ETV Bharat / state

ರೈತರ ಆದಾಯ ದ್ವಿಗುಣದಲ್ಲಿ ಮೊದಲ ಸ್ಥಾನದ ಗುರಿ ಇರಿಸಿಕೊಂಡಿದ್ದೇವೆ : ಸಿಎಂ ಬೊಮ್ಮಾಯಿ - ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆಯಲ್ಲಿ ಕೃಷಿಯ ಉತ್ಪನ್ನಗಳ ಮೌಲ್ಯ ವೃದ್ಧಿ ಮಾಡುವ ಸಲುವಾಗಿ ವಿಶೇಷವಾದ ಕಾರ್ಯಪಡೆಯನ್ನು ರಚಿಸಲಿದ್ದೇವೆ. ಅದಕ್ಕಾಗಿ ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್ ಅನ್ನು ಮಾಡಬೇಕು ಎಂದು ತೀರ್ಮಾನಿಸಿದ್ದೇವೆ..

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

author img

By

Published : Aug 25, 2021, 3:05 PM IST

ಬೆಂಗಳೂರು : 2023-24ರ ವೇಳೆಗೆ ದೇಶದಲ್ಲೇ ರೈತರ ಆದಾಯ ದ್ವಿಗುಣಗೊಳಿಸಿದ ಮೊದಲ ರಾಜ್ಯ ನಮ್ಮದಾಗಬೇಕು ಎನ್ನುವ ಗುರಿ ಇರಿಸಿಕೊಳ್ಳಲಾಗಿದೆ. ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯತಂತ್ರಗಳ ಕುರಿತಂತೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಡಾ. ಅಶೋಕ್ ದಳವಾಯಿ ಅವರು ನಡೆಸಿಕೊಟ್ಟ ಪ್ರಾತ್ಯಕ್ಷಿಕೆ ವೀಕ್ಷಿಸಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೈತರ ಆದಾಯ ದ್ವಿಗುಣ ಮಾಡುವ ಯೋಜನೆಯ ಮುಖ್ಯಸ್ಥರು ಕೇಂದ್ರದಿಂದ ಬಂದಿದ್ದರು. ಯಾವ ರೀತಿ ಕೃಷಿ ಆದಾಯ ವೃದ್ಧಿಯಲ್ಲಿ ಮುಂದೆ ಹೋಗಬೇಕು ಎಂದು ಅವರು ಕೊಟ್ಟಿರುವ ವರದಿ ಕುರಿತು ಎರಡು ಗಂಟೆಗಳ ಕಾಲ ಚರ್ಚಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಬಹಳ ಆಸಕ್ತಿ ಹೊಂದಿದ್ದೇವೆ. ರೈತರ ಆದಾಯ ದ್ವಿಗುಣದಲ್ಲಿ ನಮ್ಮದು ಮೊದಲ ರಾಜ್ಯವಾಗಬೇಕು ಎನ್ನುವ ಗುರಿ ಇರಿಸಿಕೊಂಡಿದ್ದೇವೆ. 2023-24ಕ್ಕೆ ಮೊದಲ ಸ್ಥಾನದಲ್ಲಿ ನಾವಿರಬೇಕು. ಇದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಮೂರು ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ರೈತರ ಆದಾಯ ದ್ವಿಗುಣ ಮಾಡುವ ಯೋಜನೆಗೆ ಕೇಂದ್ರ ಸರ್ಕಾರ ನಮ್ಮ ಜೊತೆ ಕೈಜೋಡಿಸಲು ಸಿದ್ಧವಿದೆ. ಅದಕ್ಕಾಗಿ ಇಲ್ಲಿ ನಾವು ಕೃಷಿಕರು, ರೈತರು ಇರುವ ಒಂದು ಸಮಿತಿಯನ್ನು ನೇಮಕ ಮಾಡಲಿದ್ದೇವೆ ಹಾಗೂ ಕೇಂದ್ರ ಸರ್ಕಾರದ ಜೊತೆ ಅದು ನಿರಂತರ ಸಂಪರ್ಕ ಇರಿಸಿಕೊಳ್ಳಲಿದೆ. ಆದಾಯ ದ್ವಿಗುಣ ಯೋಜನೆ ಜಾರಿಗೆ ಪೂರಕವಾಗಿ ನಮ್ಮದೇ ಆದ ಕೃಷಿಕರ ಆದಾಯ ವರದಿಯನ್ನು ಸಿದ್ಧಪಡಿಸಿ ಅದನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ಕೃಷಿ ವಿವಿಗಳನ್ನು ಬಳಕೆ ಮಾಡಿ ನಮ್ಮ ಕೃಷಿ ವಲಯದ ನಿರ್ವಹಣೆ ಮತ್ತು ಹೇಗೆ ಅದನ್ನು ಉತ್ತಮಗೊಳಿಸಬೇಕು ಎನ್ನುವ ಕುರಿತು ಸಹಾಯ ಪಡೆಯಲಿದ್ದೇವೆ. ಬಿತ್ತನೆ ಬೀಜ, ಗೊಬ್ಬರ, ಇಳುವರಿ, ಫಲವತ್ತತೆ ಇತ್ಯಾದಿ ಕುರಿತು ನಿರ್ವಹಣೆ ಮತ್ತು ಅಭಿವೃದ್ಧಿ ಬಗ್ಗೆ ಕೃಷಿ ವಿವಿ ಸಹಾಯ ಪಡೆಯುವ ಸಲುವಾಗಿ ಕೃಷಿ ಸಚಿವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಮಧ್ಯಾಹ್ನ ದೆಹಲಿಗೆ ಸಿಎಂ ಪ್ರವಾಸ: ಜಲವ್ಯಾಜ್ಯಗಳ ಕುರಿತು ಕೇಂದ್ರ ಸಚಿವ, ಅಧಿಕಾರಿಗಳೊಂದಿಗೆ ನಾಳೆ ಸಭೆ

ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆಯಲ್ಲಿ ಕೃಷಿಯ ಉತ್ಪನ್ನಗಳ ಮೌಲ್ಯ ವೃದ್ಧಿ ಮಾಡುವ ಸಲುವಾಗಿ ವಿಶೇಷವಾದ ಕಾರ್ಯಪಡೆಯನ್ನು ರಚಿಸಲಿದ್ದೇವೆ. ಅದಕ್ಕಾಗಿ ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್ ಅನ್ನು ಮಾಡಬೇಕು ಎಂದು ತೀರ್ಮಾನಿಸಿದ್ದೇವೆ.

ಕೃಷಿ ವಲಯದಲ್ಲಿ ಬಹಳ ದೊಡ್ಡ ಬದಲಾವಣೆ ಮಾಡುವ ತೀರ್ಮಾನವನ್ನು ನಾವು ಮಾಡಿದ್ದೇವೆ. ಬರುವ ದಿನಗಳಲ್ಲಿ ಇದರ ಆಧಾರದ ಮೇಲೆ ನಮ್ಮ ರೈತರ ಆದಾಯ ದ್ವಿಗುಣಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.