹಿನ್ನೆಲೆ ಕೆಲಸ ಇಲ್ಲದೆ ಸಾಲ ಮಾಡಿ ಜೀವನ‌ ನಡೆಸುತ್ತಿದ್ದೇವೆ ಎಂದು ಕೊಳೆಗೇರಿ ನಿವಾಸಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.