ETV Bharat / state

ASIಗೆ ಕಲ್ಲೇಟು:ವಿಕಲಚೇತನ ಮಹಿಳೆಗೆ ಬೂಟು ಕಾಲಿನಿಂದ ಒದ್ದ ಪೊಲೀಸ್ : ವಿಡಿಯೋ ವೈರಲ್​ - asi attack on woman

ಟೋಯಿಂಗ್ ವಾಹನದಲ್ಲಿ ಕೂತಿದ್ದ ಎಎಸ್ಐಗೆ ಕಲ್ಲು ಹೊಡೆದ ವಿಕಲಚೇತನ ಮಹಿಳೆಗೆ ನಡು ರಸ್ತೆಯಲ್ಲಿ ಬೂಟು ಕಾಲಿನಲ್ಲಿ ಒದ್ದು ಎಎಸ್​ಐ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್​
ವಿಡಿಯೋ ವೈರಲ್​
author img

By

Published : Jan 30, 2022, 7:16 AM IST

Updated : Jan 30, 2022, 7:26 AM IST

ಬೆಂಗಳೂರು: ವಿಕಲಚೇತನ ಮಹಿಳೆಯೋರ್ವರಿಗೆ ಎಎಸ್​ಐ ಒಬ್ಬರು ನಡು ರಸ್ತೆಯಲ್ಲಿ ಬೂಟು ಕಾಲಲ್ಲಿ ಒದ್ದು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ಇದಾಗಿದೆ. ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಟೋಯಿಂಗ್ ವಾಹನದ ಸಿಬ್ಬಂದಿ ಮೇಲೆ ಮಹಿಳೆ ಕಲ್ಲು ಬೀಸಿದ್ದಾಳೆ. ಅದು ಎಎಸ್ಐ ಮುಖಕ್ಕೆ ತಾಗಿದ್ದು, ರಕ್ತ ಹರಿದಿದೆ. ಸಿಟ್ಟಿನಿಂದ ಟೋಯಿಂಗ್ ವಾಹನದಿಂದ ಕೆಳಗೆ ಇಳಿದು ಬಂದ ಎಎಸ್ಐ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟು ಕಾಲಿನಲ್ಲಿ ಒದ್ದಿದ್ದಾರೆ.

ವೈರಲ್​ ವಿಡಿಯೋ

ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಎಎಸ್ಐ, ವಿಕಲಚೇತನ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಡಿ ಮಹಿಳೆಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಕ್ಷಮಿಸಿ ಎಂದ್ರು ಕಿವಿಗೊಡದ ಪೊಲೀಸರು: ವಿಕಲಚೇತನ ಆಗಿರುವುದರಿಂದ ಕ್ಷಮಿಸಿ ಬಿಡಿ ಎಂದು ಸಾರ್ವಜನಿಕರು ಪೊಲೀಸರನ್ನು ಕೇಳಿಕೊಂಡರೂ ಸಹ ಆಕೆಯನ್ನು ಬಿಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಮಹಿಳೆಗೆ ಟೋಯಿಂಗ್ ವಾಹನ ಕಂಡರೆ ಸಿಟ್ಟು: ಮಹಿಳೆಗೆ ಟೋಯಿಂಗ್ ವಾಹನ ಕಂಡರೆ ಅಗಲ್ಲ. ಹೀಗಾಗಿ, ಟೋಯಿಂಗ್ ಮಾಡದಂತೆ ಪ್ರತಿ ನಿತ್ಯವೂ ಟೋಯಿಂಗ್ ವಾಹನದ ಮೇಲೆ ಕಲ್ಲು ಎಸೆಯುತ್ತಿದ್ದಳು. ಆದ್ರೆ ಆಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಮೂರು ದಿನದ ಹಿಂದೆ ಆಕೆ ತೂರಿದ ಕಲ್ಲು ಎಎಸ್ಐ ಮುಖಕ್ಕೆ ಬಿದ್ದಿದೆ. ಆ ಸಿಟ್ಟಿನಲ್ಲಿ ಎಎಸ್​ಐ ಬೂಟು ಕಾಲಿನಲ್ಲಿ ಒದ್ದು, ಆ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 30, 2022, 7:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.