ಬೆಂಗಳೂರು: ಕೇಂದ್ರ ಸರ್ಕಾರವು 15 ರಿಂದ 20 ವರ್ಷಗಳ ಹಳೆಯ ವಾಹನಗಳ ಮೇಲೆ ಗುಜರಿ ನೀತಿ ತರಲು ಮುಂದಾಗಿದೆ.
ಈ ನೀತಿಯಿಂದ ಯಾರಿಗೆ ಲಾಭ ಯಾರಿಗೆ ನಷ್ಟ? ಈ ಸ್ಕ್ರಾಪ್ ನೀತಿ ವಾಣಿಜ್ಯ ಸೇವೆಗಳ ಬಳಕೆಯಲ್ಲಿ ಇರುವ ವಾಹನಗಳಿಗೆ ಸೂಕ್ತ. ಆದರೆ, ಸ್ವಂತ ವಾಹನ ಹೊಂದಿರುವ ಸಾರ್ವಜನಿಕರಿಗೆ ಯಾಕೆ ಎನ್ನುವ ಪ್ರಶ್ನೆಗಳು ಮೂಡುತ್ತಿವೆ.
ಈ ಸಂಬಂಧ ಆರ್ಟಿಒ ಇಲಾಖೆಯ ನಿವೃತ್ತ ಅಧಿಕಾರಿ ಸೈಯದ್ ಶಾಫಿ ಅಹಮ್ಮದ್ ಮಾತನಾಡಿದ್ದು, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕಬೇಕು ಎಂದು ಕಾನೂನು ತರುತ್ತಿರುವುದು ಒಳ್ಳೆಯದು. ವಾಹನಗಳಿಂದ ಹೊರಸೂಸುವ ಹೊಗೆಯ ಮಾಲಿನ್ಯ ನಿಯಂತ್ರಣದ ಜೊತೆಗೆ ಪರಿಸರಕ್ಕೆ ಉತ್ತಮವಾಗುತ್ತದೆ. ಆದರೆ, ಈ ನೀತಿಯನ್ನು ಎಲ್ಲರ ಮೇಲೂ ಹೇರುವುದು ತಪ್ಪು ಎಂದರು.
ಭಾರತದಲ್ಲಿ ಭಾಗಶಃ ಮಾಧ್ಯಮ ವರ್ಗದವರು ಹೆಚ್ಚಾಗಿದ್ದಾರೆ. ಸಾಲ ಮಾಡಿ ಬ್ಯಾಂಕ್ನಲ್ಲಿ ಲೋನ್ ಪಡೆದು ವಾಹನ ಖರೀದಿಸುತ್ತಾರೆ. ಹೀಗೆ ಖರೀದಿಸಿದ ಬಹುತೇಕರು ಉತ್ತಮ ಸ್ಥಿತಿಯಲ್ಲಿ ಇಟ್ಟಕೊಂಡು ಇರುತ್ತಾರೆ. ಹೀಗಾಗಿ, ವಾಣಿಜ್ಯ ಹಾಗೂ ಪರ್ಸನಲ್ ಬಳಕೆಯ ವಾಹನಗಳಿಗೆ ಒಂದೇ ರೀತಿಯ ನೀತಿ ತರಲು ಆಗಲ್ಲ. ಏಕೆಂದರೇ ಪರ್ಸನಲ್ ವಾಹನಗಳು ಹೆಚ್ಚಾಗಿ ಬಳಕೆ ಆಗಿರುವುದಿಲ್ಲ. ಶೇ 80-90ರಷ್ಟು ಅತ್ಯಧಿಕವಾಗಿ ಬಳಕೆ ಆಗುವುದು ವಾಣಿಜ್ಯ ವಾಹನಗಳು. ಟ್ಯಾಕ್ಸಿ, ಬಸ್, ಲಾರಿ ಇತರೆ ವಾಹನಗಳಿಗೆ ಈ ಸ್ಕ್ಯಾಪ್ ನೀತಿ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.