ETV Bharat / state

Weekend Curfew: ನಿಷೇಧಾಜ್ಞೆಯಿಂದ ಬಿಕೋ ಎನ್ನುತ್ತಿವೆ ಬೆಂಗಳೂರಿನ ರಸ್ತೆಗಳು.. ಉಲ್ಲಂಘಿಸಿದರೆ ಕಟ್ಟನಿಟ್ಟಿನ ಕ್ರಮ - ಕೆ.ಆರ್​​.ಮಾರುಕಟ್ಟೆ ಬಂದ್​

Weekend Curfew in Bengaluru: ವಾರಾಂತ್ಯದ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನ ಕೆ.ಆರ್​​.ಮಾರುಕಟ್ಟೆ​, ಮಲ್ಲೇಶ್ವರಂ, ಯೆಶವಂತಪುರ, ಜಯನಗರ ಮುಂತಾದ ಕಡೆ ನಿಷೇಧಾಜ್ಞೆ ಕಾರಣ ಅಂಗಡಿಗಳೆಲ್ಲ ಬಂದ್​​ ಆಗಿವೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ.

Weekend Curfew
ವಾರಾಂತ್ಯದ ನಿಷೇಧಾಜ್ಞೆ
author img

By

Published : Jan 8, 2022, 10:13 AM IST

Updated : Jan 8, 2022, 11:54 AM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ ಹಾಗೂ ರೂಪಾಂತರಿ ಒಮಿಕ್ರಾನ್​ ನಿಯಂತ್ರಣಕ್ಕೆ ಸರ್ಕಾರವು ವಾರಾಂತ್ಯದ ನಿಷೇಧಾಜ್ಞೆ ಹೊರಡಿಸಿದ್ದು, ಸಿಲಿಕಾನ್​ ಸಿಟಿಯ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಎಲ್ಲ ವಿಭಾಗದ ಡಿಸಿಪಿಗಳು ಖುದ್ದು ರಸ್ತೆಗಿಳಿದಿದ್ದಾರೆ. ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಈ ನಿಷೇಧಾಜ್ಞೆ ಮುಂದುವರೆಯಲಿದೆ.

ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಕೆ.ಆರ್​​.ಮಾರುಕಟ್ಟೆ​, ಮಲ್ಲೇಶ್ವರಂ, ಯಶವಂತಪುರ, ಜಯನಗರ ಮುಂತಾದ ಕಡೆ ನಿಷೇಧಾಜ್ಞೆ ಕಾರಣ ಅಂಗಡಿಗಳೆಲ್ಲ ಬಂದ್​​ ಆಗಿವೆ. ಸರ್ಕಾರವು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿದ್ದು, ಕಠಿಣ ನಿಯಮ ಜಾರಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ನಿಷೇಧಾಜ್ಞೆಯಿಂದ ಬಿಕೋ ಎನ್ನುತ್ತಿವೆ ಬೆಂಗಳೂರಿನ ರಸ್ತೆಗಳು

ಜನಜಂಗುಳಿ ತಪ್ಪಿಸುವ ನಿಟ್ಟಿನಲ್ಲಿ ಕೆ.ಆರ್​​.ಮಾರುಕಟ್ಟೆ​, ಸುತ್ತಮುತ್ತ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಮಾರ್ಷಲ್ ಮತ್ತು ಪೊಲೀಸರ ನಿಯೋಜನೆ ಮಾಡಿ ಜನರನ್ನು ನಿಯಂತ್ರಿಸಲಾಗಿದೆ. ಇನ್ನೊಂದೆಡೆ ಮಾಸ್ಕ್ ಧರಿಸದವರಿಗೆ ಬೆಳ್ಳಂಬೆಳಗ್ಗೆ ಮಾರ್ಷಲ್​​ಗಳು ದಂಡ ವಿಧಿಸುತ್ತಿದ್ದಾರೆ.

ಉದ್ಯಾನವನಗಳೂ ಬಂದ್ ಆಗಿರುವ ಕಾರಣ ಜನ ರಸ್ತೆ, ರೈಲ್ವೆ ಹಳಿಗಳ ಪಕ್ಕದಲ್ಲಿ ಜನರು ವಾಯುವಿಹಾರ ಮಾಡುತ್ತಿದ್ದ ದೃಶ್ಯ ಕಂಡುಬಂತು. ಬೀದಿಬದಿ ವ್ಯಾಪಾರಿಗಳಿಗೆ ಅವಕಾಶವಿರುವುದರಿಂದ ಈಗಾಗಲೇ ಹಣ್ಣು, ತರಕಾರಿ ಮಾರಾಟ ನಡೆಸುತ್ತಿದ್ದಾರೆ. ತಿಂಡಿ, ತಿನಿಸುಗಳ ಹೋಟೆಲ್​ಗಳಿಗೂ ಕೂಡ ಪಾರ್ಸೆಲ್​ಗೆ ಅವಕಾಶವಿದ್ದು, ಮುಂಜಾನೆಯಿಂದಲೇ ಕೆಲಸ ಆರಂಭಿಸಿವೆ.

ರೈಲ್ವೆ ನಿಲ್ದಾಣಗಳಲ್ಲೂ ಮಾರ್ಷಲ್​ಗಳು ನಿಗಾ ವಹಿಸಿದ್ದಾರೆ. ಬೇರೆ ಊರುಗಳಿಂದ ಬರುವವರಿಗೆ ರೈಲು ಸಂಚಾರ ಎಂದಿನಂತೆ ಇದ್ದು, ರೈಲ್ವೆ ನಿಲ್ದಾಣದ ಆವರಣದಲ್ಲಿ ಸಾವಿರಾರು ಮಂದಿ ಕಂಡು ಬಂದರು. ಆದರೆ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಓಲಾ, ಊಬರ್ ಆಟೋಗಳಿಗೆ ಬೇಡಿಕೆ ಹೆಚ್ಚಿದೆ.

ನಗರದಲ್ಲಿ ಪೊಲೀಸ್ ಭದ್ರತೆ:

ಬೆಳ್ಳಂಬೆಳ್ಳಗ್ಗೆ ಎಚ್ಚೆತ್ತಿರುವ ಪೊಲೀಸರು ನಗರದ ಯಶವಂತಪುರ ವೃತ್ತದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಬ್ಯಾರಿಕೇಡ್ ಹಾಕಿ ರಸ್ತೆಯ ಮುಕ್ಕಾಲು ಭಾಗ ಬಂದ್ ಮಾಡಲಾಗಿದೆ. ಪ್ರತಿ ವಾಹನವನ್ನು ಪರಿಶೀಲನೆ ಬಳಿಕವೇ ಕಳುಹಿಸಲಾಗುತ್ತಿದೆ. ನಗರ ಪೊಲೀಸ್ ವ್ಯಾಪ್ತಿಯ ಉತ್ತರ ವಿಭಾಗ, ಆಗ್ನೇಯ ವಿಭಾಗ, ಈಶಾನ್ಯ ವಿಭಾಗ, ದಕ್ಷಿಣ ವಿಭಾಗ, ಕೇಂದ್ರ ವಿಭಾಗ, ವೈಟ್​ಫೀಲ್ಡ್​ಗಳಲ್ಲೂ ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಡುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ.

weekend-curfew-in-bengaluru-city
ಪೊಲೀಸರಿಂದ ತಪಾಸಣೆ

ಪಶ್ಚಿಮ ವಿಭಾಗದಲ್ಲೇ 125 ವಾಹನಗಳು ವಶಕ್ಕೆ:

ವಾರಾಂತ್ಯದ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸಲಾಗಿದೆ. ಕಾರು, ಬೈಕ್, ಆಟೋ ಸೇರಿ ಕೇವಲ ಪಶ್ಚಿಮ ವಿಭಾಗದಲ್ಲೇ 125 ವಿವಿಧ ವಾಹನಗಳನ್ನು ಈವರೆಗೆ ವಶಕ್ಕೆ​​​ ಪಡೆಯಲಾಗಿದೆ ಎಂದು ಕೆ. ಆರ್ ಮಾರುಕಟ್ಟೆಗೆ ಖುದ್ದು ಭೇಟಿ ನೀಡಿದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರಗಜ್ಜನ ವೇಷ ಹಾಕಿ ವಿಕೃತಿ ಮೆರೆದ ವರ: ಆರೋಪಿಗಳ ವಿರುದ್ಧ ದೂರು ದಾಖಲು

Last Updated : Jan 8, 2022, 11:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.