ETV Bharat / state

ನಾವೂ ಕೂಡ ಹಿಂದಿ ಹೇರಿಕೆ ವಿರೋಧಿಗಳೆೇ: ಕೇಂದ್ರ ಸಚಿವ ಡಿವಿಎಸ್

author img

By

Published : Sep 15, 2019, 4:19 PM IST

ಕನ್ನಡ ಭಾಷೆ ಉಳಿಸಿ ಬೆಳೆಸುವ ವಿಚಾರದ ಬಗ್ಗೆ ಬದ್ದತೆ ಇದೆ. ನಾನೂ ಕನ್ನಡದ ಪರ ಇದ್ದೇನೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ರು.

ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ 'ಹಿಂದಿ ದಿವಸ್' ಆಚರಣೆ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ಇದು ಕನ್ನಡ ವಿರೋಧಿ ಅಂತ ಅಲ್ಲ, ಹಿಂದಿ ಹೇರಿಕೆಯೂ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ರು.

ಕನ್ನಡ ಭಾಷೆ ಉಳಿಸಿ, ಬೆಳೆಸುವ ವಿಚಾರದಲ್ಲಿ ನಾನೂ ಕೂಡ ಬದ್ಧನಾಗಿದ್ದೇನೆ. ಕನ್ನಡದ ಪರ ಇದ್ದೇನೆ, ಕನ್ನಡದಲ್ಲೇ ಸಹಿ ಮಾಡುತ್ತೇನೆ. ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ನೀಡಬೇಕು, ಆಗ ಮಾತ್ರ ಸಂಸ್ಕೃತಿ ಉಳಿಯುತ್ತೆ ಎಂದು ಮೋದಿ ಹೇಳಿದ್ದಾರೆ. ತ್ರಿಭಾಷಾ ಸೂತ್ರಕ್ಕೆ ನಮ್ಮ ಒಪ್ಪಿಗೆ ಇದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದು‌ ಕೇಂದ್ರದ ನಿರ್ಧಾರವನ್ನು ಸದಾನಂದಗೌಡ ಸಮರ್ಥಿಸಿಕೊಂಡರು.

ಗ್ರಾಮೀಣ ಬ್ಯಾಂಕ್, ರಾಷ್ಟ್ರೀಯ ಬ್ಯಾಂಕು​ಗಳಲ್ಲೂ ಕನ್ನಡ ಅನುಷ್ಠಾನಗೊಳಿಸಲಾಗಿದೆ. ಇಲ್ಲಿ ಭಾಷೆ ಹೇರಿಕೆಯ ಪ್ರಶ್ನೆಯೇ ಉದ್ಭವಿಸೋದಿಲ್ಲ. ನಾವೂ ಕೂಡ ಹಿಂದಿ‌ ಹೇರಿಕೆ ವಿರೋಧಿಗಳೇ. ಈ ಬಗ್ಗೆ ಹಿಂದೆ ಕೂಡ ಚರ್ಚೆಯಾಗಿತ್ತು, ಆದರೂ ಈ ರೀತಿ ವರ್ತಿಸೋದು ಸರಿಯಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಈಗ ಸ್ವಂತ ಕ್ಷೇತ್ರವನ್ನೂ ಕಳೆದುಕೊಂಡಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಬಳಿ ಹೋಗಿ ವಾಪಸ್ ಬಂದಿದ್ದಾರೆ. ಆದ್ದರಿಂದ ಈ ರೀತಿಯ ವಿಚಾರ ಎತ್ತಿಕೊಂಡಿದ್ದಾರೆ ಎಂದು ಟಾಂಗ್ ನೀಡಿದ್ರು.

ಒಕ್ಕಲಿಗರ ಓಲೈಕೆಗೆ ಪಟೇಲ್ ಮಾದರಿಯ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎನ್ನುವುದು ಸರಿಯಲ್ಲ. ಬೆಂಗಳೂರು ಕಟ್ಟಿದ್ದು ಕೆಂಪೇಗೌಡರು. 500 ವರ್ಷದ ಹಿಂದೆ ಬೆಂಗಳೂರು ಹೇಗಿರಬೇಕು ಎಂದು ಕಲ್ಪನೆ ಇಟ್ಟುಕೊಂಡವರು. ಮತ್ತೆ ಅಂತವರು ಕರ್ನಾಟಕದಲ್ಲಿ ಹುಟ್ಟಲಿಲ್ಲ. ಪಟೇಲ್‌ ಕೇವಲ ಪಟೇಲ್ ಸಮುದಾಯಕ್ಕೆ ಸೀಮಿತ ಅಲ್ಲ. ಅದೇ ರೀತಿ‌ ಕೆಂಪೇಗೌಡ ಒಕ್ಕಲಿಗ ಜಾತಿಯಲ್ಲಿ ಹುಟ್ಟಿದರೂ ಒಕ್ಕಲಿಗರಿಗೆ ಮಾತ್ರ ಸೀಮಿತವಲ್ಲ. ಕೆಂಪೇಗೌಡ ಎಲ್ಲ ಸಮುದಾಯಕ್ಕೆ ಸೇರಿದ ನಾಯಕ. ಕಾಂಗ್ರೆಸ್ ‌ನಾಯಕರು ಎಲ್ಲವನ್ನೂ ಕ್ಷುಲ್ಲಕವಾಗಿ ನೋಡುತ್ತಾರೆ, ಅವರಿಗೆ ದೇವರೇ ಬುದ್ದಿ ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಸಚಿವ ಸೋಮಣ್ಣ, ನನಗೂ ಹಿಂದಿ ಬರುವುದಿಲ್ಲ ಅದರಿಂದ ನಮಗೆ ಸಾಕಷ್ಟು ಸಮಸ್ಯೆಯೂ ಆಗಿದೆ. ಕನ್ನಡ‌ ಇಟ್ಟುಕೊಂಡೇ ಹಿಂದಿ‌ ಕಲಿಕೆ‌ ಅಗತ್ಯ ಆದರೆ ಕಲಿಕೆ ಕಡ್ಡಾಯವಾಗಬಾರದು ಎಂದಿದ್ದಾರೆ.

Intro:

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ದಿವಸ್ ಆಚರಣೆ ಹಿನ್ನೆಲೆಯಲ್ಲಿ ಮಾತಾಡಿದ್ದೇ ಹೊರತು ಇದು ಕನ್ನಡ ವಿರೋಧಿ ಅಂತಲ್ಲ. ಹಿಂದಿ ಹೇರಿಕೆಯೂ ಅಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಂದಿಗೆ ಮಾತನಾಡಿದ ಅವರು,ಕನ್ನಡ ಭಾಷೆ ಉಳಿಸಿ ಬೆಳೆಸುವ ವಿಚಾರದಲ್ಲಿ ನಾನೂ ಕೂಡ ಬದ್ಧನಾಗಿದ್ದೇನೆ.ನಾನೂ ಕನ್ನಡದ ಪರ ಇದ್ದೇನೆ, ಕನ್ನಡದಲ್ಲೇ ಸಹಿ ಮಾಡುತ್ತೇನೆ.ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ನೀಡಬೇಕು, ಆಗ ಮಾತ್ರ ಸಂಸ್ಕೃತಿ ಉಳಿಯುತ್ತೆ ಎಂದು ಮೋದಿ ಹೇಳಿದ್ದಾರೆ.ಪ್ರಧಾನಿ ಮೋದಿ‌ ಕೂಡ‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ತ್ರಿಭಾಷಾ ಸೂತ್ರಕ್ಕೆ ನಮ್ಮ ಒಪ್ಪಿಗೆ ಇದೆ.ಈ ಬಗ್ಗೆ ನಿರ್ಮಲಾ ಸೀತಾರಾಮನ್ ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದು‌ ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಗ್ರಾಮೀಣ ಬ್ಯಾಂಕ್, ನ್ಯಾಷನಲ್ ಬ್ಯಾಂಕ್ ಗಳಲ್ಲೂ ಕನ್ನಡ ಅನುಷ್ಠಾನಗೊಳಿಸಿದ್ದಾರೆ.ಇಲ್ಲಿ ಭಾಷೆಯ‌ ಹೇರಿಕೆ ಪ್ರಶ್ನೆಯೇ ಇಲ್ಲ.ನಾವೂ ಕೂಡ ಹಿಂದಿ‌ ಹೇರಿಕೆ ವಿರೋಧಿಗಳೇ.ಈ ಬಗ್ಗೆ ಹಿಂದೆ ಕೂಡ ಚರ್ಚೆಯಾಗಿತ್ತು.ಆದರೂ ಈ ರೀತಿ ವರ್ತಿಸೋದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಈಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ.ಸಿದ್ದರಾಮಯ್ಯ ಸ್ವಂತ ಕ್ಷೇತ್ರ ಕಳೆದುಕೊಂಡಿದ್ದಾರೆ.ಪ್ರತಿಪಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಬಳಿ ಹೋಗಿ ವಾಪಸ್ ಬಂದಿದ್ದಾರೆ.ಆದ್ದರಿಂದ ಈ ರೀತಿಯ ವಿಚಾರ ಎತ್ತಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಗೆ ಕೇಂದ್ರ ಸಚಿವ ಸದಾನಂದ ಗೌಡ ಟಾಂಗ್ ನೀಡಿದರು.

ಒಕ್ಕಲಿಗರ ಓಲೈಕೆಗೆ ಪಟೇಲ್ ಮಾದರಿಯ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎನ್ನುವುದು ಸರಿಯಲ್ಲ.ಬೆಂಗಳೂರು ಕಟ್ಟಿದ್ದು ಕೆಂಪೇಗೌಡ.500 ವರ್ಷದ ಹಿಂದೆ ಬೆಂಗಳೂರು ಹೇಗಿರಬೇಕು ಎಂದು ಕಲ್ಪನೆ ಇಟ್ಟುಕೊಂಡವರು.ಮತ್ತೆ ಅಂತವರು ಕರ್ನಾಟಕದಲ್ಲಿ ಹುಟ್ಟಲಿಲ್ಲ.ಪಟೇಲ್‌ ಕೇವಲ ಪಟೇಲ್ ಸಮುದಾಯಕ್ಕೆ ಸೀಮಿತ ಅಲ್ಲ.ಅದೇ ರೀತಿ‌ ಕೆಂಪೇಗೌಡ ಒಕ್ಕಲಿಗ ಜಾತಿಯಲ್ಲಿ ಹುಟ್ಟಿದರೂ ಒಕ್ಕಲಿಗರಿಗೆ ಮಾತ್ರ ಸೀಮಿತವಲ್ಲ.ಕೆಂಪೇಗೌಡ ಎಲ್ಲ ಸಮುದಾಯಕ್ಕೆ ಸೇರಿದ ನಾಯಕ.ಕಾಂಗ್ರೆಸ್ ‌ನಾಯಕರು ಎಲ್ಲವನ್ನೂ ಕ್ಷುಲ್ಲಕವಾಗಿ ನೋಡ್ತಾರೆ.ಕಾಂಗ್ರೆಸ್ ನಾಯಕರಿಗೆ ದೇವರೇ ಬುದ್ದಿ ಹೇಳಬೇಕು ಎಂದು ಕೈ ನಾಯಕರಿಗೆ ತಿರುಗೇಟು ನೀಡಿದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.