ಬೆಂಗಳೂರು : ಬಿಗ್ಬಾಸ್ ರಿಯಾಲಿಟಿ ಶೋ ಮಾಜಿ ವಿನ್ನರ್ ಪ್ರಥಮ್ ಅವರ ಮನೆಗೆ ನುಗ್ಗಿದ ಮಳೆ ನೀರಿನಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಷ್ಟವಾಗಿವೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ, ಪ್ರಥಮ್ ಅವರ ಮನೆಯಲ್ಲಿದ್ದ ಲ್ಯಾಪ್ಟಾಪ್ ಸೇರಿ ಬೆಲೆಬಾಳುವ ಗ್ಯಾಜೆಟ್ಗಳು ಹಾಳಾಗಿವೆ. ಅಲ್ಲದೆ, ಅವರು ಸಿನಿಮಾವೊಂದಕ್ಕೆ ಬರೆಯುತ್ತಿದ್ದ ಸ್ಕ್ರಿಪ್ಟ್ ಕೂಡ ನೀರಿನಲ್ಲಿ ಹಾಳಾಗಿದೆ.
ತಾವು ನಿರ್ದೇಶಿಸುತ್ತಿರುವ ಕರ್ನಾಟಕ ಅಳಿಯ ಸಿನಿಮಾದ ಸ್ಕ್ರಿಪ್ಟ್ ಹಾಳಾಗಿರುವುದಕ್ಕೆ ಪ್ರಥಮ್ ಬೇಸರ ವ್ಯಕ್ತಪಡಿಸಿದ್ದಾರೆ. ಸೆಟ್ ಪ್ರಾಪರ್ಟಿ, ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಬ್ಯಾಕಪ್ ರಾ ಫೂಟೇಜ್, ಮೊಬೈಲ್ ಎಲ್ಲವೂ ಹಾಳಾಗಿವೆ.
ಮಳೆ ಬರುವ ಮುನ್ನ ಪ್ರಥಮ್ ಅವರು ಸೈಕ್ಲಿಂಗ್ಗೆ ತೆರಳಿದ್ದರು. ಆದರೆ, ಕಿಟಕಿ-ಬಾಗಿಲುಗಳನ್ನು ಮುಚ್ಚದೆ ಇದ್ದಿದ್ದರಿಂದ ಈ ರೀತಿ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಎಲ್ಲವನ್ನು ತೆಗೆದುಕೊಂಡಿದ್ದೆ. ಮಳೆ ಬಂದು ನಾಶವಾಗಿರುವುದು ತುಂಬಾ ಬೇಜಾರಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಓದಿ: ಮನೆಗಳಿಗೆ ನುಗ್ಗಿದ ಮಳೆ ನೀರನ್ನು ಹೊರತೆಗೆಯುವುದು ನಮ್ಮ ಮೊದಲ ಆದ್ಯತೆ : ಸಿಎಂ ಬೊಮ್ಮಾಯಿ