ETV Bharat / state

ನಕಲಿ ನಂಬರ್ ಪ್ಲೇಟ್ ಬಳಸಿದ್ರೆ ಕ್ರಿಮಿನಲ್‌ ಕೇಸ್ : ವಿಶೇಷ ಸಂಚಾರ ಆಯುಕ್ತರ ಖಡಕ್​ ಎಚ್ಚರಿಕೆ

ವಾಹನಗಳಿಗೆ ನಕಲಿ ನಂಬರ್​ ಪ್ಲೇಟ್​ ಬಳಸಿ ಕ್ರಿಮಿನಲ್​ ಕೇಸ್​ - ವಾಹನ ಸವಾರರಿಗೆ ಸಂಚಾರ ಪೊಲೀಸರ ಖಡಕ್​ ಎಚ್ಚರಿಕೆ- 51 ಕೋಟಿ ರೂಪಾಯಿ ಹೆಚ್ಚು ರಿಯಾಯಿತಿ ದರದ ದಂಡ ಸಂಗ್ರಹ

Traffic Police
ಟ್ರಾಫಿಕ್ ಪೊಲೀಸರು
author img

By

Published : Feb 9, 2023, 7:09 AM IST

ಬೆಂಗಳೂರು : ಸಂಚಾರ ನಿಯಮ‌ ಉಲ್ಲಂಘಿಸಿದ ಸವಾರರಿಗೆ ದಂಡದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ ಬೆನ್ನಲೇ ದಂಡ ಕಟ್ಟಲು ವಾಹನ ಸವಾರರು ಮುಗಿಬೀಳುತ್ತಿದ್ದಾರೆ. ಈಗಾಗಲೇ 51 ಕೋಟಿಗಿಂತ ಹೆಚ್ಚು ದಂಡ ಪಾವತಿಯಾಗಿದೆ.‌ ಇದರ ಬೆನ್ನಲ್ಲೇ ‌ನಕಲಿ ನಂಬರ್ ಸಂಖ್ಯೆ ಅಳವಡಿಸಿಕೊಂಡಿರುವ ಚಾಲಾಕಿ‌ ಸವಾರರ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಿಸುವಂತೆ ವಿಶೇಷ ಸಂಚಾರ ಆಯುಕ್ತರು ಎಲ್ಲಾ ಪೊಲೀಸ್ ಇನ್​ಸ್ಪೆಕ್ಟರ್ ಗಳಿಗೆ ತಾಕೀತು ಮಾಡಿದ್ದಾರೆ.

ಈ ವರ್ಷದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಬಳಸಿದ್ದ ವಾಹನ ಸವಾರರ ಮೇಲೆ‌ ಕ್ರಮಗೊಂಡಿರುವ ಸಂಚಾರ ಪೊಲೀಸರು ಫೆ. 7ಕ್ಕೆ ಕೊನೆಗೊಂಡಂತೆ 10,422 ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದು ಈ ಸಂಬಂಧ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಂತಹ ವಾಹನ ಸವಾರರ ವಿರುದ್ಧ ಕ್ರಿಮಿನಲ್‌‌‌ ಕೇಸ್ ದಾಖಲಿಸಿಕೊಳ್ಳಬೇಕೆಂದು‌ ಸೂಚನೆ ನೀಡಲಾಗಿದ್ದು, ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲು ನಗರ ಸಂಚಾರ ವಿಭಾಗ ಮುಂದಾಗಿದೆ.

2022 ಹಾಗೂ 2021ರಲ್ಲಿ‌ ಅನುಕ್ರಮವಾಗಿ 3,88,488, ಹಾಗೂ 4,56,521 ಕೇಸ್ ಗಳು ದಾಖಲಾಗಿತ್ತು. 50 ಪರ್ಸೆಂಟ್ ಆಫರ್ ನೀಡಿದ ಬಳಿಕ ದಂಡ ಕಟ್ಟಲು ಮುಂದಾದ ಸವಾರರಿಗೆ ತಮ್ಮ‌ ವಾಹನ ನೋಂದಣಿ‌ ಸಂಖ್ಯೆಯನ್ನು ಅನಾಮಿಕರು ಫೇಕ್ ನಂಬರ್‌ ಪ್ಲೇಟ್ ಅಳವಡಿಸಿಕೊಂಡಿರುವುದು ತಡವಾಗಿ ಅರಿತುಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿದೆ.

ನಕಲಿ ನಂಬರ್ ಪ್ಲೇಟ್ ಕ್ರಿಮಿನಲ್‌ ಕೇಸ್ : ದಂಡ ಪಾವತಿ ವೇಳೆ ನಕಲಿ ನಂಬರ್ ಪ್ಲೇಟ್ ಬಳಸಿ ಕಿಡಿಗೇಡಿಗಳು ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅಸಲಿ ವಾಹನ ಮಾಲೀಕರಿಗೆ ನೊಟೀಸ್ ಬರುತ್ತಿವೆ. ತಮ್ಮದಲ್ಲದ ತಪ್ಪಿಗೆ ದಂಡ ಕಟ್ಟಬೇಕಾ ಎಂದು ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾರದೋ ವಾಹನಗಳಿಗೆ ಕಿಡಿಗೇಡಿಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಟ್ರಾಫಿಕ್ ನಿಯಮ ಉಲ್ಲಂಘಟನೆ ಮಾಡುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಪರಾಧ‌ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿರ್ದಶನಗಳಿವೆ. ಹೀಗಾಗಿ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ನಿರ್ಭಿತಿಯಿಂದ ಓಡಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು‌ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ದಂಡದಿಂದ ಪಾರಾಗಲು ವಾಮಮಾರ್ಗ ಬಳಸುವ ಕಿಡಿಗೇಡಿಗಳು ತಮ್ಮ ವಾಹನಗಳಿಗೆ ನಕಲಿ ನಂಬರ್ ಅಳವಡಿಸಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಒಎಲ್ ಎಕ್ಸ್ ಜಾಲತಾಣ ಸೇರಿ ವಿವಿಧ ಆನ್ ಲೈನ್ ವೇದಿಕೆಗಳಿಂದ ಅಸಲಿ ವಾಹನ ಮಾಲೀಕರ ನೋಂದಣಿ ಸಂಖ್ಯೆಯನ್ನು ತಮ್ಮ ವಾಹನಗಳ ನಾಮಫಲಕದ ಮೇಲೆ ಅಳವಡಿಸಿಕೊಳ್ಳುತ್ತಿದ್ದಾರೆ‌‌. ಮೊದಲಿನಂತೆ ಪೊಲೀಸರು ಭೌತಿಕವಾಗಿ ವಾಹನ ಅಡ್ಡಗಟ್ಟಿ ದಾಖಲಾತಿ ಪರಿಶೀಲನೆ ಮಾಡದಿರುವುದು ಕಿಡಿಗೇಡಿಗಳಿಗೆ ಅನುಕೂಲಕರವಾಗಿದೆ.

ಇತ್ತೀಚಿನ ದಿನಗಳಲ್ಲಿ ಎಎನ್​ಪಿಆರ್ ಸೇರಿ ಡಿಜಿಟಲ್‌ ಕ್ಯಾಮರಾಗಳಲ್ಲಿ ಸಂಚಾರ ನಿಯಮ‌ ಉಲ್ಲಂಘನೆಯನ್ನು ಸ್ವಯಂಪ್ರೇರಿತವಾಗಿ ಸೆರೆ ಹಿಡಿದು ದಂಡ ಪಾವತಿಸುವಂತೆ ನೋಟಿಸ್ ಕಳುಹಿಲಾಗುತ್ತಿದ್ದು, ಸವಾರರು‌ ಪರಿಶೀಲಿಸಿದಾಗ ನಕಲಿ ನಂಬರ್ ಅಪರಿಚಿತ ವಾಹನಗಳಿಗೆ ಅಳವಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮಾತನಾಡಿದ ಟ್ರಾಫಿಕ್​ ಕಮೀಷನರ್​ ಎಂ.ಎನ್​. ಅನುಚೇತ್​ ಅವರು, ದಂಡ ಪಾವತಿಸಲು 50 ಪರ್ಸೆಂಟ್ ರಿಯಾಯಿತಿಯನ್ನು ವಾಹನ ಸವಾರರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಏಕಕಾಲದಲ್ಲಿ ಆನ್​ಲೈನ್ ನಲ್ಲಿ ದಂಡ‌ ಪಾವತಿಗೆ ಮುಗಿಬೀಳುತ್ತಿರುವುದರಿಂದ ಸರ್ವರ್ ಡೌನ್ ಆಗಿದೆ. ಪೇಟಿಎಂ ಆ್ಯಪ್ ಬೆಂಗಳೂರು ಒನ್, ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರ ಹಾಗೂ ಸಂಚಾರ ಪೊಲೀಸ್ ಠಾಣೆಗಳಿಗೆ ತೆರಳಿ ದಂಡ ಪಾವತಿಸುತ್ತಿರುವುದರಿಂದ ಸರ್ವರ್ ಡೌನ್ ಆಗುತ್ತಿದೆ. ಕೆಲ ಕಾಲ ಕಾದು ನಂತರ ದಂಡ ಪಾವತಿಸುವಂತೆ ಇಲ್ಲದಿದ್ದರೆ ‌ಖುದ್ದಾಗಿ ತೆರಳಿ ಜುಲ್ಮಾನೆ ಕಟ್ಟಬಹುದಾಗಿದೆ ಎಂದು‌ ತಿಳಿಸಿದ್ದಾರೆ.

ಇದನ್ನೂ ಓದಿ :ಸವಾರರಿಗೆ ಸರ್ಕಾರದ ಆಫರ್: ಗಾಡಿ ಮೇಲೆ ಟ್ರಾಫಿಕ್ ಫೈನ್ ಇದೆಯಾ? ದಂಡ ಕಟ್ಟಿ ಶೇ.50 ರಿಯಾಯಿತಿ ಪಡೆಯಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.