ETV Bharat / state

ಮಾಧ್ಯಮಗಳಲ್ಲಿ ಅತ್ಯಂತ ಯೋಗ್ಯ, ಎಚ್ಚರಿಕೆಯಿಂದ ವರದಿ ಪ್ರಕಟಿಸುವ ನಿರೀಕ್ಷೆಯಿದೆ: ಹೈಕೋರ್ಟ್

author img

By

Published : Aug 3, 2023, 3:42 PM IST

ವಕೀಲರ ನಿರ್ಣಯವನ್ನು ತಾಲಿಬಾನ್ ಮನಸ್ಥಿತಿ ಎಂಬುದಾಗಿ ವರದಿ ಮಾಡಿದ್ದ ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರ ವಿರುದ್ಧ ಇದ್ದ ಪ್ರಕರಣವನ್ನು ಹೈಕೋರ್ಟ್​ ನ್ಯಾಯಪೀಠ ರದ್ದುಗೊಳಿಸಿ ಆದೇಶಿಸಿದೆ.

High Court
ಹೈಕೋರ್ಟ್​

ಬೆಂಗಳೂರು: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರಲಿದ್ದು, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಜವಾಬ್ದಾರಿ ಪತ್ರಕರ್ತರ ಮೇಲಿರಲಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಅತ್ಯಂತ ಯೋಗ್ಯ ವಿಧಾನದಲ್ಲಿ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿರುವ ಪ್ರಕರಣ ರದ್ದು ಕೋರಿ ವಿವಿಧ ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಮಾಧ್ಯಮಗಳಲ್ಲಿ ತಾಲಿಬಾನ್, ಗೂಂಡಾ, ಪುಂಡಾಟಿಕೆ ಎಂಬ ಪದಗಳ ಬಳಕೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.

ಪತ್ರಕರ್ತರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕರ ಅಗತ್ಯತೆಗಳನ್ನು ಪೂರೈಸುತ್ತವೆ. ಈ ಸುದ್ದಿಗಳು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ. ಹೀಗಾಗಿ ಸುದ್ದಿ ಮಾಧ್ಯಮಗಳು ಪ್ರೆಸ್‌ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚಿಸಿದೆ.

ಪತ್ರಿಕಾರಂಗ ಮತ್ತು ಪತ್ರಕರ್ತರನ್ನು ಪ್ರಜಾಪ್ರಭುತ್ವದ 4ನೇ ಅಂಗ ಎಂಬುದಾಗಿ ಕರೆಯಲಾಗುತ್ತದೆ. ಹೀಗಾಗಿ ಸುದ್ದಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಪ್ರಕಟಿಸುವ ಮೂಲಕ ತನ್ನ ಕಾರ್ಯವನ್ನು ನಿರ್ವಹಣೆ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪತ್ರಿಕೆಯಲ್ಲಿ ಪ್ರಕಟಿಸಿದ ಸುದ್ದಿಯನ್ನು ದೃಢೀಕರಣ ಅಥವಾ ಪರಿಶೀಲಿಸಿದ ಬಳಿಕ ಸತ್ಯವೆಂದು ನಂಬುವಂತ ವರ್ಗ ಇಂದಿಗೂ ಸಮಾಜದಲ್ಲಿ ಇದೆ. ಮಾಧ್ಯಮಗಳ ಮೇಲೆ ದೇಶದ ಜನ ಸಾಮಾನ್ಯರು ವಿಶ್ವಾಸವಿಟ್ಟಿರುವ ಸಂದರ್ಭದಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಅಸಂಸದೀಯ ಅಥವಾ ಅವಹೇಳನಾಕಾರಿ ಪದಗಳನ್ನು ಬಳಸುವಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಾರ್ಯನಿರ್ವಹಿಸುವವರ ಜವಾಬ್ದಾರಿ ಮೇಲಿದೆ. ಅತ್ಯಂತ ಸಂಯಮದಿಂದ ತನ್ನ ಕಾರ್ಯವನ್ನು ನಿರ್ವಹಿಸಬೇಕು ಎಂದು ಪೀಠ ಹೇಳಿದೆ.

ಪ್ರಸ್ತುತದ ಪ್ರಕರಣ 2012ರಲ್ಲಿ ನಡೆದಿದೆ. ಈಗಾಗಲೇ ಅರ್ಜಿದಾರರು ಪ್ರಮಾಣ ಪತ್ರದ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದು, ಮುಂದೆ ಈ ರೀತಿಯ ಘಟನೆಗಳನ್ನು ಪುನರಾವರ್ತನೆ ಮಾಡದಂತೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸುತ್ತಾರೆ ಎಂಬುದಾಗಿ ಭರವಸೆಯಿದೆ ಎಂದು ತಿಳಿಸಿ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು ? 2012 ರಲ್ಲಿ ವಕೀಲರು ಮತ್ತು ಪತ್ರಕರ್ತರ ನಡುವಿನ ಸಂಘರ್ಷದ ಬಳಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ಪತ್ರಕರ್ತರನ್ನು ನ್ಯಾಯಾಲಯಗಳಲ್ಲಿ ಪ್ರತಿನಿಧಿಸದಿರಲು ವಕೀಲರ ಸಂಘಗಳು ನಿರ್ಧರಿಸಿದ್ದವು. ಈ ಸಂಬಂಧದ ಶಾಸನ ಸಭೆಯಲ್ಲಿ ಚರ್ಚೆಯಲ್ಲಿ ಶಾಸಕರೊಬ್ಬರು ವಕೀಲರ ಸಂಘದ ನಿರ್ಧಾರವನ್ನು ತಾಲೀಬಾನ್ ಮನಸ್ಥಿತಿಯಿಂದ ಕೂಡಿದೆ ಎಂಬುದಾಗಿ ತಿಳಿಸಿದ್ದರು.

ಈ ಸುದ್ದಿಯನ್ನು ವರದಿ ಮಾಡುವ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳು ತಮ್ಮ ಪತ್ರಿಕೆಗಳಲ್ಲಿ ವಕೀಲರ ಸಮುದಾಯವನ್ನು ಗೂಂಡಾ ಮನಸ್ಥಿತಿಯುಳ್ಳವರು ಎಂಬುದಾಗಿ ಪ್ರಕಟಿಸಿದ್ದವು. ಅಲ್ಲದೇ ಕೆಲವು ಪತ್ರಿಕೆಗಳು ಶಾಸಕರು ಹೇಳಿದ ಮಾತುಗಳನ್ನು ಪುನರುಚ್ಚರಿಸಿ ಪ್ರಕಟಿಸಿದ್ದವು.

ಈ ಕ್ರಮದ ವಿರುದ್ಧ ವಕೀಲ ದಾವಲಸಾಬ್ ನದಾಫ್ ಎಂಬುವರು ಈ ಸುದ್ದಿಯನ್ನು ಪ್ರಕಟಿಸಿದ್ದ ಮಾಧ್ಯಮಗಳ ವಿರುದ್ಧ ಮಾನನಷ್ಟ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಕ್ರಮ ಕೈಗೊಳ್ಳುವಂತೆ ಖಾಸಗಿ ದೂರು ದಾಖಲಿಸಿದ್ದರು. ಇದನ್ನು ರದ್ದುಕೋರಿ ಪತ್ರಕರ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಕೀಲರ ವಿರುದ್ಧ ಅವಹೇಳನಾಕಾರಿ ರೀತಿಯಲ್ಲಿ ವರದಿ ಮಾಡಬೇಕು ಎಂಬ ಉದ್ದೇಶ ಯಾವುದೇ ಪತ್ರಕರ್ತರಿಗೆ ಇರಲಿಲ್ಲ. ಶಾಸನ ಸಭೆಯಲ್ಲಿ ಏನು ನಡೆಯಿತು ಎಂಬುದಕ್ಕೆ ಸಂಬಂಧಿಸಿದಂತೆ ವರದಿ ಮಾಡುವ ಸಂದರ್ಭದಲ್ಲಿ ಕೆಲ ವರದಿಗಾರರು ಮಾರ್ಗಸೂಚಿಗಳನ್ನು ಮೀರಿ ವರದಿ ಮಾಡಿ ಕೆಲ ಅಸಾಂವಿಧಾನಿಕ ಪದಗಳನ್ನು ಬಳಸಿರಬಹುದು. ಇದಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂದು ವಿವರಿಸಿದ್ದರು.

ಅಲ್ಲದೇ ಭವಿಷ್ಯದಲ್ಲಿ ಈ ರೀತಿಯ ವರದಿಯ ಮಾಡುವುದಿಲ್ಲ ಎಂಬುದಾಗಿ ಪ್ರಮಾಣಪತ್ರದ ಮೂಲಕ ನ್ಯಾಯಾಲಯಕ್ಕೆ ಭರವಸೆಯನ್ನೂ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನೂಓದಿ: ಸಿಬಿಎಸ್​​​​​​ಸಿ, ಸಿಐಎಸ್‌ಸಿಇ ಪಠ್ಯಕ್ರಮಕ್ಕೆ ಕನ್ನಡ ಕಡ್ಡಾಯ ಕಾನೂನು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.