ಬೆಂಗಳೂರು: ಅಪರಿಚಿತ ಮಹಿಳೆಯೊಬ್ಬಳು ಪೊಲೀಸ್ ಇನ್ಸ್ಪೆಕ್ಟರ್ಗೆ ವಿಡಿಯೋ ಕಾಲ್ ಮಾಡಿ ಬಳಿಕ ಅಶ್ಲೀಲ ವಿಡಿಯೋದ ಸ್ಕ್ರೀನ್ ಶಾಟ್ ಕಳುಹಿಸಿ, 11ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ಪೊಲೀಸ್ ಇನ್ಸ್ಪೆಕ್ಟರ್ ಸಿ.ದಯಾನಂದ್ ಅವರಿಗೆ ಅಪರಿಚಿತ ಮಹಿಳೆ ವಿಡಿಯೋ ಕಾಲ್ ಮಾಡಿದ್ದಾಳೆ. ಕರೆ ಸ್ವೀಕರಿಸುತ್ತಿದ್ದಂತೆ ಮಹಿಳೆಯ ಅಶ್ಲೀಲ ವಿಡಿಯೋ ನೋಡಿ ದಯಾನಂದ್ ಕರೆ ಸ್ಥಗಿತಗೊಳಿಸಿದ್ದಾರೆ. ಬಳಿಕ ಯುವತಿ ಅಶ್ಲೀಲ ವಿಡಿಯೋದ ಸ್ಕ್ರೀನ್ ಶಾಟ್ ಕಳುಹಿಸಿ,11 ಸಾವಿರ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ. ಒಂದು ವೇಳೆ ಹಣ ಕೊಡದಿದ್ದರೆ, ಅವರ ಫೇಸ್ಬುಕ್ ಸ್ನೇಹಿತರಿಗೆ ಫೋಟೋ ಕಳುಹಿಸುವುದಾಗಿ ಧಮ್ಕಿ ಹಾಕಿದ್ದಾಳೆ.
ಇದನ್ನು ಓದಿ:ಇದ್ದಕ್ಕಿದ್ದಂತೆ ಚಲಿಸಿದ ಟೆಂಪೋ: ಗಾಬರಿಗೊಂಡ ಸಾರ್ವಜನಿಕರು
ಪೊಲೀಸ್ ಇನ್ಸ್ಪೆಕ್ಟರ್ ಸಿ. ದಯಾನಂದ್ ಅವರು ಈ ಸಂಬಂಧ ಸೆಂಟ್ರಲ್ ಸಿಎಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದೇ ತಿಂಗಳ 8 ರಂದು ದಯಾನಂದ್ಗೆ ಅಪರಿಚಿತ ಯುವತಿ ವಿಡಿಯೋ ಕಾಲ್ ಮಾಡಿದ್ದಾಳೆ.