ETV Bharat / state

ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ: ವೀಲ್ ಚೇರ್​ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್​ಡಿಡಿ - ವಿಧಾನಸೌಧದಲ್ಲಿ ರಾಷ್ಟ್ರಪತಿ ಆಯ್ಕೆಗೆ ನಡೆದ ಮತದಾನ

ವಿಧಾನಸೌಧದಲ್ಲಿ ರಾಷ್ಟ್ರಪತಿ ಆಯ್ಕೆಗೆ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎಲ್ಲ 224 ಶಾಸಕರು ಮತದಾನ ಮಾಡಿದ್ದು, ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಕಾಲು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ವೀಲ್​ಚೇರ್​ನಲ್ಲಿ ಬಂದು ಮತದಾನ ಮಾಡಿದರು.

Former Prime Minister HDD arrived in a wheel chair
ವೀಲ್ ಚೇರ್​ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್​ಡಿಡಿ
author img

By

Published : Jul 18, 2022, 5:23 PM IST

Updated : Jul 18, 2022, 5:50 PM IST

ಬೆಂಗಳೂರು: ರಾಷ್ಟ್ರಪತಿ ಆಯ್ಕೆಗೆ ನಡೆದ ಮತದಾನ ಪ್ರಕ್ರಿಯೆ ಇನ್ನು ಒಂದು ಗಂಟೆ ಇರುವಾಗಲೇ ಮುಕ್ತಾಯವಾಗಿದೆ. ಎಲ್ಲ 224 ಶಾಸಕರು ಹಾಗೂ ಇಬ್ಬರು ಸಂಸದರು ಮತದಾನ ಮಾಡಿ ತೆರಳಿದ್ದಾರೆ. 224 ಶಾಸಕರ ಜೊತೆ ರಾಜ್ಯಸಭೆ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ ವಿಧಾನಸೌಧದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮತದಾನ ಪ್ರಕ್ರಿಯೆ ನಡೆದಿದ್ದು, ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಎಲ್ಲರೂ ಮತದಾನ ಮಾಡಿದ್ದರು. ಮೊದಲ ಮತವನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾವೇರಿ ಚಲಾಯಿಸಿದರೆ, ಕಡೆಯ ಮತವನ್ನು ಕಾಂಗ್ರೆಸ್ ಸದಸ್ಯ ಡಾ. ಮಂಜುನಾಥ್ ಚಲಾಯಿಸಿದ್ದಾರೆ.

ವೀಲ್ ಚೇರ್​ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್​ಡಿಡಿ

ಬಿಜೆಪಿಯಿಂದ 119, ಬಿಎಸ್ಪಿ, ಪಕ್ಷೇತರ ಹಾಗೂ ಸಭಾಧ್ಯಕ್ಷರಿಂದ ತಲಾ ಒಂದು ಮತ ಸೇರಿದಂತೆ ಒಟ್ಟು 122, ಕಾಂಗ್ರೆಸ್ 69 ಹಾಗೂ ಪಕ್ಷೇತರ ಸದಸ್ಯ ಸೇರಿ 70, ಜೆಡಿಎಸ್​ನ 32 ಸದಸ್ಯರು ಸೇರಿ 224 ಶಾಸಕರು ಹಾಗೂ ಓರ್ವ ರಾಜ್ಯಸಭೆ ಸದಸ್ಯ, ಓರ್ವ ಲೋಕಸಭೆ ಸದಸ್ಯರು ಮತದಾನ ಮಾಡಿದ್ದಾರೆ.

ಐದು ಗಂಟೆ ನಂತರ ಮತ ಪೆಟ್ಟಿಗೆ ಸೀಲ್ ಮಾಡಿ ಸಂಜೆ 5:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗುತ್ತದೆ. ರಾತ್ರಿ 9:20ರ ವಿಮಾನದಲ್ಲಿ ದಿಲ್ಲಿಗೆ ಮತಪೆಟ್ಟಿಗೆ ಕೊಂಡೊಯ್ಯಲಾಗುತ್ತದೆ. ವಿಧಾನಸಭೆ ಕಾರ್ಯದರ್ಶಿ ಕಚೇರಿಯ ಅಧಿಕಾರಿ ಮಹಾಂತೇಶ್ ಹಾಗೂ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಾಘವೇಂದ್ರ ಮತಪೆಟ್ಟಿಗೆ ಜತೆ ತೆರಳಲಿದ್ದಾರೆ.

ಇದನ್ನೂ ಓದಿ: ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಖಚಿತ: ಸಿಎಂ ಬೊಮ್ಮಾಯಿ ವಿಶ್ವಾಸ

ವಿಧಾನಸೌಧದಿಂದ ಡಿಸಿಪಿ ಭದ್ರತೆಯಲ್ಲಿ ಎರಡು ಭದ್ರತಾ ವಾಹನದೊಂದಿಗೆ ಮತಪೆಟ್ಟಿಗೆ ತೆರಳಲ್ಲಿದ್ದು, ವಿಮಾನದಲ್ಲಿ ಸಹ ಮತ ಪೆಟ್ಟಿಗೆಗಾಗಿ ಪ್ರತ್ಯೇಕ ಟಿಕೆಟ್ ಪಡೆಯಲಾಗಿದೆ. ತೆರಳುವ ಅಧಿಕಾರಿಗಳ ಜೊತೆಯಲ್ಲಿಯೇ ಸೂಕ್ತ ಭದ್ರತೆಯೊಂದಿಗೆ ಮತ ಪೆಟ್ಟಿಗೆಯು ತೆರಳಲ್ಲಿದ್ದು, ಬರುವಾಗಲೂ ಇದೆ ಪ್ರಕ್ರಿಯೆಯನ್ನು ಅಳವಡಿಸಲಾಗಿತ್ತು.

ವೀಲ್ ಚೇರ್​ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ: ಮಾಜಿ ಪ್ರಧಾನಿ ಹಾಗೂ ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಕಾಲು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಮತದಾನಕ್ಕೆ ವಿಳಂಬವಾಗಿ ಆಗಮಿಸಿದರು. ವಿಧಾನಸೌಧ ಆವರಣದಲ್ಲಿ ಅವರಿಗೆ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವೀಲ್ ಚೇರ್ ಮೂಲಕ ಆಗಮಿಸಿ ಮತದಾನ ಮಾಡಿ ದೇವೇಗೌಡರು ತೆರಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಶ್ರೀನಿವಾಸ್ ಪ್ರಸಾದ್ ಸಹ ಇಂದು ವಿಧಾನಸೌಧದಲ್ಲಿಯೇ ತಮ್ಮ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದರು. ದೆಹಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ ತಮಗೆ ರಾಜ್ಯದಲ್ಲಿಯೇ ಮತದಾನಕ್ಕೆ ಅವಕಾಶ ನೀಡುವಂತೆ ರಾಷ್ಟ್ರಪತಿ ಚುನಾವಣಾ ಆಯೋಗವನ್ನು ಮನವಿ ಮಾಡಿದ್ದರು. ವಯೋ ಸಹಜ ಸಮಸ್ಯೆ ಇರುವ ಹಿನ್ನೆಲೆ ದೇವೇಗೌಡರು ಹಾಗೂ ಶ್ರೀನಿವಾಸ್ ಪ್ರಸಾದ್​ಗೆ ಕರ್ನಾಟಕದಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

Last Updated : Jul 18, 2022, 5:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.