ಬೆಂಗಳೂರು: ಥಿಯೇಟರ್ ಫೌಂಡೇಶನ್ ಹಾಗೂ ವಿದ್ಯಾರ್ಥಿ ಭವನ ಹೋಟೆಲ್ ಸಹಯೋಗದಲ್ಲಿ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 6ರಿಂದ ಮೇ 8ರವರೆಗೆ ‘ವಿದ್ಯಾರ್ಥಿ ಭವನ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ವಿದ್ಯಾರ್ಥಿ ಭವನ ಹೋಟೆಲ್ ಮಾಲೀಕ ಅರುಣ್ ಅಡಿಗ ಹೇಳಿದ್ದಾರೆ.
ಶುಕ್ರವಾರ ನಗರದ ವಿದ್ಯಾರ್ಥಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ದಶಕಗಳಿಂದ ವರ್ಷಗಳಿಂದ ನಾಡಿನ ಜನರಿಗೆ ರುಚಿಯಾಗಿ ದೋಸೆ ಉಣಬಡಿಸುತ್ತಾ ಮನೆ ಮಾತಾಗಿದ್ದು, ಈ ಅವಧಿಯಲ್ಲಿ ಪ್ರಸಿದ್ಧ ಕವಿಗಳು ಈ ಹೋಟೆಲ್‌ಗೆ ಬಂದು ಹೋಗಿದ್ದಾರೆ. ನೂರಾರು ಕಥೆಗಳು ಇಲ್ಲಡಗಿವೆ, ಅವುಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮೊದಲ ಎರಡು ದಿನ ಸಂಜೆ 6ಕ್ಕೆ, ಕೊನೆಯ ದಿನ ಬೆಳಿಗ್ಗೆ 11.30ಕ್ಕೆ ಮತ್ತು ಸಂಜೆ 6ಕ್ಕೆ ನಾಟಕ ಪ್ರದರ್ಶನ ಇರಲಿದ್ದು, 90 ನಿಮಿಷ ನಾಟಕ ಪ್ರದರ್ಶನಕ್ಕೆ ಪ್ರತಿ ಟಿಕೆಟ್‌ಗೆ 249 ರೂ ನಿಗದಿಪಡಿಸಲಾಗಿದೆ. ಆಸಕ್ತರು, ವಿದ್ಯಾರ್ಥಿ ಭವನದಲ್ಲಿ ಟಿಕೆಟ್ ಪಡೆಯಬಹುದು. ಜತೆಗೆ, ಬುಕ್‌ಮೈ ಶೋನಲ್ಲಿ ಮುಂಗಡವಾಗಿ ಬುಕಿಂಗ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಾಯವ್ಯ ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಚುನಾವಣೆ: ಪಂಚಮಸಾಲಿ ಸಮಾಜಕ್ಕೆ ಕಾಂಗ್ರೆಸ್ ಮಣೆ!
ರಾಜೇಂದ್ರ ಕಾರಂತ ಈ ನಾಟಕ ರಚಿಸಿದ್ದಾರೆ. ಅರ್ಜುನ ಕಬ್ಬಿಣ ನಿರ್ದೇಶಿಸಿದ್ದಾರೆ. ಸಿಹಿಕಹಿ ಚಂದ್ರು, ಸುಂದರ್‌ವೀಣಾ, ರಘುನಂದನ್, ಕುಲದೀಪಕ್ ಸೇರಿ ಬೆಂಗಳೂರು ಥಿಯೇಟರ್ ಫೌಂಡೇಷನ್ ಕಲಾವಿದರು ನಟಿಸಿದ್ದಾರೆ.