ಬೆಂಗಳೂರು: ಹೊಂಗಸಂದ್ರದ ಜ್ಯೋತಿ ನಿವಾಸ್ ಕಾಲೇಜು ಬಳಿ, ನಿನ್ನೆ ಒಂದೇ ದಿನ 9 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ನಗರವನ್ನು ಬೆಚ್ಚಿ ಬೀಳಿಸಿತ್ತು. ಮೊದಲ ಕೊರೊನಾ ಸೋಂಕಿತನ ಪ್ರಯಾಣ ಹಿಸ್ಟರಿ ಪತ್ತೆಹಚ್ಚಲಾಗಿದ್ದು, ಆತ ಚಿಕಿತ್ಸೆಗಾಗಿ ಅಲೆದಾಡಿದ್ದು ದೃಢವಾಗಿದೆ.
ನಗರದ ಯಾವುದೇ ವ್ಯಕ್ತಿ ಫಿವರ್ ಕ್ಲಿನಿಕ್ ಅಥವಾ ಟೆಲಿ ಹೆಲ್ತ್ ಲೈನ್ಗೆ ಮೊದಲು ತಮ್ಮ ಆರೋಗ್ಯ ಚೆಕ್ ಮಾಡಿಸಿ, ಅಗತ್ಯ ಬಿದ್ದರೆ ಗಂಟಲು ದ್ರವದ ಪರೀಕ್ಷೆ ನಡೆಸಿ ಕೋವಿಡ್ ಸೋಂಕು ದೃಢಪಟ್ಟರೆ ಮಾತ್ರ ವಿಕ್ಟೋರಿಯಾ ಮೊದಲಾದ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಆದ್ರೆ ಹೊಂಗಸಂದ್ರದ ಕೂಲಿ ಕಾರ್ಮಿಕ ಸರಿಯಾದ ಕ್ರಮದಲ್ಲಿ (ಪ್ರಾಪರ್ ಚಾನೆಲ್) ಹೋಗದಿರುವ ಕಾರಣ ವಿಕ್ಟೋರಿಯಾದಲ್ಲಿ ಆತನಿಗೆ ಚಿಕಿತ್ಸೆ ನಿರಾಕರಿಸಲಾಗಿದೆ.
ಹೊಂಗಸಂದ್ರದ ಮೊದಲ ಕೋವಿಡ್ ಪೇಶೆಂಟ್ ಓಡಾಟದ ಜಾಲ ಹೀಗಿದೆ:
- ಬಿಹಾರದಿಂದ ಬಂದಿದ್ದ ವಲಸೆ ಕೂಲಿ ಕಾರ್ಮಿಕ ಸಣ್ಣ ಮನೆಯಲ್ಲಿ ಒಬ್ಬನೇ ತಂಗಿದ್ದ.
- ಅವರ ಊರಿನ ಕಡೆಯವರು ಅಕ್ಕ ಪಕ್ಕದಲ್ಲಿ ಇದ್ದರು, ಅವರೆಲ್ಲಾ ಊಟವನ್ನ ಇತನ ಮನೆಯಲ್ಲಿ ಮಾಡ್ತಾ ಇದ್ದರು.
- ಒಟ್ಟು 50 ಜನ ಬಿಹಾರ ಮೂಲದವರು ಇದ್ದಾರೆ ಎನ್ನಲಾಗ್ತಿದೆ.
- ಅಲ್ಲಿಗೆ ಅವರ ಮಾಲೀಕ ದಿನಸಿ ವ್ಯವಸ್ಥೆ ಮಾಡಿದ್ದ.
- ಕೋಲ್ಡ್ ಹಾಗೂ ಕಫದಿಂದಾಗಿ ಲಕ್ಷಣ ಕಾಣಿಸಿಕೊಂಡಿದೆ.
- ಏರಿಯಾದಲ್ಲಿ ಒಂದು ದಿನ ಆಟೋದಲ್ಲಿ ಪ್ರಯಾಣಿಸಿ ಖಾಸಗಿ ಆಸ್ಪತ್ರೆಯಲ್ಲಿ (ವೇಣು ಹೆಲ್ತ್ ಕೇರ್ ಸೆಂಟರ್) ದಾಖಲಾಗಿ ಚಿಕಿತ್ಸೆ ಪಡೆಯಲಾಗಿದೆ.
- ವೈದ್ಯರ ಸಲಹೆ ಮೇರೆಗೆ ಜಯದೇವ ಆಸ್ಪತ್ರಗೆ ಕರೆದ್ಯೊಯಲಾಗಿದೆ.
- ಹೃದಯ ಸಂಬಂಧಿ ಕಾಯಿಲೆ ಇಲ್ಲದಿರುವುದರಿಂದ ವಿಕ್ಟೋರಿಯಾಗೆ ಸೂಚಿಸಲಾಗಿದೆ.
- ಆದ್ರೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸದೇ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸ್ (RGICD) ಗೆ ದಾಖಲಾಗಲು ಸೂಚಿಸಲಾಗಿತ್ತು.
- ವ್ಯಕ್ತಿ ಮತ್ತೆ ಅಲ್ಲಿಂದ ಕಿಮ್ಸ್ ಆಸ್ಪತ್ರೆಗೆ ಹೋದ ಕಾರಣ ಅಡ್ಮಿಟ್ ಮಾಡದೆ ನಿರಾಕರಿಸಲಾಗಿತ್ತು. ಬಳಿಕ ಅದೇ ದಿನ RGICD ಗೆ ದಾಖಲಾಗಿ ಗಂಟಲು ದ್ರವದ ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಯಿತು.