ETV Bharat / state

ಕೇಂದ್ರದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ: ಮಾಜಿ ಸಂಸದ ಉಗ್ರಪ್ಪ

author img

By

Published : Feb 1, 2020, 6:37 PM IST

ಕೇಂದ್ರದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದ್ದು, ಇದೊಂದು ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

v.s. ugrappa pressmeet on union budget
ಮಾಜಿ ಸಂಸದ ಉಗ್ರಪ್ಪ ಸುದ್ದಿಗೋಷ್ಟಿ

ಬೆಂಗಳೂರು: ಕೇಂದ್ರದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದ್ದು, ಇದೊಂದು ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ಮಾಜಿ ಸಂಸದ ಉಗ್ರಪ್ಪ ಸುದ್ದಿಗೋಷ್ಟಿ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಗ್ರಪ್ಪ, ಜಿಡಿಪಿ ದರ ತೀರ ಕೆಳಗೆ ಕುಸಿದಿದೆ. ಹಸಿವಿನಿಂದ ನರಳುತ್ತಿರುವವರ ಪಟ್ಟಿಯಲ್ಲಿ ಭಾರತಕ್ಕೆ 103ನೇ ಸ್ಥಾನವಿದೆ. ಪ್ರಜಾಪ್ರಭುತ್ವ ಕುಸಿಯುತ್ತಿರುವ ರಾಷ್ಟ್ರಗಳಲ್ಲಿ ಭಾರತ 51 ನೇ ಸ್ಥಾನದಲ್ಲಿದೆ. ಬಡತನದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಕೈಗಾರಿಕೋದ್ಯಮ ತೀವ್ರ ಕುಂಠಿತಗೊಂಡಿದೆ. ಒಂದು ಕೋಟಿಗೂ ಹೆಚ್ಚು ಉದ್ಯೋಗ ನಷ್ಟವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ರೈತರು ಕೆಟ್ಟ ಸ್ಥಿತಿಯಲ್ಲಿದ್ದಾರೆ. ರೈತರು ಬೆಳೆದ ಪದಾರ್ಥದ ಬೆಲೆ ಕುಸಿದಿದೆ. ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಅಭಿವೃದ್ಧಿ ಪೂರಕವಲ್ಲದ ಬಜೆಟ್ ಅಂದ್ರೆ ತಪ್ಪಿಲ್ಲ ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಂಸದ ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

2 ಕೋಟಿ ಉದ್ಯೋಗ ಸೃಷ್ಟಿ ಎಲ್ಲಿದೆ?
ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಹಿಟ್ಲರ್​ನ ಗೋಬಸ್ ಥಿಯರಿಯಂತಾಗಿದೆ ಮೋದಿ ನಿಲುವು. ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ. ದೇಶ ಪ್ರೇಮದ ಬಗ್ಗೆ ಬಿಜೆಪಿಯವರು ಮಾತನಾಡ್ತಾರೆ. ಆದರೆ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಲ್ಲ. ರಾಜ್ಯಕ್ಕೆ ಬಜೆಟ್​ನಲ್ಲಿ ಯಾವುದೇ ಹೊಸ ಕೊಡುಗೆಯಿಲ್ಲ ಎಂದರು.

ಅನಂತ್ ಕುಮಾರ್ ಹೆಗಡೆಗೆ ನಿಮ್ಹಾನ್​​ನಲ್ಲಿ ಚಿಕಿತ್ಸೆ ಕೊಡಿಸಬೇಕು:

ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರ ಮಾತನಾಡಿ, ಸಂವಿಧಾನ ಕೀಳೋಕೆ ಬಂದವರೆಂದು ಹೇಳಿದ್ದರು. ಈ ಮೂಲಕ ಅಂಬೇಡ್ಕರ್​ಗೆ ಅಪಮಾನ ಮಾಡಿದ್ದರು. ಇವತ್ತು ಗಾಂಧಿ ವಿರುದ್ಧ ಮತಿಗೆಟ್ಟ ಹೇಳಿಕೆ ಕೊಟ್ಟಿದ್ದಾರೆ. ಇದನ್ನ ನೋಡಿದರೆ ಹೆಗಡೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಿಮ್ಹಾನ್ಸ್ ನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಬೇಕು. ಮೊದಲು ಬಿಜೆಪಿಯವರು ಚಿಕಿತ್ಸೆ ಕೊಡಿಸಲಿ ಎಂದರು.

ಬ್ರಿಟಿಷರ ವಿರುದ್ಧ ಗಾಂಧೀಜಿ ಹೋರಾಡಿದ್ದವರು. ಸೌತ್ ಆಫ್ರಿಕಾದಲ್ಲೂ ವರ್ಣಬೇಧದ ವಿರುದ್ಧ ಹೋರಾಡಿದ್ದರು. ಇದನ್ನ ಅನಂತ್ ಕುಮಾರ್ ಹೆಗಡೆ ಅರ್ಥ ಮಾಡಿಕೊಳ್ಳಬೇಕು. ಗಾಂಧಿ ಹೋರಾಟದಿಂದ ಮಂಡೇಲಾ ಪ್ರೇರಿತರಾಗಿದ್ದರು. ಹೆಗಡೆ ಮಂಡೆಲಾ ಅಂತವರಿಗೂ ಅಪಮಾನ ಮಾಡಿದ್ದಾರೆ. ಸರ್ಕಾರ ಜೀವಂತವಿದ್ದರೆ ಹೆಗಡೆಯನ್ನ ಬಂಧಿಸಬೇಕು. ರಾಜ್ಯ, ಕೇಂದ್ರ ಎರಡೂ ಸರ್ಕಾರ ಸೇರಿ ಅರೆಸ್ಟ್ ಮಾಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

Intro:newsBody:ಕೇಂದ್ರದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ: ಉಗ್ರಪ್ಪ

ಬೆಂಗಳೂರು: ಕೇಂದ್ರದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಇದೊಂದು ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಡಿಪಿ ದರ ತೀರ ಕೆಳಗೆ ಕುಸಿದಿದೆ. ಹಸಿವಿನಿಂದ ನರಳುತ್ತಿರುವ ಪಟ್ಟಿಯಲ್ಲಿ 103 ನೇ ಸ್ಥಾನವಿದೆ. ಪ್ರಜಾಪ್ರಭುತ್ವ ಕುಸಿಯುತ್ತಿರುವ ರಾಷ್ಟ್ರಗಳಲ್ಲಿ 51 ರಲ್ಲಿದೆ. ಬಡತನ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಕೈಗಾರಿಕೋದ್ಯಮ ತೀರ್ವ ಕುಂಠಿತಗೊಂಡಿದೆ. ಒಂದು ಕೋಟಿಗೂ ಹೆಚ್ಚು ಉದ್ಯೋಗ ನಷ್ಟವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ರೈತರು ಕೆಟ್ಟ ಸ್ಥಿತಿಯಲ್ಲಿದ್ದಾರೆ. ರೈತರು ಬೆಳೆದ ಪದಾರ್ಥದ ಬೆಲೆ ಕುಸಿದಿದೆ. ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಅಭಿವೃದ್ಧಿ ಪೂರಕವಲ್ಲದ ಬಜೆಟ್ ಅಂದ್ರೆ ತಪ್ಪಿಲ್ಲ ಎಂದು ಕೇಂದ್ರ ಬಜೆಟ್ ಗೆ ಮಾಜಿ ಸಂಸದ ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
2 ಕೋಟಿ ಉದ್ಯೋಗ ಸೃಷ್ಟಿ ಎಲ್ಲಿದೆ? ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಹಿಟ್ಲರ್ ನ ಗೋಬಸ್ ಥಿಯರಿಯಂತಾಗಿದೆ ಮೋದಿ ನಿಲುವು. ಬರಿ ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ. ದೇಶ ಪ್ರೇಮದ ಬಗ್ಗೆ ಬಿಜೆಪಿಯವರು ಮಾತನಾಡ್ತಾರೆ. ಆದರೆ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಲ್ಲ. ರಾಜ್ಯಕ್ಕೆ ಬಜೆಟ್ ನಲ್ಲಿ ಯಾವುದೇ ಹೊಸ ಕೊಡುಗೆಯಿಲ್ಲ ಎಂದರು.

ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರ ಮಾತನಾಡಿ, ಸಂವಿಧಾನ ಕೀಳೋಕೆ ಬಂದವರೆಂದು ಹೇಳಿದ್ದರು. ಈ ಮೂಲಕ ಅಂಬೇಡ್ಕರ್ ಗೆ ಅಪಮಾನ ಮಾಡಿದ್ದರು. ಇವತ್ತು ಗಾಂಧೀ ವಿರುದ್ಧ ಮತಿಗೆಟ್ಟ ಹೇಳಿಕೆ ಕೊಟ್ಟಿದ್ದಾರೆ. ಇದನ್ನ ನೋಡಿದರೆ ಹೆಗಡೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಿಮ್ಹಾನ್ಸ್ ನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಬೇಕು. ಮೊದಲು ಬಿಜೆಪಿಯವರು ಚಿಕಿತ್ಸೆ ಕೊಡಿಸಲಿ ಎಂದರು.

ಬ್ರೀಟೀಷರ ವಿರುದ್ಧ ಗಾಂಧಿಜಿ ಹೋರಾಡಿದ್ದವರು. ಸೌತ್ ಆಫ್ರಿಕಾದಲ್ಲೂ ವರ್ಣಬೇಧದ ವಿರುದ್ಧ ಹೋರಾಡಿದ್ದರು. ಇದನ್ನ ಅನಂತ್ ಕುಮಾರ್ ಹೆಗಡೆ ಅರ್ಥ ಮಾಡಿಕೊಳ್ಳಬೇಕು. ಗಾಂಧಿ ಹೋರಾಟದಿಂದ ಮಂಡೇಲಾ ಪ್ರೇರಿತರಾಗಿದ್ದರು. ಹೆಗಡೆ ಮಂಡೆಲಾ ಅಂತವರಿಗೂ ಅಪಮಾನ ಮಾಡಿದ್ದಾರೆ. ಸರ್ಕಾರ ಜೀವಂತವಿದ್ದರೆ ಹೆಗ್ಡೆಯನ್ನ ಬಂಧಿಸಬೇಕು. ರಾಜ್ಯ, ಕೇಂದ್ರ ಎರಡೂ ಸರ್ಕಾರ ಅರೆಸ್ಟ್ ಮಾಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.