ETV Bharat / state

ಜನಸ್ಪಂದನ ಕಾರ್ಯಕ್ರಮದ ಯಶಸ್ಸು ನೋಡಿ ಕಾಂಗ್ರೆಸ್​ ವಿಚಲಿತ: ವಿಜಯೇಂದ್ರ

ಜನಸ್ಪಂದನ ಕಾರ್ಯಕ್ರಮದ ಯಶಸ್ಸು ನೋಡಿ ಗಾಬರಿಗೊಂಡಿರುವ ಕಾಂಗ್ರೆಸ್ ಪಕ್ಷದವರು ಜನಸ್ಪಂದನ ಮತ್ತು ಬಿಜೆಪಿ ವಿರುದ್ದ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

KN_SMG_01
ಬಿ.ವೈ.ವಿಜಯೆಂದ್ರ
author img

By

Published : Sep 12, 2022, 4:10 PM IST

ಶಿವಮೊಗ್ಗ: ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಯಶಸ್ಸು ನೋಡಿದ ಮೇಲೆ ಕಾಂಗ್ರೆಸ್ ನವರು ಗಾಬರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೆಂದ್ರ ಹೇಳಿದರು.

ನಗರದದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಬಿಡುತ್ತೆ, ತಮ್ಮನ್ನು ಯಾರೂ ತಡೆಯೋಕೆ ಆಗಲ್ಲಾ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರಿದ್ದರು. ಆದರೆ, ಜನಸ್ಪಂದನ ಯಶಸ್ಸು ನೋಡಿ ಅವರಿಗೆ ಆಘಾತ, ನೋವು ಉಂಟಾಗಿದೆ. ಹಾಗಾಗಿ ಜನಸ್ಪಂದನ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್​ ಮುಖಂಡರು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಎಲ್ಲಾ ಹೇಳಿಕೆಗಳಿಗೆ ಮುಂಬರುವ ದಿನದಲ್ಲಿ ರಾಜ್ಯದ ಜನ ಉತ್ತರ ಕೊಡ್ತಾರೆ ಎಂದರು.

ಜನಸ್ಪಂದನ ಬಗ್ಗೆ ವಿಜಯೇಂದ್ರ ಹೇಳಿಕೆ

ಭಾರತೀಯ ಜನತಾ ಪಾರ್ಟಿಯನ್ನು ಕಾಂಗ್ರೆಸ್​ನವರು ಲೆಕ್ಕಕ್ಕೇ ಇಟ್ಟುಕೊಂಡಿರಲಿಲ್ಲಾ. ಈಗ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ, ಇದನ್ನು ಕಂಡಂತಹ ಕಾಂಗ್ರೆಸ್ ಮುಖಂಡರು ವಿಚಲಿತರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಾರಿಗೆ ಆಶೀರ್ವಾದ ಮಾಡಬೇಕು ಎನ್ನುವುದು ಪ್ರಜ್ಞಾವಂತ ಜನರಿಗೆ ಗೊತ್ತಿದೆ 140 ಕ್ಕೂ ಹೆಚ್ಚು ಸ್ಥಾನ ಗೆದ್ದು ನಿಶ್ಚಿತ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅದು ಸತ್ಯ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:'ನನ್ನ ಸಿ.ಟಿ.ರವಿ ಲೂಟಿ ರವಿ ಅಂದರೆ ನಾನು ಸಿದ್ದ ಪೆದ್ದ ಅನ್ನಬಹುದಲ್ವಾ?'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.