ETV Bharat / state

ಡ್ರಗ್ಸ್​ ಪ್ರಕರಣ: ಆರೋಪಿ ಪರ ವಕಾಲತ್ತು ವಹಿಸಿದ ಇನ್ಸ್​ಪೆಕ್ಟರ್​ಗೆ ವಾರ್ನಿಂಗ್ - ಸಿಸಿಬಿ ಕಚೇರಿ

ಸ್ಯಾಂಡಲ್ ವುಡ್ ಡ್ರಗ್ಸ್​ ಮಾಫಿಯಾ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ನಿದ್ದೆ ಬಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಸಿಸಿಬಿ ಇನ್ಸ್​ಪೆಕ್ಟರ್ ಆರೋಪಿಗಳ ಪರ ವಕಾಲತ್ತು ವಹಿಸಿರುವ ವಿಚಾರ ಬೆಳಕಿಗೆ ಬಂದಿದೆ.

warning-from-ccb-officials-to-another-inspector-in-drugs-case
ಇನ್ಸ್​ಪೆಕ್ಟರ್​ಗೆ ವಾರ್ನಿಂಗ್
author img

By

Published : Oct 1, 2020, 3:25 PM IST

Updated : Oct 1, 2020, 3:59 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಆರೋಪ ಪ್ರಕರಣದಲ್ಲಿ ಸದ್ಯ ತನಿಖೆಗಿಳಿದಿರುವ ಸಿಸಿಬಿ ಪೊಲೀಸರು ಒಂದೆಡೆ ತನಿಖೆ ‌ನಡೆಸುತ್ತಿದ್ದರೆ, ಮತ್ತೊಂದೆಡೆ ಸಿಸಿಬಿಯ ಕೆಲ ಸಿಬ್ಬಂದಿಯೇ ಆರೋಪಿಗಳಿಗೆ ಸಹಾಯ ಮಾಡುತ್ತಿರುವ ಆರೋಪ ಮತ್ತೊಮ್ಮೆ ಕೇಳಿ ಬಂದಿದೆ.

ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ನಿದ್ದೆ ಬಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಸಿಸಿಬಿ ಇನ್ಸ್​ಪೆಕ್ಟರ್ ಆರೋಪಿಗಳ ಪರ ವಕಾಲತ್ತು ವಹಿಸಿರುವ ವಿಚಾರ ಬೆಳಕಿಗೆ ಬಂದಿದೆ. ಕಾಟನ್ ಪೇಟೆಯಲ್ಲಿ ದಾಖಲಾಗಿದ್ದ ಕೇಸ್ ಎ1 ಶಿವಪ್ರಕಾಶ್ ಪರ ಇನ್ಸ್​ಪೆಕ್ಟರ್ ಒಬ್ಬರು ಸಿಸಿಬಿಯಲ್ಲಿ ಇನ್ಸ್​ಪೆಕ್ಟರ್ ಆಗಿರೋ ತನ್ನ ಬ್ಯಾಚ್ ಮೇಟ್​ಗೆ ಫೋನ್ ಕಾಲ್ ಮಾಡಿ ಬೆಂಬಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

ಫೋನ್ ಕಾಲ್ ಬಂದ ತಕ್ಷಣವೇ ಈ ವಿಚಾರನ್ನು ಡಿಸಿಪಿ ಗಮನಕ್ಕೆ ಸಿಸಿಬಿ ಇನ್ಸ್​ಪೆಕ್ಟರ್ ತಂದಿದ್ದಾರೆ. ಹಾಗೆ ಡಿಸಿಪಿ ಈ ವಿಚಾರವನ್ನ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್​ಗೆ ತಿಳಿಸಿ ಇನ್ಸ್​ಪೆಕ್ಟರ್​ಗೆ ಕಾಲ್ ಮಾಡಿ ಸಿಸಿಬಿ ಕಚೇರಿಗೆ ಬರುವಂತೆ ತಿಳಿಸಿದ್ದಾರೆ. ಕಾಲ್ ಬಂದಿದ್ದೇ ತಡ, ಸಿಸಿಬಿ ಕಚೇರಿಗೆ ಆ ಇನ್ಸ್​ಪೆಕ್ಟರ್​ ಆಗಮಿಸಿ ಸುಮಾರು ಎರಡು ಗಂಟೆಗಳ‌ ಕಾಲ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಇನ್ಸ್​ಪೆಕ್ಟರ್​ಗೆ ಎಚ್ಚರಿಕೆ ನೀಡಲಾಗಿದೆ.

ಒಂದು ಕಡೆ 24 ದಿನಗಳಿಂದ ಶಿವ ಪ್ರಕಾಶ್​ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಇತ್ತ ಆರೋಪಿಗಳ ಪರ ವಕಾಲತ್ತು ವಹಿಸಿಕೊಂಡು ಕಾಲ್ ಮಾಡಿ ಸಪೋರ್ಟ್ ಮಾಡುತ್ತಿರುವ ಕಾರಣ ಇನ್ಸ್​ಪೆಕ್ಟರ್​ ಫೋನ್ ಪರಿಶೀಲನೆ ನಡೆಯುತ್ತಿದೆ. ಆರೋಪಿ ಪೊಲೀಸ್​ ಸಿಬ್ಬಂದಿಯ ಹೇಳಿಕೆ ಪಡೆದು ಶಿವಪ್ರಕಾಶ್​ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ ಆರೋಪ ಪ್ರಕರಣ ಬೆಳಕಿಗೆ ಬರ್ತಿದ್ದ ಹಾಗೆ ಸೆ.4 ರಿಂದ ಶಿವಪ್ರಕಾಶ್​ಗಾಗಿ ಸುಮಾರು 12 ಜನ ಇನ್ಸ್​ಪೆಕ್ಟರ್​ಗಳ ನೇತೃತ್ವದಲ್ಲಿ ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ‌. ಶಿವಪ್ರಕಾಶ್​ ಜೊತೆಗೆ ಆದಿತ್ಯ ಆಳ್ವಾ ಹಾಗೂ ಶೇಖ್ ಫಾಸಿಲ್ ತಲೆಮರೆಸಿಕೊಂಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರಿಗೆ ಈ ಆರೋಪಿಗಳು ಪ್ರಮುಖರಾಗಿದ್ದು ಶೋಧ ಮುಂದುವರೆದಿದೆ ಎಂದು ಸಿಸಿಬಿ ಉನ್ನತ ಮೂಲಗಳು ಮಾಹಿತಿ ನೀಡಿವೆ.

Last Updated : Oct 1, 2020, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.