ETV Bharat / state

ವಿಧಾನಸೌಧದ ಬಳಿ ಹಣ ಪತ್ತೆ: ಪೊಲೀಸರ ವಿರುದ್ಧ ಆರೋಪಿ ಜಗದೀಶ್‌ ಪರ ವಕೀಲ ಗರಂ - ಎಂಜಿನಿಯರ್ ಬ್ಯಾಗ್​ನಲ್ಲಿ ಹಣ ಪತ್ತೆ

ವಿಧಾನಸೌಧದ ಬಳಿ ನಿನ್ನೆ 10 ಲಕ್ಷ ರೂಪಾಯಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿಯ ಪರ ವಕೀಲರು ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.

Lawyer serious allegations against the police  Vidhana Soudha money found case  allegations against the police department  ವಿಧಾನಸೌಧದ ಬಳಿ ಹಣ ಪತ್ತೆ ಪ್ರಕರಣ  ಪೊಲೀಸರ ಮೇಲೆಯೇ ಗಂಭೀರ ಆರೋಪ  ಎಂಜಿನಿಯರ್ ಬ್ಯಾಗ್​ನಲ್ಲಿ ಹಣ ಪತ್ತೆ  ಈ ಪ್ರಕರಣದ ಬಗ್ಗೆ ಸಿಎಂ ಹೇಳಿದ್ದೇನು
ವಿಧಾನಸೌಧದ ಬಳಿ ಹಣ ಪತ್ತೆ ಪ್ರಕರಣ: ಪೊಲೀಸರ ಮೇಲೆಯೇ ಗಂಭೀರ ಆರೋಪ
author img

By

Published : Jan 6, 2023, 10:42 AM IST

ಬೆಂಗಳೂರು: ವಿಧಾನಸೌಧ ಬಳಿ ಪಿಡಬ್ಲ್ಯೂಡಿ ಎಂಜಿನಿಯರ್‌ ಜಗದೀಶ್‌ ಎಂಬವರಿಂದ 10 ಲಕ್ಷ ರೂಪಾಯಿ ಹಣ ಸಿಕ್ಕಿರುವ ಪ್ರಕರಣ ನಿನ್ನೆ ನಡೆದಿತ್ತು. ಈ ಕುರಿತು ಟ್ವೀಟ್ ಮಾಡಿರುವ ಬಂಧಿತ ಎಂಜಿನಿಯರ್‌ ಜಗದೀಶ್ ಪರ ವಕೀಲ ರಾಜು ಗಡೇಕರ್, 'ಡಿಸಿಪಿ ಆಣತಿಯಂತೆ ವಕೀಲರೊಂದಿಗೆ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಅಕ್ರಮವಾಗಿ ಕೂಡಿ ಹಾಕಿದ್ದು, ನಂತರ ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ' ಎಂದು ಆರೋಪಿಸಿದ್ದಾರೆ.

ಎಂಜಿನಿಯರ್ ಜಗದೀಶ್‌ ಬ್ಯಾಗ್​ನಲ್ಲಿ ಹಣ ಪತ್ತೆ: ಮಂಡ್ಯದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಬುಧವಾರ ಸಂಜೆ 4:15ರ ಸುಮಾರಿಗೆ ವಿಧಾನಸೌಧದ ಒಳ ಪ್ರವೇಶಿಸಲು ಪಶ್ಚಿಮ ದ್ವಾರದ ಬಳಿ ಬಂದಿದ್ದರು‌. ಭದ್ರತಾ ಸಿಬ್ಬಂದಿ ಬ್ಯಾಗ್ ತಪಾಸಣೆ ನಡೆಸಿದಾಗ 10 ಲಕ್ಷ ರೂ ಹಣ ಪತ್ತೆಯಾಗಿದೆ. ಜಗದೀಶ್ ಸೂಕ್ತ ಮಾಹಿತಿ ನೀಡದ ಹಿನ್ನೆಲೆ ಮತ್ತು ಸೂಕ್ತ ದಾಖಲಾತಿ ಇಲ್ಲದ್ದರಿಂದ ಭದ್ರತಾ ಸಿಬ್ಬಂದಿ ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಣದ ಬ್ಯಾಗ್ ಜೊತೆ ಜಗದೀಶ್‌ ಅವರನ್ನು ವಶಕ್ಕೆ‌ ಪಡೆದುಕೊಳ್ಳಲಾಯಿತು ಎಂದು ನಿನ್ನೆ ಪೊಲೀಸರು ಮಾಹಿತಿ ನೀಡಿದ್ದರು.

'ಭದ್ರತಾ ಸಿಬ್ಬಂದಿಯ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ವಿಚಾರಣೆಯಲ್ಲಿ ಜಗದೀಶ್ ಅವರು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಣ ತಂದಿದ್ದು, ಸೂಕ್ತ ದಾಖಲಾತಿ ನೀಡಲು ಸಮಯಾವಕಾಶ ಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಜಗದೀಶ್‌ಗೆ ವಕೀಲರ ಜೊತೆ ಠಾಣೆಗೆ ಬಂದು ಸೂಕ್ತ ದಾಖಲೆಯನ್ನು ಒದಗಿಸುವಂತೆ ಸೂಚಿಸಲಾಗಿತ್ತು' ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದರು. 'ಹಣವನ್ನು ಕೋರ್ಟ್​ ವಶಕ್ಕೆ ನೀಡಿದ್ದೇವೆ. ಸೂಕ್ತ ದಾಖಲಾತಿ ತಂದು ಕೋರ್ಟ್​ನಲ್ಲೇ ಹಣ ಪಡೆದುಕೊಳ್ಳುವಂತೆ ತಿಳಿಸಿದ್ದೇವೆ. ನೋಟಿಸ್ ನೀಡಿ ಇಂದು ಕೂಡ ವಿಚಾರಣೆಗೆ ಕರೆದಿದ್ದೇವೆ. ವಿಚಾರಣೆ ಬಳಿಕವಷ್ಟೇ ಇನ್ನುಳಿದ ಮಾಹಿತಿ ತಿಳಿದು ಬರಲಿದೆ' ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ವಿಧಾನಸೌಧದ ದ್ವಾರದಲ್ಲಿ ಹಣ ಸಿಕ್ಕ ಪ್ರಕರಣದಲ್ಲಿ ಯಾರೇ ಇದ್ದರೂ ಕ್ರಮ: ಸಿಎಂ

Lawyer serious allegations against the police  Vidhana Soudha money found case  allegations against the police department  ವಿಧಾನಸೌಧದ ಬಳಿ ಹಣ ಪತ್ತೆ ಪ್ರಕರಣ  ಪೊಲೀಸರ ಮೇಲೆಯೇ ಗಂಭೀರ ಆರೋಪ  ಎಂಜಿನಿಯರ್ ಬ್ಯಾಗ್​ನಲ್ಲಿ ಹಣ ಪತ್ತೆ  ಈ ಪ್ರಕರಣದ ಬಗ್ಗೆ ಸಿಎಂ ಹೇಳಿದ್ದೇನು
ಪೊಲೀಸರ ಮೇಲೆಯೇ ಗಂಭೀರ ಆರೋಪ

ಡಿಸಿಪಿ ಅನುಮತಿಯಂತೆ ಜಗದೀಶ್​ ತಮ್ಮ ವಕೀಲನ ಜೊತೆ ವಿಧಾನಸೌಧ ಪೊಲೀಸ್​ ಠಾಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಜಗದೀಶ್‌ರನ್ನು ವಿಚಾರಣೆಗೆ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ಬಳಿಕ ವಕೀಲರು, ನನ್ನ ಜೊತೆ ಜಗದೀಶ್​ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಿಲ್ಲ ಎಂದು ಆರೋಪಿಸಿ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ಗೆ ಬೆಂಗಳೂರು ನಗರ ಪೊಲೀಸರು ಪ್ರತ್ಯುತ್ತರ ನೀಡಿದ್ದಾರೆ. ದಯವಿಟ್ಟು ಇಲ್ಲಿ ಅಪರಾಧವನ್ನು ವರದಿ ಮಾಡಬೇಡಿ. ತುರ್ತು ಸಂದರ್ಭದಲ್ಲಿ ನಮ್ಮ 112 ಸಂಖ್ಯೆಗೆ ಕರೆ ಮಾಡಿ. ನಿಮಗೆ ಉತ್ತಮ ಸೇವೆ ನೀಡಲು ಸಹಕರಿಸಿ ಎಂದಿದ್ದಾರೆ.

ಪ್ರಕರಣದ ಬಗ್ಗೆ ಸಿಎಂ ಹೇಳಿದ್ದೇನು?: 'ಇಂಜಿನಿಯರ್ ಒಬ್ಬರು ಹಣ ತೆಗೆದುಕೊಂಡು ಹೋಗುತ್ತಿರುವಾಗ, ಸ್ಕ್ಯಾನಿಂಗ್‌ನಲ್ಲಿ ನಮ್ಮ ಪೊಲೀಸರು ಅವರನ್ನು ಹಿಡಿದಿದ್ದಾರೆ. ಪ್ರಕರಣ ದಾಖಲಾಗಿದೆ. ತೀವ್ರಗತಿಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲಿಂದ ಹಣ ತೆಗೆದುಕೊಂಡು ಬಂದರು. ಯಾರಿಗೆ ಕೊಡಲು ತೆಗೆದುಕೊಂಡು ಬಂದಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಯಾರೇ ಇದ್ದರೂ ಶಿಕ್ಷೆ ಕೊಡುವ ಕೆಲಸವನ್ನು ಮಾಡುತ್ತೇವೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಇದನ್ನೂ ಓದಿ: 'ನನಗೆ ಕ್ಯಾನ್ಸರ್ ಇದೆ ಎಂದು ಪೋಷಕರಿಗೆ ಹೇಳಬೇಡಿ...': ಕಣ್ಣೀರು ತರಿಸುವ ಪುಟ್ಟ ಬಾಲಕನ ಬದುಕಿನ ಕಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.