ಬೆಂಗಳೂರು: ಕರೆಂಟ್ ಬಿಲ್ನಿಂದ ಶಾಕ್ ಆಗಿದ್ದವರಿಗೆ ಬೆಂಗಳೂರು ಜಲಮಂಡಳಿ ಸ್ವಲ್ಪ ರಿಲೀಫ್ ನೀಡಿದೆ.
ಹೌದು, ದೇಶ ಲಾಕ್ಡೌನ್ ಆದ ಹಿನ್ನೆಲೆ ಬೆಂಗಳೂರಿಗರಿಗೆ ಜಲಮಂಡಳಿ ಸ್ವಲ್ಪ ರಿಲೀಫ್ ನೀಡಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನೀರಿನ ಬಿಲ್ ಕಟ್ಟದವರ ಬಡ್ಡಿ ಮನ್ನಾ ಮಾಡಲಿದೆ. ಆದ್ರೆ ಈ ಲಾಭ ಗ್ರಾಹಕರಿಗೆ ಸಿಗ ಬೇಕಾದ್ರೆ ಮೇ ಒಳಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ಕಟ್ಟಿದ್ರೆ ಮಾತ್ರ ಬಡ್ಡಿ ಮನ್ನಾ ಆಗಲಿದೆ.
ನಿಗದಿತ ಅವಧಿಯೊಳಗೆ ನೀರಿನ ಬಿಲ್ ಕಟ್ಟಿದ್ರೆ, ಬಡ್ಡಿ ಮನ್ನಾ ಮಾಡುವ ಆದೇಶ ನೀಡಿ ಬೆಂಗಳೂರು ಜಲಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.