ETV Bharat / state

ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ: ಪ್ರತಿಪಕ್ಷಗಳಿಗೆ ಸಿಎಂ ತಿರುಗೇಟು - We didn't get debt for fun

ವಿಧಾನಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಗೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಗದ್ದಲ, ಕೋಲಾಹಲದ ನಡುವೆಯೇ ಉತ್ತರ ನೀಡಿದ ಸಿಎಂ ಯಡಿಯೂರಪ್ಪ, ಸಾಲ ಮಾಡದೆ ಯಾವ ಸರ್ಕಾರಗಳಾದರೂ ಯೋಜನೆಗಳನ್ನು ಅನುಷ್ಠಾನ ಮಾಡಿದ ಉದಾಹರಣೆಗಳಿವೆಯೇ?. ಇದ್ದರೆ ಹೇಳಿ ಎಂದು ಸವಾಲು ಹಾಕಿದರು.

ವಿಪಕ್ಷಗಳಿಗೆ ತಿರುಗೇಟು
ವಿಪಕ್ಷಗಳಿಗೆ ತಿರುಗೇಟು
author img

By

Published : Mar 24, 2021, 5:15 PM IST

ಬೆಂಗಳೂರು: " ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ ಅಥವಾ ಮೋಜಿಗಾಗಿ ಇಲ್ಲವೆ, ಔತಣಕೂಟ ನಡೆಸಲು ಸಾಲ ಮಾಡಿಲ್ಲ " ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಗೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಗದ್ದಲ, ಕೋಲಾಹಲದ ನಡುವೆಯೇ ಉತ್ತರ ನೀಡಿದ ಸಿಎಂ, ಸಾಲ ಮಾಡದೆ ಯಾವ ಸರ್ಕಾರಗಳಾದರೂ ಯೋಜನೆಗಳನ್ನು ಅನುಷ್ಠಾನ ಮಾಡಿದ ಉದಾಹರಣೆಗಳಿವೆಯೇ?. ಇದ್ದರೆ ಹೇಳಿ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಜನರಿಗೆ ಯಾವುದೇ ತೆರಿಗೆ, ಸರ್​ಚಾರ್ಜ್, ಸೆಸ್ ವಿಧಿಸದೆ ಜನಪರವಾದ ಬಜೆಟ್ ಅನ್ನು ಮಂಡನೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದಿಂದ ಜನರ ಜೀವ ರಕ್ಷಣೆ ಮಾಡುವುದು ಮತ್ತು ಪ್ರಕೃತಿ ವಿಕೋಪಗಳಿಂದ ಉಂಟಾಗಿದ್ದ ಸಂಕಷ್ಟಗಳಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಲ ಮಾಡಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಎಲ್ಲವೂ ಚೆನ್ನಾಗಿದ್ದಾಗಲೇ ಅನೇಕ ಸರ್ಕಾರಗಳು ಸಾಲ ಮಾಡಿರುವ ಉದಾಹರಣೆಗಳಿವೆ. ಸಾಂಕ್ರಾಮಿಕದಂತಹ ಸಂಕಷ್ಟ ಹಾಗೂ ಪ್ರವಾಹದಂತಹ ಪ್ರಕೃತಿ ವಿಕೋಪ ಸೃಷ್ಟಿಸಿದ ಪರಿಸ್ಥಿತಿಯಲ್ಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಹಾಗೂ ಆರ್ಥಿಕ ಚೈತನ್ಯ ನೀಡುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ

ಕೇಂದ್ರ ಸರ್ಕಾರವೂ ಸಹ 2021-22‌ನೇ ಸಾಲಿಗೆ ರಾಜ್ಯಗಳಿಗೆ ಜಿಎಸ್‍ಡಿಪಿ ಶೇ.4 ರ ವರೆಗೆ ಸಾಲ ಪಡೆಯಲು ಅನುಮತಿ ನೀಡಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ಕ್ಕೆ ತಿದ್ದುಪಡಿ ಮಾಡಿ ಈ ಅವಕಾಶ ಬಳಸಿಕೊಂಡಿದ್ದೇವೆ. ಆರ್ಥಿಕ ಸ್ಥಗಿತದಿಂದ ಜಿಡಿಪಿ ಬೆಳವಣಿಗೆ ಕುಂಠಿತವಾಗಿ ತೆರಿಗೆ ಸಂಗ್ರಹಣೆ ಕೊರತೆಯಾಗಿದೆ. ಆದರೂ ಬದ್ಧ ವೆಚ್ಚಗಳ ನಿರ್ವಹಣೆ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

2020-21ನೇ ಸಾಲಿನ ಆಯವ್ಯಯದ ಅಂದಾಜಿಗೆ ಶೇ.94 ರಷ್ಟು ವೆಚ್ಚವನ್ನು ಸಾಧಿಸುವ ಭರವಸೆ ನಮ್ಮ ಸರ್ಕಾರಕ್ಕಿದೆ. ನಾವು ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದರ ಫಲ ಮತ್ತು ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿದ ಕಾರಣ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಆರ್ಥಿಕ ಚೇತರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹೆಚ್ಚಾಗುವ ನಿರೀಕ್ಷೆ ಇದೆ. 2021-22ನೇ ಸಾಲಿನಲ್ಲಿ ಘೋಷಣೆ ಮಾಡಿರುವ ಎಲ್ಲ ಕಾರ್ಯಕ್ರಮಗಳನ್ನೂ ಅನುಷ್ಠಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ರಚನೆಯಾದ ನಂತರ ಸಾಂಕ್ರಾಮಿಕ ರೋಗ, ಪ್ರವಾಹ ಎದುರಾಯಿತು. ಸಾವಿರಾರು ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದರು. ಅವರಿಗೆ ಪರಿಹಾರ ನೀಡಲು ನಮ್ಮ ಬಳಿ ಮಂತ್ರದಂಡ ಇರಲಿಲ್ಲ. ಸರ್ಕಾರದ ಬೊಕ್ಕಸ ಅಕ್ಷಯ ಪಾತ್ರೆ ಆಗಿರಲಿಲ್ಲ ಎಂಬುದನ್ನು ಪ್ರತಿಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷದ ನಾಯಕರು ಆರೋಪಿಸಿರುವಂತೆ ಸರ್ಕಾರ ಯಾವುದೇ ವಿಚಾರವನ್ನು ಬಚ್ಚಿಟ್ಟಿಲ್ಲ. ಮುಂಗಡ ಪತ್ರ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆ ದಾಖಲೆಗಳಲ್ಲಿ ಎಲ್ಲ ವಿಚಾರಗಳನ್ನೂ ಬಹಿರಂಗಪಡಿಸಲಾಗಿದೆ. ಸಣ್ಣ ಲೋಪದೋಷವಿದ್ದರೂ ಸರಿಪಡಿಸಿಕೊಳ್ಳಲಾಗುತ್ತದೆ ಎಂದು ಬಿಎಸ್​ವೈ ಹೇಳಿದರು.

2020-21ನೆ ಸಾಲಿನಲ್ಲಿ ಒಟ್ಟು 2,33,134 ಕೋಟಿ ರೂ. ಜಮೆಯಾಗಿದೆ. ಇದರಲ್ಲಿ 1,79,920 ಕೋಟಿ ರೂ. ರಾಜಸ್ವ ಸ್ವೀಕೃತಿಯಾಗಿದ್ದರೆ 297 ಕೋಟಿ ರೂ. ಬಂಡವಾಳ ಸ್ವೀಕೃತಿಯಾಗಿದೆ. 52,918 ಕೋಟಿ ಸಾರ್ವಜನಿಕ ಋಣವಾಗಿದೆ ಎಂದು ತಿಳಿಸಿದರು.

2020-21ನೇ ಸಾಲಿನಲ್ಲಿ ಕೋವಿಡ್-19 ಕಾರಣದಿಂದಾಗಿ ರಾಜಸ್ವ ಸಂಗ್ರಹವು ಬಜೆಟ್​ಗಿಂತ ಕಡಿಮೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ತೆರಿಗೆ ಸಂಗ್ರಹವು ಸಹಜ ಬೆಳವಣಿಗೆಗಿಂತ ಕಡಿಮೆಯಾಗಿದೆ. ಈ ಬಾರಿ 2,43,974 ಕೋಟಿ ರೂ. ಒಟ್ಟು ಜಮೆಯಾಗಿದೆ. ಇದರಲ್ಲಿ 1,72,271 ಕೋಟಿ ರೂ. ರಾಜಸ್ವ ಸ್ವೀಕೃತಿ, 131 ಕೋಟಿ ರೂ. ಬಂಡವಾಳ ಸ್ವೀಕೃತಿ 71,332 ಕೋಟಿ ಸಾರ್ವಜನಿಕ ಋಣವಾಗಿದೆ ಎಂದು ಅಂಕಿ-ಅಂಶಗಳನ್ನು ಸದನಕ್ಕೆ ವಿವರಿಸಿದರು.

ಕಳೆದ ಸಾಲಿನ ಬಜೆಟ್‍ನಲ್ಲಿ 1,79,920 ಲಕ್ಷ ಕೋಟಿ ರೂ. ರಾಜಸ್ವ ಸಂಗ್ರಹಣೆಯಾಗಬಹುದೆಂದು ಅಂದಾಜು ಮಾಡಲಾಗಿತ್ತು. ಲಾಕ್‌ ಡೌನ್ ಘೋಷಣೆ ನಂತರ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡು ರಾಜಸ್ವವು ಶೂನ್ಯಮಟ್ಟಕ್ಕೆ ತಲುಪಿತ್ತು. ಇದರ ನಡುವೆಯೂ ನಮಗೆ 20 ಸಾವಿರ ಕೋಟಿ ರೂ. ರಾಜಸ್ವ ಕಡಿಮೆಯಾಗಿದೆ. ಈ ಎಲ್ಲ ಅಡ್ಡಿ-ಆತಂಕಗಳ ನಡುವೆಯೂ ಸಂತ್ರಸ್ತ ಮಹಿಳೆಯರು, ವೃದ್ಧರು, ವಿಕಲಚೇತನರಿಗೆ ಸಾಮಾಜಿಕ ಭದ್ರತಾ ಪಿಂಚಣಿ, ಪಡಿತರ ಚೀಟಿ ಹೊಂದಿರುವವರಿಗೆ ಆಹಾರ ಭದ್ರತೆ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ನಗದು ವರ್ಗಾವಣೆ ಹಾಗೂ ಇತರೆ ಬದ್ಧತಾ ವೆಚ್ಚಗಳನ್ನು ಭರಿಸಬೇಕಾಗಿದೆ ಎಂದು ಸಿಎಂ ಹೇಳಿದರು.

ಪ್ರಸಕ್ತ ಸಾಲಿನಲ್ಲೂ ಕೋವಿಡ್ ಪರಿಣಾಮ ಬೀರುವ ಸಂಭವವಿದೆ. ಈ ವರ್ಷ 15,134 ಕೋಟಿ ರೂ.ಗಳ ರಾಜಸ್ವ ಕೊರತೆ ಉಂಟಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದ್ದರಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರಣಕ್ಕಾಗಿ ರಾಜ್ಯದ ರಾಜಸ್ವ ಸಂಪನ್ಮೂಲ ಸಾಕಾಗದೆ ಇರುವ ಕಾರಣ ಸಾಲ ಪಡೆಯುವ ಪರಿಸ್ಥಿತಿ ಅನಿವಾರ್ಯವಾಯಿತು. ಪ್ರಸಕ್ತ ವರ್ಷದಲ್ಲಿ ಸಾಧ್ಯವಾದಷ್ಟೂ ಸಾಲ ಪಡೆಯುವ ಮೊತ್ತವನ್ನು ಕಡಿಮೆ ಮಾಡುವ ಅನಿವಾರ್ಯತೆ ಇದೆ. ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಸಾಂಕ್ರಾಮಿಕ ಕಾರಣದಿಂದ ರಾಜ್ಯದ ರಾಜಸ್ವ ಸಂಪನ್ಮೂಲ ಕಡಿಮೆಯಾಗಿದ್ದರೂ ಸಹ ನಂತರದ ದಿನಗಳಲ್ಲಿ ಚೇತರಿಕೆ ಆಗಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕೊವಿಡ್-19 ಕಾರಣದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಕರ್ನಾಟಕವಷ್ಟೇ ಅಲ್ಲದೆ ಎಲ್ಲ ರಾಜ್ಯಗಳು ಸಾಲ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಿದೆ. ಜಿಎಸ್‍ಡಿಪಿಯನ್ನು ಶೇ.25ರ ಒಳಗೆ ತರಲು ಸರ್ವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗೆ ಪ್ರಸಕ್ತ ವರ್ಷ ಕಡಿಮೆ ಅನುದಾನ ಇಟ್ಟಿದ್ದರೂ ಮುಂದಿನ ವರ್ಷ ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನವನ್ನು ಪಾವತಿಸುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಸಾಲಿನಲ್ಲಿ ವಿದ್ಯಾರ್ಥಿ ವೇತನ ಹಂಚಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಅರ್ಹರಿರುವ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಹೇಳಿದರು.

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಒದಗಿಸಿದ್ದರಿಂದ ನನ್ನನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಗೆ 2,316 ಕೋಟಿ ರೂ. ಅನುದಾನ ಒದಗಿಸಿದ್ದೇವೆ. ಜತೆಗೆ ಇತರೆ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೂ ಒಂದು ಸಾವಿರ ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ತಿಳಿಸಿದರು.

ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ ಒಂದೂವರೆ ಸಾವಿರ ಕೋಟಿ ರೂ. ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಡಿ 3 ಸಾವಿರ ಕೋಟಿ ರೂ. ಒದಗಿಸಿದ್ದೇವೆ. ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸಿದ್ದೇವೆ. 11 ಪಿಡಿ ಖಾತೆಗಳಲ್ಲಿರುವ ಶಿಲ್ಕುಗಳನ್ನು ಸಂಚಿತ ನಿಧಿಗೆ ಜಮೆ ಮಾಡಿ ಮುಕ್ತಾಯಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಚಾಲ್ತಿಯಲ್ಲಿರುವ ಪಿಡಿ ಖಾತೆಗಳನ್ನು ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಪ್ರಕೃತಿ ವಿಕೋಪ ಪರಿಹಾರ, ಶಾಸಕರುಗಳ ಅಭಿವೃದ್ಧಿ ನಿಧಿ, ಗಲಭೆ, ದೊಂಭಿ ಪರಿಹಾರ ಮುಂತಾದ ತುರ್ತು ಪರಿಹಾರಗಳಿಗೆ ತೊಂದರೆಯಾಗುವುದನ್ನು ಮನಗಂಡು ಆರ್ಥಿಕ ಇಲಾಖೆಯು ಜಿಲ್ಲಾಧಿಕಾರಿ ಹಾಗೂ ಇತರೆ ಇಲಾಖಾಧಿಕಾರಿಗಳ ಪಿಡಿ ಖಾತೆಯನ್ನು ಮಾರ್ಚ್ 8ಕ್ಕೆ ಮುಂದುವರೆಸಲು ಸೂಚಿಸಿದ್ದಾರೆ.

ರಾಜ್ಯದಲ್ಲಿ 7,68,975 ಸರ್ಕಾರಿ ಹುದ್ದೆಗಳಿವೆ. ಇದರಲ್ಲಿ 5,16,073 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ಗ್ರೂಪ್ ಡಿ, ಡಾಟಾ ಎಂಟ್ರಿ ಆಪರೇಟರ್ ಹಾಗೂ ಚಾಲಕ ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ನೇರ ನೇಮಕ ಮಾಡಿಕೊಳ್ಳಲು 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಹೀಗಾಗಿ ಮುಂದಿನ ವರ್ಷದಿಂದ ಅವಶ್ಯಕ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗುವುದು. ನಮ್ಮ ಸರ್ಕಾರ ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.