ETV Bharat / state

ಟೋಲ್‌ಗಳಲ್ಲಿ ಹಣ ಸಂಗ್ರಹ ಕುರಿತು ಚರ್ಚೆಗೆ ಅವಕಾಶ ನೀಡಿ ಸಭಾಪತಿ ರೂಲಿಂಗ್ - ಟೋಲ್​ಗಳಲ್ಲಿ ಹಣ ಸಂಗ್ರಹ

ಕಾಂಗ್ರೆಸ್​ನ‌ ಸಿ.ಎಂ. ಇಬ್ರಾಹಿಂ, ಬಿಜೆಪಿಯ ನಾರಾಯಣಸ್ವಾಮಿ ಸೇರಿದಂತೆ ಕೆಲ ಸದಸ್ಯರು ಪಕ್ಷಾತೀತವಾಗಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.‌ ಸದಸ್ಯರ ಮನವಿಗೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಇತ್ಯಾದಿ ಬಗ್ಗೆ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡುವುದಾಗಿ ರೂಲಿಂಗ್ ನೀಡಿದರು.

DCM Govinda Karajola
ಡಿಸಿಎಂ ಗೋವಿಂದ ಕಾರಜೋಳ
author img

By

Published : Mar 24, 2021, 1:34 PM IST

ಬೆಂಗಳೂರು: ರಾಜ್ಯದಲ್ಲಿನ ಟೋಲ್​ಗಳಲ್ಲಿ ಹಣ ಸಂಗ್ರಹದ ಕಾಲಾವಧಿ ಕುರಿತು ವಿಸ್ತೃತವಾದ ಚರ್ಚೆ ನಡೆಸಲು ಅರ್ಧ ಗಂಟೆ ಕಾಲಾವಕಾಶ ಕಲ್ಪಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಅವರು, ಬಾಗೇವಾಡಿ ರಸ್ತೆ ಟೋಲ್‌ನಿಂದ ರೈತರಿಗೆ ತೊಂದರೆಯಾಗುತ್ತಿರುವ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಡಿಸಿಎಂ ಗೋವಿಂದ ಕಾರಜೋಳ, ವರ್ಷದಲ್ಲಿ ನಾಲ್ಕು ತಿಂಗಳು ಸಕ್ಕರೆ ಕಾರ್ಖಾನೆ ಕೆಲಸ ಮಾಡಲಿವೆ. ಈ ವೇಳೆ ರೈತರಿಗೆ ತೊಂದರೆ ಆಗುತ್ತಿರುವುದು ನಿಜ. ಕಬ್ಬಿನ ಟ್ರ್ಯಾಕ್ಟರ್​ಗಳ ಸಂಚಾರಕ್ಕೆ ಬೈ ಪಾಸ್ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪ

ಪಿಪಿಪಿ ಮಾದರಿ ಟೋಲ್ ನಿರ್ಮಿಸಲಾಗಿರುತ್ತದೆ. ಸದ್ಯ 2007 ರಲ್ಲಿ ಟೋಲ್‌ಗೇಟ್ ಆರಂಭಗೊಂಡರೂ ಅದಕ್ಕಾಗಿ ಮಾಡಿದ್ದ ಸಾಲ ತೀರುವವರೆಗೂ ಟೋಲ್ ಸಂಗ್ರಹ ಮಾಡಲಾಗುತ್ತದೆ. ಸದ್ಯ ಇನ್ನೂ ಸಾಲ ಬಾಕಿ ಇದ್ದು ಟೋಲ್ ಸಂಗ್ರಹ ಮುಂದುವರೆಸಲಾಗುತ್ತದೆ. ಆದರೆ ಟ್ರ್ಯಾಕ್ಟರ್​ಗಳಿಗೆ ವಿನಾಯಿತಿ ಕೊಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಮಹಾಂತೇಶ ಕವಟಗಿಮಠ, ಮೂರೂ ಟೋಲ್‌ಗಳಿಂದ‌ ಕಳೆದ 13 ವರ್ಷಗಳಿಂದ ಸಾವಿರ ಕೋಟಿಗೂ ಹೆಚ್ಚು ಟೋಲ್‌ಸಂಗ್ರಹ ಆಗಿದೆ, ಆದರೂ ಸಾಲ ಮುಗಿದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ನ‌ ಸಿ.ಎಂ. ಇಬ್ರಾಹಿಂ, ಬಿಜೆಪಿಯ ನಾರಾಯಣಸ್ವಾಮಿ ಸೇರಿದಂತೆ ಕೆಲ ಸದಸ್ಯರು ಪಕ್ಷಾತೀತವಾಗಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.‌ ಸದಸ್ಯರ ಮನವಿಗೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಇತ್ಯಾದಿ ಬಗ್ಗೆ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡುವುದಾಗಿ ರೂಲಿಂಗ್ ನೀಡಿದರು.

ಕೆಎಚ್​ಬಿ ಭೂಮಿ ಡಿ-ನೋಟಿಫಿಕೇಷನ್:

ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ವಸತಿ ಯೋಜನೆಗೆ ಸ್ವಾಧೀನಪಡಿಸಿಕೊಂಡಿದ್ದ ಹೆಚ್ಚುವರಿ ಜಮೀನನ್ನು‌ ರೈತರಿಗೆ ಮರಳಿಸಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಮರಿತಿಬ್ಬೇಗೌಡ ಪರ ಅಪ್ಪಾಜಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯ ಜಿಲ್ಲೆ ಎಲೆಚಾಕನಹಳ್ಳಿ, ನೊದೆಕೊಪ್ಪಲು, ರಾಗಿಮುದ್ದನಹಳ್ಳಿ ಮತ್ತು ಊರಮಾರಕಸಲಗೆರೆ ಗ್ರಾಮದಲ್ಲಿ ಒಟ್ಟು 800 ಎಕರೆ ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ಡಿಮ್ಯಾಂಡ್ ಸರ್ವೇ ಮಾಡಿದಾಗ 200 ಎಕರೆ ಮಾತ್ರ ಸಾಕು ಅನ್ನುವ ವರದಿ ಬಂದಿದೆ. ಹಾಗಾಗಿ 600 ಎಕರೆಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ವಾಪಸ್​ಗೆ ಕ್ರಮ ಕೈಗೊಳ್ಳಲಾಗಿದೆ. 199 ಎಕರೆ ಸದ್ಯ ನಮ್ಮಲ್ಲಿದೆ. ನಾವೀಗ ಅದಕ್ಕೆ ಅರ್ಜಿ ಕರೆದಿದ್ದು, ಟೆಂಡರ್ ಪ್ರಕ್ರಿಯೆ ಆರಂಭಕ್ಕೆ ಸಿದ್ದತೆ ಮಾಡಲಾಗುತ್ತಿದೆ. ‌ಹೆಚ್ಚುವರಿ ಭೂಮಿ ವಾಪಸ್​ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಮೀನಿನ‌ ಕೆಲಭಾಗ ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರ ಮಾಡಿದ್ದು ಅದರ ಹಣವನ್ನೂ ಸಂಬಂಧಪಟ್ಟ ರೈತರಿಗೆ ಹಸ್ತಾಂತರ ಮಾಡುವುದಾಗಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.