ETV Bharat / state

ಹೋಮ್​ ಕ್ವಾರಂಟೈನ್ ನಿಯಮ ಉಲ್ಲಂಘನೆ: ಹಲವು ಠಾಣೆಗಳಲ್ಲಿ ಎಫ್​ಐಆರ್ - ಹೋಮ್​ ಕ್ವಾರಂಟೈನ್ ನಿಯಮ ಉಲ್ಲಂಘನೆ

ಹೋಮ್​ ಕ್ವಾರಂಟೈನ್​ ನಿಯಮ ಉಲ್ಲಂಘಿಸಿದ 1,645 ಮಂದಿ ವಿರುದ್ದ ನಾನಾ ಠಾಣೆಗಳಲ್ಲಿ‌ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Violation of the Home Quarantine Rule: F IR
ಹೋಮ್​ ಕ್ವಾರಂಟೈನ್ ನಿಯಮ ಉಲ್ಲಂಘನೆ: ಹಲವು ಠಾಣೆಗಳಲ್ಲಿ ಎಫ್​ಐಆರ್
author img

By

Published : Jul 16, 2020, 9:05 AM IST

ಬೆಂಗಳೂರು: ಹೋಮ್​ ಕ್ವಾರಂಟೈನ್​ ನಿಯಮ ಉಲ್ಲಂಘಿಸಿದ 1,645 ಮಂದಿ ವಿರುದ್ಧ ನಾನಾ ಪೊಲೀಸ್ ಠಾಣೆಗಳಲ್ಲಿ ಎಫ್​ಐಆರ್ ದಾಖಲಾಗಿದೆ.

ಕೊರೊನಾ ಸೋಂಕು ತಡೆಗಟ್ಟಲು‌ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಹರಸಹಾಸ ಪಡುತ್ತಿದೆ. ಸದ್ಯ ಸೋಂಕಿತರಿಂದ ಆಸ್ಪತ್ರೆಗಳು ತುಂಬಿವೆ. ಇನ್ನು ಪ್ರಾಥಮಿಕ ಸೋಂಕಿತರ ಸಂಪರ್ಕದಲ್ಲಿರುವವರನ್ನ ಹೋಟೆಲ್ ಕ್ವಾರಂಟೈನ್​ ಅನ್ನು ಆರೋಗ್ಯ ಇಲಾಖೆ ಮಾಡುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಇರುವಂತೆ ಸೂಚನೆ ನೀಡಲಾಗಿದೆ. ಆದರೆ ರಾಜ್ಯದಲ್ಲಿ 69,427 ಜನ ಹೋಂ ಕ್ವಾರಂಟೈನ್ ಇದ್ದು, 1,645 ಮಂದಿ ನಿಯಮ ಉಲ್ಲಂಘಿಸಿದ ಕಾರಣ ನಾನಾ ಪೊಲೀಸ್ ಠಾಣೆಗಳಲ್ಲಿ ಎಫ್​ಐಆರ್ ದಾಖಲಾಗಿದೆ.

ಇಲ್ಲಿಯವರೆಗೆ ಬೆಂಗಳೂರು ನಗರದಲ್ಲಿ 35,082, ಬೆಳಗಾವಿಯಲ್ಲಿ 3,390, ತುಮಕೂರಿನಲ್ಲಿ 2,158, ದಕ್ಷಿಣ ಕನ್ನಡ 2,156, ಮೈಸೂರು 1,980‌ ಮಂದಿ ಹೋಂ ‌ಕ್ವಾರಂಟೈನ್ ಇದ್ದಾರೆ. ಇವರಲ್ಲಿ ಬೆಂಗಳೂರು ನಗರದಲ್ಲಿ 570 ಮಂದಿ, ಬೆಳಗಾವಿಯಲ್ಲಿ 124 ಮಂದಿ, ಕಲಬುರುಗಿಯಲ್ಲಿ 106, ಬೆಂಗಳೂರು ಗ್ರಾಮಾಂತರ, 104 ಮಂದಿ ಸೇರಿ ಒಟ್ಟು 1,645 ಮಂದಿ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದು, ಇವರ ಮೇಲೆ ನಾನಾ ಠಾಣೆಗಳಲ್ಲಿ‌ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.