ಮಹದೇವಪುರ: ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಹಂತದ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆ ಮತದಾನ ಮಾಡಲು ಬರುತ್ತಿರೋ ಜನ ಸಾಲುಗಟ್ಟಿ ನಿಂತು ಸಾಮಾಜಿಕ ಅಂತರ ಕಾಪಾಡಿ ಮತದಾನ ಮಾಡುತ್ತಿದ್ದಾರೆ.
ಮತದಾನ ಕೇಂದ್ರದ ಎದುರು ಸಾಮಾಜಿಕ ಅಂತರ ಕಾಪಾಡುವಂತೆ ಚುನಾವಣಾ ಅಧಿಕಾರಿಗಳಿಂದ ಮತದಾರರಿಗೆ ಮುಂಜಾಗ್ರತೆ ಮೂಡಿಸಲಾಗುತ್ತಿದೆ. ಇಂದು ಮುಂಜಾನೆಯಿಂದ ಅತಿಯಾದ ಮಂಜು ಆವರಿಸಿದ್ದು ಮತದಾನ ಕೇಂದ್ರಕ್ಕೆ ಜನ ಬರುವುದಕ್ಕೆ ವಿಳಂಬ ಮಾಡುತ್ತಿದ್ದಾರೆ.
ಓದಿ: ಕರಗಾಂವ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಪರ ಮತಪ್ರಚಾರ ಆರೋಪ!
ಇನ್ನು ಕಣ್ಣೂರು ಗ್ರಾಮದಲ್ಲಿ ನಾಲ್ಕು ಸಾವಿರ ಜನ ಇದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸುಗಮವಾಗಿ ಮತದಾನ ನಡೆಯುತ್ತಿದೆ.