ETV Bharat / state

ರಾಜಕೀಯ ಸಭೆ-ಸಮಾರಂಭಗಳಿಗೂ ನಿರ್ಬಂಧ ಹೇರಲು ನಿಯಮ ತರುತ್ತೇವೆ: ಸಿಎಂ - ಶಾಲೆ ಆರಂಭ

ಹೆಚ್ಚುತ್ತಿರುವ ಕೋವಿಡ್(COVID)​​ ನಡುವೆಯೂ ರಾಜಕೀಯ ಸಭೆ, ಸಮಾರಂಭಗಳು ನಡೆಯುತ್ತಿವೆ. ಅವುಗಳಿಗೆ ನಿರ್ಬಂಧ ಹೇರಲು ನಿಯಮ ತರುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Sep 4, 2021, 11:56 AM IST

ಬೆಂಗಳೂರು: ಕೋವಿಡ್(COVID) ನಡುವೆಯೂ ರಾಜಕೀಯ ಸಭೆ, ಸಮಾರಂಭ, ರ್ಯಾಲಿಗಳು ನಡೆಯುತ್ತಿದ್ದು, ಇವುಗಳಿಗೆ ನಿರ್ಬಂಧ ಹೇರಲು ನಿಯಮ‌ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಲು ನಿಯಮ ತರುತ್ತೇವೆ: ಸಿಎಂ

‘ಮತ್ತೆ ಮಾರ್ಗಸೂಚಿ’

ಆರ್.ಟಿ. ನಗರದ ನಿವಾಸದಲ್ಲಿ ಮಾತನಾಡಿದ ಅವರು, ರಾಜಕೀಯ ಸಭೆ, ಸಮಾರಂಭಗಳನ್ನೆಲ್ಲ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೋವಿಡ್ ಹರಡುವ ಭೀತಿಯಿದ್ರೂ ಕೆಲವು ಸಮಾರಂಭಗಳು ನಡೆದಿವೆ. ಇವುಗಳಿಗೆ ನಿರ್ಬಂಧ ಹೇರಲು ನಿಯಮಗಳನ್ನು ಜಾರಿಗೊಳಿಸುತ್ತೇವೆ. ಈ ಬಗ್ಗೆ ಪುನಃ ಮಾರ್ಗಸೂಚಿ ತರುತ್ತೇವೆ ಎಂದರು.

ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಚರ್ಚೆ

ಶೀಘ್ರದಲ್ಲೇ 6,7,8 ನೇ ತರಗತಿಗಳನ್ನು ಆರಂಭಿಸುತ್ತಿದ್ದೇವೆ. ಇದರ ಫಲಿತಾಂಶ ನೋಡಿಕೊಂಡು 1 ರಿಂದ 5 ನೇ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಿಎಂ ಮಾಹಿತಿ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರದ ಅಧ್ಯಯನ ತಂಡ ಭೇಟಿ

ಇಂದು ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಕೇಂದ್ರದ ಅಧ್ಯಯನ ತಂಡ ಭೇಟಿ ನೀಡಲಿದ್ದು, ರಾಜ್ಯದ ಅಧಿಕಾರಿಗಳೂ ಅವರೊಂದಿಗೆ ಇರುತ್ತಾರೆ. ಸಂಪುಟ ಸಭೆ ಬಳಿಕ ಕೇಂದ್ರದ ಅಧ್ಯಯನ ತಂಡದ ಜತೆ ಚರ್ಚೆ ನಡೆಸುತ್ತೇವೆ. ನಮ್ಮಲ್ಲಿರುವ ವರದಿ, ಮಾಹಿತಿಗಳನ್ನು ನೀಡಿ ಆಗಿರುವ ಹಾನಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಎನ್​ಡಿಆರ್​ಎಫ್ ನಿಧಿಯಡಿ ನಮಗೆ ಸಿಗಬೇಕಾದ ಅನುದಾನ ಸಿಗುತ್ತದೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿಎಂ ತವರಿನಲ್ಲಿ ಹೆಚ್ಚಿದ ಜಾಗೃತಿ.. 28 ಗ್ರಾಮಗಳಲ್ಲಿ ನೂರಕ್ಕೆ ನೂರರಷ್ಟು ಕೋವಿಡ್​ ಲಸಿಕೆ ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.