ETV Bharat / state

ಅಕ್ರಮ ವಲಸೆ ಅನುಮಾನದಡಿ 301 ದಿನ ಸೆರೆವಾಸ; ಪ.ಬಂಗಾಳದ ದಂಪತಿ ಕೊನೆಗೂ ತವರಿಗೆ ವಾಪಸ್

ಬಂಧನಕಕ್ಕೊಳಗಾಗಿದ್ದ ಈ ದಂಪತಿ 301 ದಿನ ಸೆರೆವಾಸ ಅನುಭವಿಸಿದ್ದರು. ಇದೀಗ ಜಾಮೀನು ದೊರೆತ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದಾರೆ.

West Bengal Couple
ಪಶ್ಚಿಮ ಬಂಗಾಳದ ದಂಪತಿ
author img

By

Published : Jun 2, 2023, 12:42 PM IST

Updated : Jun 2, 2023, 1:21 PM IST

ಬೆಂಗಳೂರು: ಬಾಂಗ್ಲಾ ವಲಸಿಗರು ಎಂಬ ಅನುಮಾನದಲ್ಲಿ ಬೆಂಗಳೂರು ವರ್ತೂರು ಪೊಲೀಸ್​ ಠಾಣೆ ಪೊಲೀಸರಿಂದ ಬಂಧನವಾಗಿ 301 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದ ಪಶ್ಚಿಮ ಬಂಗಾಳ ಮೂಲದ ದಂಪತಿ ಕೊನೆಗೂ ತಮ್ಮ ತವರಿನತ್ತ ತೆರಳಿದರು. ಫಲಶ್ ಅಧಿಕಾರಿ ಹಾಗೂ ಶುಕ್ಲಾ ಅಧಿಕಾರಿ ದಂಪತಿಗೆ ಬೆಂಗಳೂರು ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಿಂದ ಜಾಮೀನು ದೊರೆತಿದ್ದು ಬಂಗಾಳಕ್ಕೆ ಕಳುಹಿಸಲಾಗಿದೆ.

ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ನ ಜಮಾಲ್ಪುರ ಮೂಲದವರಾಗಿದ್ದ ಫಲಶ್ ಹಾಗೂ ಶುಕ್ಲಾ ಉದ್ಯೋಗ ಅರಸಿ ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ತ್ಯಾಜ್ಯ ವಿಂಗಡಣೆ ಕೆಲಸ ಮಾಡಿಕೊಂಡು ಮಾರತ್‌ಹಳ್ಳಿ ಭಾಗದಲ್ಲಿ ವಾಸವಿದ್ದರು. 2022 ರ ಜುಲೈನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ದಂಪತಿಯನ್ನು ವಿದೇಶಿಗರ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ದಂಪತಿ 'ತಾವು ಪಶ್ಚಿಮ ಬಂಗಾಳದ ಜಮಾಲ್ಪುರ ಮೂಲದವರು' ಎಂದು ವಿವರಿಸಲು ಯತ್ನಿಸಿದ್ದರಾದರೂ ಅವರ ಪ್ರಯತ್ನ ವಿಫಲವಾಗಿತ್ತು.

ನಂತರ ಬಂಧಿತರು ಹೇಳಿದ್ದ ವಿಳಾಸಕ್ಕೆ ತೆರಳಿ ಪರಿಶೀಲಿಸಿದ್ದ ಬೆಂಗಳೂರು ಪೊಲೀಸರು ಜಮಾಲ್ಪುರದ ಬಿಡಿಓರನ್ನು ಸಂಪರ್ಕಿಸಿ ಬಂಧಿತರ ಸಂಬಂಧಿಕರನ್ನು ಭೇಟಿಯಾಗಿತ್ತು. ಏಪ್ರಿಲ್ 28 ರಂದು ದಂಪತಿಗೆ ಜಾಮೀನು ಮಂಜೂರಾಗಿತ್ತು. ಆದರೆ ಸ್ಥಳೀಯ ವ್ಯಕ್ತಿಗಳ ಸಹಿಯ ಅಗತ್ಯವಿದ್ದುದರಿಂದ ಕೆಲಕಾಲ ಬಿಡುಗಡೆ ವಿಳಂಬವಾಗಿತ್ತು. ಸದ್ಯ ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದಂಪತಿಯನ್ನು ಗುರುವಾರ ಅವರ ಊರಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಟೀನಾ ದಾಬಿಗೆ ಆರ್ಶೀವದಿಸಿದ ಪಾಕಿಸ್ತಾನಿ ಹಿಂದೂ ವಲಸಿಗರು!

Last Updated : Jun 2, 2023, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.