ಬೆಂಗಳೂರು: ಹಾನಗಲ್ನಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಾಧಿಕಾರ ರಚನೆ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಗುತ್ತದೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲೇ ಯಾತ್ರಿ ನಿವಾಸ ಮತ್ತು ಸಂಗೀತ ಶಾಲೆಯನ್ನು ಆರಂಭಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಮಾನೆ ಶ್ರೀನಿವಾಸರವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಂಡಿತ ಪಂಚಾಕ್ಷರಿ ಗವಾಯಿಗಳ ಗೌರವಾರ್ಥ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಪ್ರಾಧಿಕಾರ ರಚನೆ ಕುರಿತು ಸರ್ಕಾರದ ಪರಿಶೀಲನೆಯಲ್ಲಿದೆ. ಸಿಎಂ ಜೊತೆ ಚರ್ಚೆ ನಡೆಸಿ ಪ್ರಾಧಿಕಾರ ರಚನೆ ಬಗ್ಗೆ ಹಣಕಾಸು ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ. ಯಾತ್ರಿ ನಿವಾಸ, ಸಂಗೀತ ಶಾಲೆ ಆಗಬೇಕು ಎನ್ನುವ ಮನವಿ ಮಾಡಲಾಗಿದೆ ಎಂದರು.
ಓದಿ: ಪಂಚಮಸಾಲಿ ಹೋರಾಟ ಅಂತ್ಯ?: 6 ತಿಂಗಳು ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದ್ದೇಕೆ ಯತ್ನಾಳ್?
ಅಂಧಮಕ್ಕಳ ಸಂಗೀತ ತರಬೇತಿ ಉದ್ದೇಶದ ಬೇಡಿಕೆ ಪರಿಗಣಿಸಲಾಗುತ್ತದೆ. ಈ ಎರಡೂ ಬೇಡಿಕೆಗಳ ಕುರಿತಂತೆ ಇಲಾಖೆಯಿಂದ ಈ ವರ್ಷದ ಬಜೆಟ್ನಲ್ಲೇ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.