ETV Bharat / state

ರಾಜ್ಯದ ದೊಡ್ಡ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಸಾಲದು: ಒಕ್ಕಲಿಗರ ಹೋರಾಟ ಸಮಿತಿ - ಒಕ್ಕಲಿಗ ಸಮಯದಾಯಕ್ಕೆ ಶೇ 6ರಷ್ಟು ಮೀಸಲಾತಿ

ಒಕ್ಕಲಿಗ ಸಮುದಾಯಕ್ಕೆ ಸರ್ಕಾರ ಕೇವಲ ಶೇ.2ರಷ್ಟು ಮಾತ್ರ ಮೀಸಲಾತಿ ಹೆಚ್ಚಿಸಿದೆ. ರಾಜ್ಯದ ಅತೀ ದೊಡ್ಡ ಸಮುದಾಯಕ್ಕೆ ಇದು ಸಾಲದು ಎಂದು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಹೇಳಿದೆ.

vokkaliga committee
ಒಕ್ಕಲಿಗರ ಹೋರಾಟ ಸಮಿತಿ
author img

By

Published : Mar 26, 2023, 6:50 AM IST

ಬೆಂಗಳೂರು : "ಒಕ್ಕಲಿಗರು ರಾಜ್ಯದ ಅತ್ಯಂತ ದೊಡ್ಡ ಸಮುದಾಯ. ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.12ರಷ್ಟು ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಸರ್ಕಾರ ಕೇವಲ ಶೇ.2ರಷ್ಟು ಮಾತ್ರ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರುತ್ತದೆ ಎಂಬ ಆಶಾಭಾವನೆ ಹೊಂದಿದ್ದೇವೆ" ಎಂದು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ತಿಳಿಸಿದೆ.

"ಒಕ್ಕಲಿಗ ಸಮುದಾಯಕ್ಕೆ ಈಗಾಗಲೇ ಶೇ.4ರಷ್ಟು ಮೀಸಲಾತಿ ಇತ್ತು. ಅದನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.12ಕ್ಕೆ ಹೆಚ್ಚಿಸಬೇಕು ಎಂದು ಸಮುದಾಯದ ಧಾರ್ಮಿಕ ಗುರುಗಳ ಮುಖಂಡತ್ವದಲ್ಲಿ ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ರಚಿಸಿಕೊಂಡು ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದೆವು. ಆದರೆ, ಸರ್ಕಾರ 4 ರಿಂದ 6 ಕ್ಕೆ ಏರಿಕೆ ಮಾಡಿದೆ. ಅಂದರೆ ಶೇ.2ರಷ್ಟು ಮಾತ್ರ ಹೆಚ್ಚಿಸಿದ್ದಾರೆ. ದೊಡ್ಡ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ಏನೇನೂ ಸಾಲದು"ಎಂದು ಸಮಿತಿಯ ಅಧ್ಯಕ್ಷ ಡಾ.ಗಾನಂ ಶ್ರೀಕಂಠಯ್ಯ ಅವರು ಪ್ರೆಸ್​ಕ್ಲಬ್​ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು; ಸಿಎಂಗೆ ಮಾದಿಗ ಸಮುದಾಯದಿಂದ ಅಭಿನಂದನೆ

"ಒಕ್ಕಲಿಗ ಸಮುದಾಯ ಪ್ರವರ್ಗ 3 ಎ ನಲ್ಲಿತ್ತು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.4ರಷ್ಟು ಮೀಸಲಾತಿ ಪಡೆಯುತ್ತಿತ್ತು. ಕರ್ನಾಟಕ ರಾಜ್ಯವೊಂದರಲ್ಲೇ ನೆಲೆಸಿರುವ ಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯುಳ್ಳ ಸಮಾಜದ 115 ಉಪ ಪಂಗಡಗಳಿದ್ದು, ಅತ್ಯಂತ ಶ್ರಮಜೀವಿಗಳು. ಆದರೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದ ಸಮುದಾಯವಾಗಿದೆ. ಹೀಗಾಗಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಶೇ. 12 ರಷ್ಟು ಹೆಚ್ಚಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಇದೀಗ ಶೇ.6ರಷ್ಟು ಮೀಸಲಾತಿ ನೀಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತು ಒಕ್ಕಲಿಗ ಮಂತ್ರಿಗಳಿಗೆ ಹೋರಾಟ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ.12 ಕ್ಕೆ ಏರಿಸಬೇಕು" ಎಂದು ಇದೇ ವೇಳೆ ಆಗ್ರಹಿಸಿದರು.

ಇದನ್ನೂ ಓದಿ : ಪಂಚಮಸಾಲಿ ಸಮುದಾಯದ ಹೋರಾಟ ಅಂತ್ಯ: ಭಾವುಕರಾದ ಸ್ವಾಮೀಜಿ

ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ, ಸಮಿತಿಯ ಪದಾಧಿಕಾರಿಗಳಾದ ಬಿ. ಮೋಹನ್‍ಕುಮಾರ್, ಬಾಬಿ ವೆಂಕಟೇಶ್, ಗಂಗಣ್ಣ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಒಕ್ಕಲಿಗ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡುತ್ತೇವೆಂದು ಮೂರು ಪಕ್ಷಗಳು ಹೇಳಬೇಕು: ನಂಜಾವಧೂತ ಸ್ವಾಮೀಜಿ

ಸಿಎಂಗೆ ಅಭಿನಂದನೆ : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸಿನಂತೆ ಎಸ್​ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲಾಗಿದ್ದು, ಮಾದಿಗ ಸಮುದಾಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.