ಬೆಂಗಳೂರು: ಜೂ.1ರಿಂದ ದೇವಾಲಯಗಳನ್ನು ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಬಹುದಿನಗಳಿಂದ ಮುಚ್ಚಿದ್ದ ಜಯನಗರ 4ನೇ ಬ್ಲಾಕ್ ವಿನಾಯಕ ದೇವಸ್ಥಾನವನ್ನು ಶಾಸಕಿ ಸೌಮ್ಯ ರೆಡ್ಡಿ ಇಂದು ಸ್ವಚ್ಛಗೊಳಿಸಿದರು.
ವಿವಿಧ ಸಿಬ್ಬಂದಿಯನ್ನು ಬಳಸಿ ದೇವಾಲಯ ಸ್ವಚ್ಛಗೊಳಿಸಲಾಯಿತು. ಖುದ್ದು ಸೌಮ್ಯ ರೆಡ್ಡಿ ಮುತುವರ್ಜಿ ವಹಿಸಿ ದೇವಸ್ಥಾನ ಸ್ವಚ್ಛಗೊಳಿಸಿದರು.
ಲಾಕ್ಡೌನ್ ಘೋಷಣೆಯಾದ ಸಂದರ್ಭದಿಂದಲೂ ದೇವಾಲಯಗಳು ಸಾರ್ವಜನಿಕರ ಭೇಟಿಗೆ ಮುಕ್ತವಾಗಿರಲಿಲ್ಲ. ಕೇವಲ ದೈನಂದಿನ ಪೂಜೆಗಷ್ಟೇ ತೆರೆಯುತ್ತಿದ್ದ ದೇವಾಲಯಗಳು ಅಷ್ಟೇ ಬೇಗನೆ ಬಾಗಿಲು ಮುಚ್ಚುತ್ತಿದ್ದವು.
ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ಇರುವ ವಿನಾಯಕ ದೇವಸ್ಥಾನದಲ್ಲಿ ಸಿಬ್ಬಂದಿ ಮತ್ತು ನಗರ ಪಾಲಿಕೆ ಸದಸ್ಯರಾದ ನಾಗರಾಜ್, ಶಾಸಕಿ ಸೌಮ್ಯ ರೆಡ್ಡಿ ಇಂದು ದೇವಸ್ಥಾನವನ್ನು ತೊಳೆದು ಶುದ್ಧೀಕರಣ ಮಾಡಿದರು. ದೇವಸ್ಥಾನದ ಒಳಗೆ ಮತ್ತು ಹೊರ ಆವರಣವನ್ನು ಸ್ಯಾನಿಟೈಸರ್ ನಿಂದ ಶುದ್ಧಗೊಳಿಸಲಾಯಿತು. ನಗರದಲ್ಲಿರುವ 70 ದೇವಾಲಯಗಳನ್ನು ಕೂಡ ಸ್ವಚ್ಛಗೊಳಿಸಿ ಭಕ್ತರ ಆಗಮನಕ್ಕೆ ಸಜ್ಜುಗೊಳಿಸಲಾಗುತ್ತಿದೆ.