ETV Bharat / state

ಡಾ. ಪುನೀತ್ ರಾಜ್ ಕುಮಾರ್​​ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ತೀರ್ಮಾನ : ಎಸ್.ಟಿ. ಸೋಮಶೇಖರ್ - ಬೆಂಗಳೂರಿನ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ನಟ ಪುನಿತ್ ರಾಜ್‍ ಕುಮಾರ್ ನಮ್ಮ ಉತ್ಪನ್ನ ರಾಯಭಾರಿ ಆಗಿದ್ದರು. ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಪುರಸ್ಕೃತರ ಪಟ್ಟಿ ಸಂಜೆ ಅಂತಿಮವಾಗಲಿದೆ..

Somashekhar
ಎಸ್.ಟಿ. ಸೋಮಶೇಖರ್
author img

By

Published : Mar 18, 2022, 4:15 PM IST

ಬೆಂಗಳೂರು : ಪ್ರಸಕ್ತ ಸಾಲಿನ 'ಸಹಕಾರ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭ ಮಾ.20ರಂದು ನಡೆಯಲಿದೆ. ಡಾ. ಪುನೀತ್​​ ರಾಜ್​ ಕುಮಾರ್​​ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡುತ್ತೇವೆ. ಒಟ್ಟು 100 ಅರ್ಜಿಗಳು ಬಂದಿವೆ. ಸಿಎಂ ಬಸವರಾಜ್ ಬೊಮ್ಮಾಯಿಯವರು ಆಯ್ಕೆಯನ್ನು ನೀವೇ ಮಾಡಿ ಎಂದಿದ್ದಾರೆ.

ಕೆಲ ಡಿಸಿಸಿ ಬ್ಯಾಂಕ್​​ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವವರ ಜತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ನಾವೇ ಹುಡುಕಿದ್ದೇವೆ. ಇದರ ಜತೆ ಸ್ತ್ರೀಶಕ್ತಿ ಸಂಘಗಳಿಗೆ 20 ಕೋಟಿ ಸಹಾಯಧನ ನೀಡುತ್ತೇವೆ.

ನಟ ಪುನಿತ್ ರಾಜ್‍ ಕುಮಾರ್ ನಮ್ಮ ಉತ್ಪನ್ನ ರಾಯಭಾರಿ ಆಗಿದ್ದರು. ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಪುರಸ್ಕೃತರ ಪಟ್ಟಿ ಸಂಜೆ ಅಂತಿಮವಾಗಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: 'ದಿ ಕಾಶ್ಮೀರ ಫೈಲ್ಸ್​' ಸಿನಿಮಾ ಕನ್ನಡಕ್ಕೆ ಡಬ್ ಮಾಡಲು ಚಿಂತನೆ: ರೇಣುಕಾಚಾರ್ಯ

ಪ್ರತಿ ವರ್ಷ ಆರು ಮಂದಿಗೆ ಪ್ರಶಸ್ತಿ ನೀಡುತ್ತಿದ್ದೆವು. ಆದರೆ, ಕಳೆದ ವರ್ಷ ಜಿಲ್ಲೆಗೆ ಒಬ್ಬರು ಅಂತಾ ನಿರ್ಧರಿಸಿದ್ದೇವೆ. 40 ರಿಂದ 50 ಮಂದಿಗೆ ಪ್ರಶಸ್ತಿ ಕೊಡುತ್ತೇವೆ. 15 ಗ್ರಾಂ ಚಿನ್ನದ ಪದಕ, ಪ್ರಮಾಣಪತ್ರ ನೀಡಿ ಗೌರವಿಸುತ್ತೇವೆ. ನಾನು, ಜಿ.ಟಿ. ದೇವೇಗೌಡ ಸೇರಿದಂತೆ ಐವರ ಸಮಿತಿ ಆಯ್ಕೆ ಮಂಡಳಿಯಲ್ಲಿದೆ. ಬೆಂಗಳೂರಿನ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಮಾ.20 ರಂದು ಬೆಳಗ್ಗೆ 11 ಗಂಟೆಗೆ ಸಮಾರಂಭ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಸಹಕಾರ ವಿವರ : ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಭಾರತದ ಸಹಕಾರ ಚಳವಳಿ ಪ್ರಪಂಚದಲ್ಲೇ ಮಹತ್ವ ಸ್ಥಾನ ಪಡೆದಿದೆ. ಲಕ್ಷಕ್ಕೂ ಅಧಿಕ ಸಹಕಾರ ಸಂಸ್ಥೆಗಳು, 30 ಕೋಟಿಗೂ ಅಧಿಕ ಸದಸ್ಯರು ಇದ್ದಾರೆ. ರಾಷ್ಟ್ರದಲ್ಲಿ 8.5 ಲಕ್ಷಕ್ಕೂ ಅಧಿಕ ಸಹಕಾರ ಸಂಸ್ಥೆಗಳು ಇದ್ದು, 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ.

ಕರ್ನಾಟಕದಲ್ಲಿ ಮಾ. 31ರ ಅಂತ್ಯಕ್ಕೆ 46,544 ಸಹಕಾರ ಸಂಸ್ಥೆಗಳಲ್ಲಿ 2.30 ಕೋಟಿ ಸದಸ್ಯರಾಗುತ್ತಾರೆ. ಈ ಸಹಕಾರ ಸಂಘಗಳಲ್ಲಿ ರೂ. 6,343.38 ಕೋಟಿ ಷೇರು ಬಂಡವಾಳವಿದ್ದು, 1.15 ಲಕ್ಷ ಕೋಟಿ ರೂ. ಠೇವಣಿಗಳನ್ನು ಹೊಂದಲಾಗಿದೆ. ಒಟ್ಟು 1.56 ಲಕ್ಷ ಕೋಟಿ ರೂ. ದುಡಿಯುವ ಬಂಡವಾಳವಿದೆ.

ರಾಜ್ಯದಲ್ಲಿ ಕೃಷಿ ಪತ್ತಿನ ವ್ಯವಸ್ಥೆ, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕುಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಸಹಕಾರ ವ್ಯವಸ್ಥೆ ಒಂದು ಆರ್ಥಿಕ ವ್ಯವಸ್ಥೆಯಾಗಿ, ಆರ್ಥಿಕವಾಗಿ ಅಬಲರಾದವರ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿವೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.