ETV Bharat / state

ದೇಶದಲ್ಲಿ ನಿಷೇಧಿತ ಮಲಹೊರುವ ಪದ್ಧತಿಯನ್ನು ಬೇರುಸಹಿತ ಕಿತ್ತು ಹಾಕಬೇಕು: ಬಿ.ಎಲ್​.ಸಂತೋಷ್ - ಮಲಹೊರುವ ಪದ್ಧತಿ ಕುರಿತು ಸಂತೋಷ್​ ಹೇಳಿಕೆ

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ವಿವಿಧ ಸಫಾಯಿ ಕರ್ಮಚಾರಿ ಆಯೋಗಗಳು ಒಗ್ಗೂಡಿ 2013ರ ಮಲ‌ಹೊರುವ ಪದ್ಧತಿ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಕಾರ್ಯಾಗಾರ ಆಯೋಜನೆ ಮಾಡಿದ್ದವು. ಈ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗವಹಿಸಿದ್ದರು.

ಮಲ‌ಹೊರುವ ಪದ್ಧತಿ ಕುರಿತ ಕಾರ್ಯಗಾರ
BL Santosh
author img

By

Published : Jan 15, 2021, 9:10 PM IST

ಬೆಂಗಳೂರು: ಇಂದು ನಗರದ ಟೌನ್‌ಹಾಲ್‌ನಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಪರಿಷತ್ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಯೋಜನೆಗಳು, ಕಾರ್ಯಕ್ಷಮತೆ, ಸಾಧನೆ, 2013ರ ಮಲ‌ಹೊರುವ ಪದ್ಧತಿ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ದೇಶದಲ್ಲಿ ನಿಷೇಧಿತ ಮಲ ಹೊರುವ ಪದ್ಧತಿಯನ್ನು ಬೇರುಸಹಿತ ಕಿತ್ತು ಶೂನ್ಯಕ್ಕೆ ಇಳಿಸಬೇಕು. ದೇಶದಲ್ಲಿ ಈ ಪದ್ಧತಿ ಕಾಲಕ್ರಮೇಣ ನಿವಾರಣೆಯಾಗುತ್ತಿದೆ. ಇದನ್ನು ಬೇರುಮಟ್ಟದಿಂದ ಕಿತ್ತು ಶೂನ್ಯಕ್ಕೆ ಇಳಿಸಬೇಕು. ಇಲ್ಲವಾದರೆ ಬದುಕಿಗೆ ಅರ್ಥವಿರುವುದಿಲ್ಲ. ಮಿಲಿಟರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ ಪ್ರಾಣಾಪಾಯಗಳು ತಪ್ಪಿವೆ. ಹೀಗಾಗಿ ತಂತ್ರಜ್ಞಾನ ಬಳಸಿಕೊಂಡು ಈ ಮಲಹೊರುವ ಪದ್ಧತಿಯನ್ನು ನೂರಕ್ಕೆ ನೂರರಷ್ಟು ನಿರ್ಮೂಲನೆ ಮಾಡಬೇಕು. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯೂ ಸಫಾಯಿ ಕರ್ಮಚಾರಿ ಕೋಪರೇಟಿವ್ ಸೊಸೈಟಿ ತೆರೆಯಲು ಯೋಜನೆ ರೂಪಿಸಿದೆ. ಇನ್ನು ಆರು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ ಎಂದರು.

ಸಮಾಜವು ಸಫಾಯಿ ಕರ್ಮಚಾರಿ ಹಾಗೂ ಪೌರ ಕಾರ್ಮಿಕ ವೃತ್ತಿಯನ್ನು ಸಂವೇದನೆಯಿಂದ ನೋಡುವುದರೊಂದಿಗೆ ಗೌರವಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾರ್ಗದರ್ಶನ ಮಾಡಿದರು. ಜಗಜೀವನ್ ರಾಮ್ ಅವರು ಆಡಳಿತ ವ್ಯವಸ್ಥೆಯ ಒಳಗೆ ಇದ್ದುಕೊಂಡು ಶೋಷಿತರಿಗೆ ನ್ಯಾಯಕೊಡಿಸಲು ಹೋರಾಡಿದರು. ಈ ಮಹನಿಯರ ಹೋರಾಟದ ಫಲವಾಗಿ ಸಫಾಯಿ ಕರ್ಮಚಾರಿ ಆಯೋಗದಂತಹ ವ್ಯವಸ್ಥೆಗಳು ರಚನೆಯಾಗಿವೆ. ಹೀಗಾಗಿ ಸಮುದಾಯದವರು ಸಂಘಟಿತರಾಗಿ ಜಾಗೃತಿ ಬೆಳೆಸಿಕೊಂಡು ಹಕ್ಕೊತ್ತಾಯ ಮಾಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಸರ್ಕಾರಿ ವ್ಯವಸ್ಥೆಯಲ್ಲಿ ಹಲವು ಕೆಲಸಗಳಾಗುತ್ತಿವೆ. ಈ ನಡುವೆ ಕೆಲ ಮಧ್ಯವರ್ತಿಗಳು ಸೇರಿಕೊಂಡಿರುವುದರಿಂದ ಫಲಾನುಭವಿಗಳಿಗೆ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳ ಖಾತೆಗೆ ನೇರವಾಗಿ ವೇತನ ಜಮೆಯಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಆರಂಭದಲ್ಲಿ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅಪಾಯಕಾರಿ ಸಂದರ್ಭದಲ್ಲಿ ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಕೊರೊನಾ ವಾರಿಯರ್ಸ್ ಎಂದು ಕರೆದಿದ್ದರು. ಇದರಿಂದಾಗಿ ಇಂದು ದೇಶದಲ್ಲಿ ಈ ವರ್ಗಗಳನ್ನು ನೋಡುವ ದೃಷ್ಟಿಕೋನ ಬದಲಾಗಿದ್ದು, ಗೌರವದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ನಂತರ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್​​ ಹಿರೇಮನಿ ಮಾತನಾಡಿ, ಸಫಾಯಿ ಕರ್ಮಚಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವರು ಯೋಜನೆಗಳನ್ನು ತಂದು ಆಯೋಗಕ್ಕೆ ಶಕ್ತಿ ತುಂಬವ ಕೆಲಸ ಮಾಡುತ್ತಿದೆ.ಈ ಸರ್ಕಾರ ಬಂದ ಬಳಿಕ ದೇಶದಲ್ಲಿ ಸಫಾಯಿ ಕರ್ಮಚಾರಿಗಳನ್ನು ಗೌರವಯುತವಾಗಿ ನೋಡುವ ವಾತಾವರಣ ನಿರ್ಮಾಣವಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಪೌರಕಾರ್ಮಿಕರ ಖಾಯಂ ನೇಮಕಾತಿ ಸಂಬಂಧ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಮತ್ತಷ್ಟು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಈಡೇರಿಸುವ ವಿಶ್ವಾಸವಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.