ಬೆಂಗಳೂರು : ನಮ್ಮ ಪಕ್ಷದಿಂದ ಲೋಕಸಭೆ ಸ್ಪೀಕರ್ ಓಂಬಿರ್ಲಾರವರಿಗೆ ಅಗೌರವ ತೋರಿಸಬಾರದು ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದಿನದ ಕರ್ನಾಟಕ ವಿಧಾನಮಂಡಲದ ಸುದೀರ್ಘ ಇತಿಹಾಸದಲ್ಲಿ ಲೋಕಸಭೆ ಅಧ್ಯಕ್ಷರಿಗೆ ಆಮಂತ್ರಣ ನೀಡಲಾಗಿದೆ. ಸಂವಿಧಾನದ ಉಳಿವಿಗೆ ಅವರ ಭಾವನೆ ವ್ಯಕ್ತಪಡಿಸಲು ಕರ್ನಾಟಕ ವಿಧಾನಮಂಡಲ ಸ್ಪೀಕರ್ ಜಂಟಿ ಸದನ ಸದಸ್ಯರ ಅಧಿವೇಶನ ಕರೆದಿದ್ದರು.
ಲೋಕಸಭೆ ಸ್ಪೀಕರ್ ಕರೆಸಿ ಅವರಿಂದ ಸಂವಿಧಾನ ಮೌಲ್ಯಗಳ ಬಗ್ಗೆ ಭಾಷಣ ಮಾಡಿದ್ದಾರೆ. ಸಭಾಪತಿ, ಸಭಾಧ್ಯಕ್ಷರು ಕಾರ್ಯಕ್ರಮ ಆಯೋಜಿಸಿದ್ದರು. ಇವತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಗೌರವ ಸಲ್ಲಿಸಲು ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಎಂದರು.
ಕಾಂಗ್ರೆಸ್ ಬಹಿಷ್ಕಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷದ ನಿಲುವು. ನಾವು ಲೋಕಸಭೆ ಸ್ಪೀಕರ್ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಂದಿದ್ದೇವೆ. ಸಂವಿಧಾನದಲ್ಲಿ ಅವಕಾಶ ಇದೆಯೋ, ಇಲ್ಲವೋ ಎಂಬ ಬಗ್ಗೆ ಸಂವಿಧಾನದ ಎಕ್ಸ್‌ಪರ್ಟ್‌ಗಳು ಅದರ ಬಗ್ಗೆ ವಿಶ್ಲೇಷಣೆ ಮಾಡಲಿ ಎಂದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಿಂದಿ ಭಾಷಣಕ್ಕೆ ಶಾಸಕ ಡಾ. ಅನ್ನದಾನಿ ವಿರೋಧ