ETV Bharat / state

ಭೀಕರ ಅಪಘಾತ : ಬೈಕ್ ಸವಾರನ ವಿರುದ್ಧ ದೂರು ನೀಡಿದ ಸಂಚಾರಿ ವಿಜಯ್ ಸಹೋದರ

ನಿನ್ನೆ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸ್ನೇಹಿತರ ಜೊತೆ ಬೈಕ್​​​​ನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿ ಹಿಂಬದಿ ಕುಳಿತಿದ್ದ ನಟ ಸಂಚಾರಿ ವಿಜಯ್​​ಗೆ ಗಂಭೀರ ಗಾಯವಾಗಿ, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ..

Vijay's brother complained against the bike rider naveen
ಬೈಕ್ ಸವಾರನ ವಿರುದ್ಧ ದೂರು ನೀಡಿದ ಸಂಚಾರಿ ವಿಜಯ್ ಸಹೋದರ
author img

By

Published : Jun 13, 2021, 6:04 PM IST

Updated : Jun 13, 2021, 7:41 PM IST

ಬೆಂಗಳೂರು : ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಅವರ ಸಹೋದರ ಸಿದ್ಧೇಶ್ ಕುಮಾರ್ ಬೈಕ್ ಸವಾರನ ವಿರುದ್ಧ ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ನೇಹಿತನ‌ ಮನೆಗೆ ಹೋಗಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಜಯನಗರದ 7ನೇ ಹಂತ ಬಳಿ ಬರುವಾಗ ಬೈಕ್​ನಲ್ಲಿ‌ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ನವೀನ್ ವಿರುದ್ಧ ವಿಜಯ್ ಸಹೋದರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ‌‌.

ನಿನ್ನೆ ರಾತ್ರಿ ಅಪಘಾತವಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.‌ ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ಖಚಿತ ಪಡಿಸಿಕೊಂಡಿದ್ದೆವು. ಇದೀಗ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ಎಂಬುವರು ನವೀನ್ ವಿರುದ್ಧ ದೂರು ನೀಡಿದ್ದಾರೆ. ದೂರು ಸ್ವೀಕಾರವಾಗಿದ್ದು, ಸ್ಥಳಕ್ಕೆ ಹೋಗಿ ಮಹಜರು ಮಾಡಿ ಕಾನೂನು ಪ್ರಕ್ರಿಯೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಯನಗರ ಸಂಚಾರಿ ಠಾಣೆಯ ಇನ್​​ಸ್ಪೆಕ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ಅಪಘಾತ: ಸ್ಯಾಂಡಲ್​ವುಡ್ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ

ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ?

ಸ್ನೇಹಿತರ ಮನೆಗೆ ಹೋಗಿ ವಾಪಸಾಗುವಾಗ ಬೈಕ್ ಸವಾರ ನವೀನ್ ವೇಗವಾಗಿ ಬೈಕ್ ಓಡಿಸುತ್ತಿದ್ದ ಪರಿಣಾಮ ಎಲೆಕ್ಟ್ರಿಕ್​​ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರ ವಿಜಯ್ ತಲೆಯ ಮೆದುಳಿನ ಬಲಭಾಗ ಹಾಗೂ ತೊಡೆಯ ಭಾಗಕ್ಕೆ ತ್ರೀವ ಪೆಟ್ಟಾಗಿದೆ. ನವೀನ್​​ ಬೆನ್ನಿಗೂ ಗಾಯವಾಗಿದೆ‌. ಇಬ್ಬರು ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯ್ ಕೋಮಾ ಸ್ಥಿತಿಯಲ್ಲಿದ್ದು, ಇನ್ನೆರಡು ದಿನಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Last Updated : Jun 13, 2021, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.