ETV Bharat / state

SDPI, PFI ಬ್ಯಾನ್ ಮಾಡುತ್ತೇವೆ, ಯಾರನ್ನೂ ಬಿಡುವುದಿಲ್ಲ: ಸಿ.ಟಿ.ರವಿ

C T Ravi reaction SDPI, PFI ban: ಸಿಮಿ ಸಂಘಟನೆ ಬ್ಯಾನ್ ಆದ ಬಳಿಕ ಈ ಎಸ್​.ಡಿ.ಪಿ.ಐ ಮತ್ತು ಪಿಎಫ್​ಐ ಹುಟ್ಟಿಕೊಂಡಿವೆ- ಇವುಗಳನ್ನು ಸಹ ನಿಷೇಧಿಸುತ್ತೇವೆ, ಯಾರನ್ನೂ ಬಿಡೊಲ್ಲ- ಸಿ ಟಿ ರವಿ ಗುಡುಗು

we-will-ban-sdpi-pfi-says-ct-ravi
SDPI, PFI ಬ್ಯಾನ್ ಮಾಡುತ್ತೇವೆ, ಯಾರನ್ನೂ ಬಿಡುವುದಿಲ್ಲ: ಸಿ.ಟಿ.ರವಿ
author img

By

Published : Jul 28, 2022, 3:13 PM IST

Updated : Jul 28, 2022, 3:34 PM IST

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ದೇಶಾದ್ಯಂತ ಚರ್ಚೆಯಾಗ್ತಿದೆ. ಈ ಮಧ್ಯೆ SDPI, PFI ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ. ಯಾರನ್ನೂ ಬಿಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸಿಮಿ ಸಂಘಟನೆ ಬ್ಯಾನ್ ಆದ ಬಳಿಕ, SDPI, PFI ಹುಟ್ಟಿಕೊಂಡಿವೆ. ಭಾರತ ತನ್ನೆಲ್ಲಾ ಶಕ್ತಿ ಬಳಸಿಕೊಂಡು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕಿದೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಕೇರಳದ 15ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದಿದೆ. ಪ್ರಚೋದನೆಗೆ ಕಾರಣವಾದ ಮೂಲ ಸಂಗತಿಯನ್ನು ಬೇರು ಸಹಿತ ಕೀಳುವ ಕೆಲಸ ನಡೆಯುತ್ತಿದೆ. PFI, SDPI ಸಂಘಟನೆ ನಿಷೇಧ ಮಾಡುವುದು, ಯು.ಪಿ ಮಾದರಿ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಆ ಬಗ್ಗೆ ‌ಶಿಫಾರಸ್ಸು ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದರು.

ಸಮೂಹ ಸನ್ನಿಗೆ ಒಳಗಾಗಬೇಡಿ : ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡ್ತೀನಿ, ಸಮೂಹ ಸನ್ನಿಗೆ ಒಳಗಾಗಬೇಡಿ. ನಮ್ಮನ್ನು ನಂಬದಿದ್ರೆ, ಕಾಂಗ್ರೆಸ್ ಹಿಂದೂ ಅಂತ ನಂಬ್ತೀರಾ. ಅವರ ಹೇಳಿಕೆ ಗಮನಿಸಿದ್ದೀರಾ?. ನಾವು ಗೋ ಹತ್ಯೆ ನಿಷೇಧ ಅಂದ್ರೆ, ಗೋ ಮಾಂಸ ಹತ್ಯೆಗೆ ಅವಕಾಶ ಅಂದ್ರು. ಅನೇಕ‌ ರೀತಿ‌ ಹೇಳುವವರು ಅಧಿಕಾರಕ್ಕೆ ಬರಬೇಕಾ?. ನಮ್ಮ ಕಾರ್ಯಕರ್ತ ಪ್ರವೀಣ್ ಹತ್ಯೆ ಬಗ್ಗೆ ನಮಗೆ ದುಃಖ ಇದೆ. ನಿಮ್ಮ ಸಮೂಹ ಸನ್ನಿಯಿಂದ ಹಿಂದುತ್ವದ ವಿರೋಧಿಗಳಿಗೆ ಲಾಭ ಆಗಲಿದೆ. 150ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳಿವೆ. ಕಾಶ್ಮೀರ ಪಂಡಿತರ ‌ಹತ್ಯೆ ಯಾಕೆ ಆಯ್ತು?. ದೇಶದಲ್ಲಿ ಹೆದರಿಸಿ ಕೆಲಸ ಸಾಧಿಸಲು ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಡಿ, ಸಿಎಂ ಜೊತೆ ಚರ್ಚೆ ಮಾಡಿದ್ದೇವೆ ಎಂದು ಸಿ ಟಿ ರವಿ ಭರವಸೆ ನೀಡಿದರು.

ನಾವು ಈಗ ಅಧಿಕಾರಕ್ಕೆ ಬಂದಿರಬಹುದು. ನಾವು ಕೂಡ ಹಿಂದೆ ಬೀದಿಯಲ್ಲಿ ಹೋರಾಟ ಮಾಡಿ ಬಂದಿದ್ದೇವೆ. ಗೋಲಿ ಬಾರ್ ಆದಾಗ ನಾನು ಬದುಕಿ ಬಂದಿದ್ದೇನೆ. ಭಯೋತ್ಪಾದನೆಯನ್ನು ಸಮಾಜ ಒಗ್ಗಟ್ಟಾಗಿ ಎದುರಿಸಬೇಕು. ಇಂತವರ ಮೇಲೆ ಬುಲ್ಡೋಜರ್ ಏರಿಸಬೇಕು ಎಂದು ನಿಮ್ಮ ಬಯಕೆ ಇದೆ. ಆದರೆ ಭಯೋತ್ಪಾದನೆ ಜಾಗತಿಕ ಸಮಸ್ಯೆ. ನಾವು ಹೆದರುತ್ತಿರೋದಕ್ಕೆ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದೆ ಎಂದು ತಿಳಿಸಿದರು.

ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಿರುವುದು ಬಿಜೆಪಿ : ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸುತ್ತಿರುವುದು ಬಿಜೆಪಿ. ನಾನು ಪಕ್ಷದ ಬಾವುಟ ಕಟ್ಟಿದವನೇ. ನಮ್ಮ ಭಾವನೆ, ಕಾರ್ಯಕರ್ತರ ಭಾವನೆ ಬೇರೆ ಇದೆಯೇ.?. ಹಿಂದುತ್ವದ ವಿರೋಧಿ ಸರ್ಕಾರ ಇದ್ರೆ, ರಾಷ್ಟ್ರ ಧ್ವಜ ಹಾರಿಸಲು ಹೋದವರ ಮೇಲೆ ಗುಂಡು ಹಾರಿಸಿದವರು ಅವರು. ನಿಮ್ಮ ಮನೋಭಾವನೆಗೆ ಸರ್ಕಾರ ಇರಬೇಕು ಅನ್ನೋದನ್ನೇ ಸರ್ಕಾರ ಅಲೋಚಿಸುತ್ತಿದೆ. ಕಾರ್ಯಕರ್ತರ ಭಾವನೆಗೆ ನಾವು ಬದ್ಧ. ಘಟನೆ ಹಿಂದೆ ಇರೋರನ್ನು ಪತ್ತೆ ಹಚ್ಚಬೇಕಿದೆ. ಯೋಗಿ ಮಾಡೆಲ್ ಇರಬಹುದು, ಮೋದಿ ಮಾಡೆಲ್ ಇರಬಹುದು ಬಿಜೆಪಿಯೇ ನೀಡಿರೋದು. ಅದನ್ನು ಕಾಂಗ್ರೆಸ್ ಆಗಲಿ, ಬೇರೆಯವರಾಗಲಿ ಮಾಡಿಲ್ಲ. ಟಾರ್ಗೆಟ್ ಮಾಡಿ ಹತ್ಯೆಗೈದರೆ ನಮ್ಮ ವಿಚಾರಧಾರೆ ಹತ್ಯೆ ಮಾಡಲಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು.

ಎಲ್ಲರೂ ಅಧಿಕಾರಕ್ಕಾಗಿ ರಾಜಕಾರಣದಲ್ಲಿದ್ದಾರೆ ಎಂದು ಭಾವಿಸಬೇಡಿ. ನಾವೂ ಕೂಡ ಬೀದಿಯಲ್ಲಿ ಇದ್ದು ಹೋರಾಟ ಮಾಡಿ ಬಂದವರೇ. ಸಂದರ್ಭ ಬಂದ್ರೆ, ನಾವೂ ಕೂಡ ಕಾರ್ಯಕರ್ತರ ಜೊತೆ ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಸಿ.ಟಿ ರವಿ ಹೇಳಿದರು.

ಓದಿ : Praveen Murder case.. ಇಬ್ಬರು ಆರೋಪಿಗಳ ಬಂಧನ: ಎಡಿಜಿಪಿ ಮಾಹಿತಿ

Last Updated : Jul 28, 2022, 3:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.