ಬೆಂಗಳೂರು : ಫ್ಯಾಷನ್ ಶೋ ಅಂದ್ರೆ ಅದು ಬರೀ ಗ್ಲ್ಯಾಮರ್ ಲೋಕ ಅಂತಲ್ಲೇ ಎಲ್ರಿಗೂ ಗೊತ್ತಿರೋದು. ಆದ್ರೆ ಬೆಂಗಳೂರಿನಲ್ಲೀಗ ವೃದ್ಧಿ ಪ್ರತಿಷ್ಠಾನ ಬಡ ಮಕ್ಕಳ ಶಿಕ್ಷಣಕ್ಕಾಗಿ ಫ್ಯಾಷನ್ ಶೋ ಮತ್ತು ಸೌಂದರ್ಯ ಸ್ಪರ್ಧೆ ಏರ್ಪಡಿಸಿದೆ.
ಒಂದೆಡೆ ಶಿಕ್ಷಣಕ್ಕಾಗಿ ಕಾಳಜಿ ಕಂಡ್ರೆ, ಮತ್ತೊಂದೆಡೆ ಫ್ಯಾಷನ್ ಶೋ ಸೌಂದರ್ಯೋಪಾಸಕರ ಕಣ್ಣು ಕುಕ್ಕುವಂತಿತ್ತು. ವೃದ್ಧಿ ಪ್ರತಿಷ್ಠಾನದಿಂದ ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಫ್ಯಾಷನ್ ಶೋ ನಡೆಸಲಾಯಿತು. ಬಡ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸುವ ಸದುದ್ದೇಶಕ್ಕಾಗಿ ವೃದ್ಧಿ ಪ್ರತಿಷ್ಠಾನವು ನಿಧಿ ಸಂಗ್ರಹಕ್ಕೆ ನಿರ್ಧರಿಸಿದ್ದು, ಇದಕ್ಕಾಗಿ ‘ವೃದ್ಧಿ ದಿವಾ - 2021’ ಎಂಬ ಫ್ಯಾಷನ್ ಶೋ ಏರ್ಪಡಿಸಿದ್ರು. ಫ್ಯಾಷನ್ ಶೋ ಮೂಲಕ ಒಂದಷ್ಟು ಬಡ ಮಕ್ಕಳ ಜೀವನಕ್ಕೆ ದಾರಿ ದೀಪವಾಗೋಕೆ ಮಾಡೆಲ್ಗಳು ನಿಧಿ ಸಂಗ್ರಹ ಮೂಲಕ ಮುಂದಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೇಶಕಿ ಪ್ರತಿಭಾ ಸಂಶಿಮಠ, ವೃದ್ಧಿ ಫೌಂಡೇಶನ್ ಸಂಸ್ಥಾಪಕರಾದ ಅನುಷಾ ಹೆಗ್ಡೆ, ನಟಿ ಶರ್ಮಿತಾ ಗೌಡ, ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ಚೇತನ್ ಮಲ್ಲಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ರು.
ಒಟ್ಟಲ್ನಿ, ಬಡಮಕ್ಕಳಿಗೆ ಬದುಕು ಕಲ್ಪಿಸಲು 'ವೃದ್ಧಿ ದಿವಾ - 2021' ಎಂಬ ಫ್ಯಾಷನ್ ಶೋ ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.