ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರಿಂದ ಇದೀಗ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ ಲಾಸ್ ಆಗಿದೆ.
ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೂ, ಜನರ ತುರ್ತು ಸೇವೆಗೆ ಧಕ್ಕೆಯುಂಟು ಆಗಬಾರದು ಎಂಬ ಕಾರಣಕ್ಕೆ ಆಟೋ, ಬಸ್ ಮತ್ತು ಮೆಟ್ರೋ ಓಡಾಟಕ್ಕೆ ಅನುಮತಿ ನೀಡಲಾಗಿದೆ.
ಮೆಟ್ರೋ ಕಾರ್ಯಾಚರಣೆ ಮಾಡಿದ್ರೂ ಆದಾಯ ಮಾತ್ರ ಬರ್ತಿಲ್ಲ. ವೀಕೆಂಡ್ ಕರ್ಫ್ಯೂನಲ್ಲಿ ಬೆಳಗ್ಗೆ 8 ರಿಂದ ರಾತ್ರಿ 9ರವರಗೆ 20 ನಿಮಿಷಕ್ಕೊಮ್ಮೆ ಮೆಟ್ರೋ ಕಾರ್ಯಾಚರಣೆ ಆಗ್ತಿದೆ. ಆದ್ರೂ ಆದಾಯ ಮಾತ್ರ ಇಲ್ಲ.
ಇದನ್ನೂ ಓದಿ: ಸಂಕ್ರಾಂತಿಗೆ ಕಾಯ್ದಿದ್ದೇ ಬಂತು, ಸಂಪುಟ ಪುನಾರಚನೆ ಆಗಲಿಲ್ಲ.. ಆಕಾಂಕ್ಷಿಗಳು 5 ರಾಜ್ಯ ಚುನಾವಣೆ ಮುಗಿಯುವವರೆಗೂ ಕಾಯಲೇಬೇಕು..
ಶನಿವಾರ ಮೆಟ್ರೋದಲ್ಲಿ 36,458 ಪ್ರಯಾಣಿಕರು ಓಡಾಟ ಮಾಡಿದ್ದಾರೆ. ಅದರಲ್ಲಿ ನೇರಳೆ ಮಾರ್ಗದಲ್ಲಿ-14,053, ಹಸಿರು ಮಾರ್ಗದಲ್ಲಿ 16,340 ಪ್ರಯಾಣಿಕರು ಓಡಾಡಿದ್ದಾರೆ. ವೀಕೆಂಡ್ ಕರ್ಫ್ಯೂಗೂ ಮೊದಲು ನಿತ್ಯ ಸುಮಾರು 4 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಟ ನಡೆಸುತ್ತಿದ್ರು.
ಆದ್ರೆ, ವೀಕೆಂಡ್ ಕರ್ಫ್ಯೂನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಓಡಾಟ ನಡೆಸಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಮೆಟ್ರೋ ಓಡಾಟ ನಡೆಸಿದ್ರೂ, ನಿನ್ನೆ 9 ಲಕ್ಷದ 63 ಸಾವಿರ ಆದಾಯ ಸಂಗ್ರಹವಾಗಿದೆ.
ನಿತ್ಯ ಸುಮಾರು 4 ಕೋಟಿ ರೂ. ಕಾರ್ಯಾಚರಣೆ ಆದಾಯ ಬರುತ್ತಿತ್ತು. ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಮೆಟ್ರೋಗೆ ಕೋಟಿ ರೂಪಾಯಿ ಆದಾಯ ಲಾಸ್ ಆಗಿದೆ. ಮೆಟ್ರೋ ಕಾರ್ಯಾಚರಣೆಯಿಂದ ನಿರ್ವಹಣೆ ವೆಚ್ಚವೂ ಸಂಗ್ರಹವಾಗಿಲ್ಲ ಎಂದು ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.