ಬೆಂಗಳೂರು: ಕೋವಿಡ್ 19 ಸೋಂಕು ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಸುಮಾರು 38 ಗಂಟೆಗಳ ಕಾಲನಗರದ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಇಂದು ಬೆಳಗ್ಗೆಯಿಂದ ವಾಹನ ಸಂಚಾರ, ವ್ಯಾಪಾರ ವಹಿವಾಟು ಆರಂಭವಾಗಿದೆ.
ಸೋಮವಾರ ಕೂಡ ಲಾಕ್ ಡೌನ್ ಮುಂದುವರೆಯುತ್ತದೆ ಎಂಬ ಭೀತಿಯಲ್ಲಿ ಬಹುತೇಕ ಮಂದಿ ಸಿಲಿಕಾನ್ ಸಿಟಿಯನ್ನ ಬಿಟ್ಟು ತಮ್ಮ ಊರುಗಳ ಕಡೆಗೆ ಶನಿವಾರ ಪ್ರಯಾಣ ಬೆಳೆಸಿದ್ರು. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಕಾರಣ 38 ಗಂಟೆಗಳ ಕಾಲ ಅನಗತ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿತ್ತು.