ETV Bharat / state

ಸುಪ್ರೀಂಕೋರ್ಟ್​ ತೀರ್ಪನ್ನು ಗೌರವಿಸುತ್ತೇವೆ: ದಿನೇಶ್​ ಗುಂಡೂರಾವ್​​ - dinesh gundurao press meet in bangalore

ಎಲ್ಲರೂ ಒಗ್ಗಟ್ಟಾಗಿ ಸುಪ್ರೀಂ ತೀರ್ಪನ್ನು ಗೌರವಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದರು.

ದಿನೇಶ್ ಗುಂಡೂರಾವ್ ಹೇಳಿಕೆ
author img

By

Published : Nov 9, 2019, 2:59 PM IST

ಬೆಂಗಳೂರು: ಅಯೋಧ್ಯೆ ವಿವಾದಕ್ಕೆ ಇಂದು ಅಂತ್ಯ ಸಿಕ್ಕಂತಾಗಿದೆ. ದೇಶದ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಈ ತೀರ್ಪನ್ನ ಗೌರವಯುತವಾಗಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದರು.

ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಎಲ್ಲರೂ ಒಗ್ಗಟ್ಟಾಗಿ ತೀರ್ಪನ್ನು ಗೌರವಿಸಬೇಕು. ಶಾಂತಿ ಕಾಪಾಡಬೇಕು ಎಂದು ಹೇಳಿದರು.

ಬೆಂಗಳೂರು: ಅಯೋಧ್ಯೆ ವಿವಾದಕ್ಕೆ ಇಂದು ಅಂತ್ಯ ಸಿಕ್ಕಂತಾಗಿದೆ. ದೇಶದ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಈ ತೀರ್ಪನ್ನ ಗೌರವಯುತವಾಗಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದರು.

ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಎಲ್ಲರೂ ಒಗ್ಗಟ್ಟಾಗಿ ತೀರ್ಪನ್ನು ಗೌರವಿಸಬೇಕು. ಶಾಂತಿ ಕಾಪಾಡಬೇಕು ಎಂದು ಹೇಳಿದರು.

Intro:newsBody:ಸುಪ್ರೀಂ ತೀರ್ಪಿನಿಂದ ದೇಶದ ಮೂಲಸೈದ್ಧಾಂತಿಕ ನಿಲುವಿಗೆ ಅವಕಾಶ ಸಿಕ್ಕಿದೆ: ದಿನೇಶ್ ಗುಂಡೂರಾವ್


ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನ ಗೌರವಿಸಿದ್ದೇವೆ. ದೇಶದ ಮೂಲಸೈದ್ಧಾಂತಿಕ ನಿಲುವಿಗೆ ಅವಕಾಶ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಾತ್ಯತೀತ ನಿಲುವಿಗೆ ಪೂರಕವಾಗಿ ತೀರ್ಪು ಬಂದಿದೆ. ದಶಕಗಳಿಂದ ಇದು ವಿವಾದಕ್ಕೊಳಗಾಗಿತ್ತು. ಇದಕ್ಕೆ ಇದೀಗ ಅಂತ್ಯ ಸಿಕ್ಕಂತಾಗಿದೆ. ದೇಶದ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಈ ತೀರ್ಪನ್ನ ಗೌರವಯುತವಾಗಿ ನಾವು ಒಪ್ಪಿಕೊಳ್ತೇವೆ. ನಮ್ಮ ದೇಶದ ಐಕ್ಯತೆಗೆ ಈ ತೀರ್ಪು ಸಾಕ್ಷಿಯಾಗಿದೆ ಎಂದರು.
ಯಾರಿಗೂ ಸೋಲು-ಗೆಲುವು ಇಲ್ಲ
ಇಲ್ಲಿ ಯಾರಿಗೂ ಸೋಲು ಗೆಲುವು ಎಂಬುದಿಲ್ಲ. ಎಲ್ಲರೂ ಅದನ್ನ ಗೌರವಿಸಲೇ ಬೇಕು. ವೈಯಕ್ತಿಕವಾಗಿ ನೋಡುವುದಕ್ಕೆ ಅವಕಾಶವಿಲ್ಲ. ಈ ತೀರ್ಪಿನಿಂದ ದೇಶಕ್ಕೆ ಜಯಸಿಕ್ಕಿದೆ. ಯಾವುದೋ ಪಕ್ಷ,ಸಂಘಟನೆಗೆ ಸಿಕ್ಕ ಗೆಲುವಲ್ಲ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಕೋರ್ಟ್ ತೀರ್ಪು ನೀಡಿದೆ ಎಂದರು.
ಪ್ರಚೋದನೆಗೆ ಬಳಸಿಕೊಳ್ಳದಿರಲಿ
ಬಿಜೆಪಿಯವರು ಐತಿಹಾಸಿಕ ತೀರ್ಪನ್ನು ಪ್ರಚೋದನೆಗೆ ಬಳಸಿಕೊಳ್ಳಲ್ಲ ಅನ್ನುವ ನಂಬಿಕೆ ನಮಗಿದೆ. ಹಾಗೆ ಬಳಸಿಕೊಂಡರೆ ಜನರೇ ಉತ್ತರ ನೀಡ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ, ಮಾಜಿ ಸಂಸದ ಉಗ್ರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಉಪಸ್ಥಿತರಿದ್ದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.